ಆದ್ಯಾತ್ಮ


ಆಧ್ಯಾತ್ಮ (Ādhyātma, Spirituality)

* ಆಧ್ಯಾತ್ಮ ಎಂದರೆ ಅಂತರ್ಮುಖಿ ಅನ್ವೇಷಣೆ ಹಾಗೂ ಪರಿಶೋಧನೆ.

* ಆತ್ಮಾನಂ ವಿದ್ಧಿ ( ನಿನ್ನನ್ನು ನೀನು ಅರಿ).

* ಆಧ್ಯಾತ್ಮದ ಆರಂಭ ಮತ್ತು ಕೇಂದ್ರ 
ಮನುಷ್ಯ. ದೇವರಲ್ಲ, ಜಾತಿ ಮತ 
ಧರ್ಮವಂತೂ ಮೊದಲೇ ಅಲ್ಲ.

* ಆದ್ಯಾತ್ಮ ಅಂದರೆ ಮತಾಂಧತೆ ಅಥವಾ ಯಾವುದೇ ಮತಿಯವಾದವೂ ಅಲ್ಲ.

* ನಾವು ಪ್ರಕೃತಿಯಲ್ಲಿ ಬೆರೆತು ಸಮರಸವಾಗಿ ಬಾಳುವುದೂ ಆಧ್ಯಾತ್ಮ.

* ಪ್ರಕೃತಿಯಲ್ಲಿನ ಪರಮ ರಹಸ್ಯವನ್ನು ಪರಿಶೋಧನೆ ಮಾಡುವುದೂ ಆಧ್ಯಾತ್ಮ.

* ಅರಿವಿನ ಬೆಳಕಿನತ್ತ  ಹೊರಡುವುದು ಆಧ್ಯಾತ್ಮ.

* ಕೋಹಂ ಅಂದರೆ ನಾನು ಯಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುವೆ? ಪ್ರಶ್ನೆಗಳಿಗೆ ಉತ್ತರ ಹುಡುಕುವುದೂ ಆಧ್ಯಾತ್ಮ.

* ಆಧ್ಯಾತ್ಮವು  ನಮಗೆ ದೇಹ, ಮನಸ್ಸು, ಬುದ್ಧಿ, ಅನುಭವ, ನಮ್ಮ ಸೀಮಿತ ಶಕ್ತಿಯ ಪಂಚೇಂದ್ರಿಯಗಳನ್ನು ಮೀರಿದ ಪರಮ ಸತ್ಯ ಒಂದು ಇದೆ  ಎಂದು ಕಲಿಸುತ್ತದೆ. 

* ಯಾವುದೇ ಗುಡಿಗುಂಡಾರ, ಚರ್ಚ, ಮಸೀದೆಯಲ್ಲಿ  ಆಧ್ಯಾತ್ಮ ಸಿಗುವದಿಲ್ಲ.

* ಆಧ್ಯಾತ್ಮ ದಲ್ಲಿ ಲಿಂಗ, ವರ್ಗ, ಜಾತಿ, ಮತ  ಧರ್ಮ ಬೇಧವಿಲ್ಲ. 

* ಆಧ್ಯಾತ್ಮದಲ್ಲಿ ವಿರಕ್ತ, ಸಾಂಸಾರಿಕವೆಂಬ ಬೇಧವಿಲ್ಲ.  ಜೀವನವನ್ನು ದೇವರ, ಪ್ರಕೃತಿಯ ಪ್ರಸಾದವೆಂದು ಕೃತಜ್ಞತೆಯಿಂದ  ಅನುಭವಿಸುವುದು ಆಧ್ಯಾತ್ಮ.

* ನಮ್ಮ ಎಲ್ಲರೊಳಗಿರುವ ಪರಮಾತ್ಮ ಒಬ್ಬನೇ ಎಂದು ತಿಳಿಯುವುದು ಆಧ್ಯಾತ್ಮ.

* ಮೇಲು ಕೀಳು ಭಾವನೆ ಇಲ್ಲದಿರುವುದು ಆಧ್ಯಾತ್ಮ.

* ನಾನು ಎಂಬ ಅಹಂ ಬಿಟ್ಟು, ನಾನು ಪ್ರಕೃತಿಯ ಭಾಗ ಎಂದು ತಿಳಿಯುವುದು ಆಧ್ಯಾತ್ಮ.

* ಆಧ್ಯಾತ್ಮವು  ಸಾಧಕ ಅಥವಾ ಅನ್ವೇಷಕ (seekar) ಕೇಂದ್ರೀಕೃತ. 

* ನಿಷ್ಕಳಂಕ ಪರಿಪೂರ್ಣತೆ, ಅರಿವು ಪ್ರಜ್ಞೆಗಳಿಂದ ತನ್ನಲ್ಲಿಯೇ ಇರುವ ಪರಮಾತ್ಮನಲ್ಲಿ ಸಮರಸದಿಂದ ಜೀವಿಸಿ, ಅವನಲ್ಲಿಯೇ ಐಕ್ಯ ಹೊಂದಿ, ಮುಕ್ತ ಮುಕ್ತ ನಾಗುವುದೇ ಆಧ್ಯಾತ್ಮ.

* ಮುಕ್ತನಾಗಿ ಜೀವಿಸುವುದು ಆಧ್ಯಾತ್ಮ.

Spirituality:
Spirituality involves the recognition of a feeling or sense or belief that there is something greater than myself, something more to being human than sensory experience, and that the greater whole of which we are part is cosmic or divine in nature. Spirituality gives a sense of peace, wholeness and balance among the physical, emotional, social and spiritual aspects of our lives.
-✍️ Dr Prema Pangi
#ಆಧ್ಯಾತ್ಮ, #ಪ್ರೇಮಾ_ಪಾಂಗಿ, #Spirituality

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma