Posts

Showing posts with the label ಅಷ್ಟಾವರಣ - ರುದ್ರಾಕ್ಷಿ

ಅಷ್ಟಾವರಣ - ರುದ್ರಾಕ್ಷಿ

Image
  ಅಷ್ಟಾವರಣ  -  ರುದ್ರಾಕ್ಷಿ *ಅಷ್ಟಾವರಣ - ರುದ್ರಾಕ್ಷಿ : ರುದ್ರಾಕ್ಷಿ ಇದು ಸಾಧಕನನ್ನು ರಕ್ಷಿಸುವ ಪವಿತ್ರ ವಸ್ತು ಎಂದು ಪರಿಗಣಿಸಲ್ಪಟ್ಟು ಅಷ್ಟಾವರಣದಲ್ಲಿ ಸ್ಥಾನ ಪಡೆದಿದೆ. ಶರಣಧರ್ಮದಲ್ಲಿ ವಿಭೂತಿ ಮತ್ತು ರುದ್ರಾಕ್ಷಿ ಬಹಿರಂಗದ ಆಚರಣೆಗಳಾದರೂ ಅವನ್ನು ಅಂತರಂಗದ ಅನುಭಾವಕ್ಕೆ ಪ್ರೇರಕ ಶಕ್ತಿಯಾಗಿ ಅಳವಡಿಸಿಕೊಳ್ಳಲಾಗಿದೆ. ಶಿವಪರಮಾತ್ಮನ ಉಪಾಸನೆಯಲ್ಲಿ ರುದ್ರಾಕ್ಷಕ್ಕೆ ಅತ್ಯಂತ ಪ್ರಮುಖ ಸ್ಥಾನ. ”ರುದ್ರ” ಹಾಗೂ “ಅಕ್ಷ” ಈ ಎರಡು ಪದಗಳಿರುವ ಶಬ್ದ ರುದ್ರಾಕ್ಷ, ಅಂದರೆ ರುದ್ರನ ಕಣ್ಣು. ”ರುದ್ರಸ್ಯ ಅಕ್ಷಿಃ ರುದ್ರಾಕ್ಷಃ”. ರುದ್ರಾಕ್ಷಿಯಲ್ಲಿ ವಿಶೇಷ ಕಂಪನದ ಪ್ರಭಾವವಿದ್ದು, ದೈವಿಕ ಶಕ್ತಿ ಇದೆ ಎಂದು ನಂಬಲಾಗುತ್ತದೆ. ಗುರು ಬಸವಣ್ಣನವರು 'ಎನ್ನ ಮುಕ್ತಿಪಥಕ್ಕೆ ಶ್ರೀಮಹಾರುದ್ರಾಕ್ಷಿಯೆ ಸಾಧನವಯ್ಯಾ' ಎಂದು ರುದ್ರಾಕ್ಷಿ ಮಹಿಮೆಯನ್ನು ವರ್ಣಿಸಿದ್ದಾರೆ. #ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು, ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣವು, ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಾಧನವು, ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ, ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾಪಕ್ಷಯವು. ಅಯ್ಯಾ ನಿಮ್ಮ ಪಂಚವಕ್ತ್ರಂಗಳೆ ಪಂಚಮುಖದ ರುದ್ರಾಕ್ಷಿಗಳಾದವಾಗಿ, ಅಯ್ಯಾ ಕೂಡಲಸಂಗಮದೇವಯ್ಯಾ, ಎನ್ನ ಮುಕ್ತಿಪಥಕ್ಕೆ ಶ್ರೀಮಹಾರುದ್ರಾಕ್ಷಿಯೆ ಸಾಧನವಯ್ಯಾ. / 63 ಶರಣರಲ್ಲಿ ನೈತಿಕ ನಿಯಮ ನಿ...