Posts

Showing posts with the label ಆದ್ಯಾತ್ಮ

ಆದ್ಯಾತ್ಮ

Image
ಆಧ್ಯಾತ್ಮ ( Ādhyātma, Spirituality ) * ಆಧ್ಯಾತ್ಮ ಎಂದರೆ ಅಂತರ್ಮುಖಿ ಅನ್ವೇಷಣೆ ಹಾಗೂ ಪರಿಶೋಧನೆ. * ಆತ್ಮಾನಂ ವಿದ್ಧಿ ( ನಿನ್ನನ್ನು ನೀನು ಅರಿ). * ಆಧ್ಯಾತ್ಮದ ಆರಂಭ ಮತ್ತು ಕೇಂದ್ರ  ಮನುಷ್ಯ. ದೇವರಲ್ಲ, ಜಾತಿ ಮತ  ಧರ್ಮವಂತೂ ಮೊದಲೇ ಅಲ್ಲ. * ಆದ್ಯಾತ್ಮ ಅಂದರೆ ಮತಾಂಧತೆ ಅಥವಾ ಯಾವುದೇ ಮತಿಯವಾದವೂ ಅಲ್ಲ. * ನಾವು ಪ್ರಕೃತಿಯಲ್ಲಿ ಬೆರೆತು ಸಮರಸವಾಗಿ ಬಾಳುವುದೂ ಆಧ್ಯಾತ್ಮ. * ಪ್ರಕೃತಿಯಲ್ಲಿನ ಪರಮ ರಹಸ್ಯವನ್ನು ಪರಿಶೋಧನೆ ಮಾಡುವುದೂ ಆಧ್ಯಾತ್ಮ. * ಅರಿವಿನ ಬೆಳಕಿನತ್ತ  ಹೊರಡುವುದು ಆಧ್ಯಾತ್ಮ. * ಕೋಹಂ ಅಂದರೆ ನಾನು ಯಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುವೆ? ಪ್ರಶ್ನೆಗಳಿಗೆ ಉತ್ತರ ಹುಡುಕುವುದೂ ಆಧ್ಯಾತ್ಮ. * ಆಧ್ಯಾತ್ಮವು  ನಮಗೆ ದೇಹ, ಮನಸ್ಸು, ಬುದ್ಧಿ, ಅನುಭವ, ನಮ್ಮ ಸೀಮಿತ ಶಕ್ತಿಯ ಪಂಚೇಂದ್ರಿಯಗಳನ್ನು ಮೀರಿದ ಪರಮ ಸತ್ಯ ಒಂದು ಇದೆ  ಎಂದು ಕಲಿಸುತ್ತದೆ.  * ಯಾವುದೇ ಗುಡಿಗುಂಡಾರ, ಚರ್ಚ, ಮಸೀದೆಯಲ್ಲಿ  ಆಧ್ಯಾತ್ಮ ಸಿಗುವದಿಲ್ಲ. * ಆಧ್ಯಾತ್ಮ ದಲ್ಲಿ ಲಿಂಗ, ವರ್ಗ, ಜಾತಿ, ಮತ  ಧರ್ಮ ಬೇಧವಿಲ್ಲ.  * ಆಧ್ಯಾತ್ಮದಲ್ಲಿ ವಿರಕ್ತ, ಸಾಂಸಾರಿಕವೆಂಬ ಬೇಧವಿಲ್ಲ.  ಜೀವನವನ್ನು ದೇವರ, ಪ್ರಕೃತಿಯ ಪ್ರಸಾದವೆಂದು ಕೃತಜ್ಞತೆಯಿಂದ  ಅನುಭವಿಸುವುದು ಆಧ್ಯಾತ್ಮ. * ನಮ್ಮ ಎಲ್ಲರೊಳಗಿರುವ ಪರಮಾತ್ಮ ಒಬ್ಬನೇ ಎಂದು ತಿಳಿಯುವುದು ಆಧ್ಯಾತ್ಮ. * ಮೇ...