Posts

Showing posts with the label ಅಂಗದಲ್ಲಿ

ವಚನ ದಾಸೋಹ :ಸಾಕಾರ ಹದಿನೆಂಟು ಸ್ಥಲ, ಅಂಗದಲ್ಲಿ

Image
ವಚನ ದಾಸೋಹ : ಸಾಕಾರ ಹದಿನೆಂಟು ಸ್ಥಲ, ಅಂಗದಲ್ಲಿ ವಚನ: ಸಾಕಾರ ಹದಿನೆಂಟು ಸ್ಥಲ, ಅಂಗದಲ್ಲಿ ಆಚರಿಸುತ್ತ ಅಲ್ಲಲ್ಲಿಗೆ ಭಕ್ತಿ, ಅಲ್ಲಲ್ಲಿಗೆ ಮಹೇಶ್ವರ, ಅಲ್ಲಲ್ಲಿಗೆ ಪ್ರಸಾದಿಯಾಗಿಪ್ಪ ಆ ಸಾಕಾರವೇನೆಂದು ಉಪಸುವೆನಯ್ಯಾ? ನಿರಾಕಾರ ಹದಿನೆಂಟು ಸ್ಥಲವ ಆತ್ಮನಲ್ಲಿ ಆಚರಿಸುತ್ತ ಅಲ್ಲಲ್ಲಿಗೆ ಪ್ರಾಣಲಿಂಗಿ,  ಅಲ್ಲಲ್ಲಿಗೆ ಶರಣ, ಅಲ್ಲಲ್ಲಿಗೆ ಐಕ್ಯನಾಗಿರ್ಪ ಆ ನಿರಾಕಾರವನೇನೆಂದು ಉಪಮಿಸುವೆನಯ್ಯ?  ಆ ಸಾಕಾರ ಹದಿನೆಂಟು ಸ್ಥಲವ ಅಂಗದಲ್ಲಿ ಆಚರಿಸುವುದು ಭಕ್ತಸ್ಥಲ, ಆ ನಿರಾಕಾರ ಹದಿನೆಂಟು ಸ್ಥಲ ಆತ್ಮನಲ್ಲಿ ಆಚರಿಸುವುದು ಜಂಗಮ ಸ್ಥಲ. ಇಂತೀ ಉಭಯ ಸ್ಥಲ ಒಂದಾಗಿ ನಿಂದ ನಿಜದ ನಿಲವು ನಮ್ಮ ಕೂಡಲ ಸಂಗಯ್ಯನಲ್ಲಿ ಲಿಂಗೈಕ್ಯವು.  - ಗುರು ಬಸವಣ್ಣನವರು *ಅರ್ಥ*: ಶಿವಯೋಗ ಎಂಬುದು ಸಾಧಕ ಶಿವನೇ ಆಗಿ ವಿಕಾಸಗೊಳ್ಳುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಅನುಸರಿಸುವ ಪಥವೇ ಷಟ್ಸ್ಥಲ. ಷಟ್ಸ್ಥಲ ವೆಂದರೆ ಸಾಧಕ ಅಜ್ಞಾನ ಸ್ಥಿತಿಯಿಂದ ಪರಮ ಸುಜ್ಞಾನ ಸ್ಥಿತಿಯೆಡೆಗೆ ತಲುಪಲು ಅನುಸರಿಸಬೇಕಾದ ದಿವ್ಯಪಥ. ಸ್ಥಲ ಎನ್ನುವ ಪದಕ್ಕೆ ಸ್ಥಾನ, ಮೆಟ್ಟಿಲು ಎಂಬ ಅರ್ಥವಿದೆ. ಸ್ಥಲವೆಂದರೆ ಈ ಪಥದಲ್ಲಿ ನಿರ್ಮಿತವಾದ ವಿವಿಧ ಹಂತಗಳು ಅಥವಾ ಮೆಟ್ಟಿಲುಗಳು. ಈ ಹಂತಗಳು ಆರು, ಒಟ್ಟಾರೆ ಇವನ್ನು ಷಟ್ಸ್ಥಲಗಳೆಂದು ಸೂಚಿಸುವುದು ರೂಢಿ. ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯಗಳೇ ಇವು.  ಷಟ್ಸ್ಥಲ ವಿಂಗಡನೆ ವಿಪುಲವಾದ ...