Posts

Showing posts with the label ಕರ್ಮಯೋಗ : ಕರ್ಮಣ್ಯೇವಾಧಿಕಾರಸ್ತೇ_ಮಾ_ಫಲೇಷು

ಕರ್ಮಯೋಗ : ಕರ್ಮಣ್ಯೇವಾಧಿಕಾರಸ್ತೇ_ಮಾ_ಫಲೇಷು

Image
ಕರ್ಮಯೋಗ :  ಕರ್ಮಣ್ಯೇವಾಧಿಕಾರಸ್ತೇ_ಮಾ_ಫಲೇಷು ಶ್ರೀಮದ್ಭಗವದ್ಗೀತೆಯ ಎರಡನೇ ಅಧ್ಯಾಯ ಸಾಂಖ್ಯಯೋಗದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುವ ಶ್ಲೋಕಗಳು. ಶ್ಲೋಕ 47: #ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||೪೭|| -ಭಗವದ್ಗೀತಾ ಅರ್ಥ: ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷಿಯಾಗಿ ಫಲಕ್ಕೆ ಕಾರಣನೂ ತಾನೆಂದುಕೊಳ್ಳಬೇಡ ಮತ್ತು ಕರ್ಮ( ಕರ್ತವ್ಯ) ಮಾಡದೇ ಇರಬೇಕೆಂಬ ಹಂಬಲ ನಿನ್ನಲ್ಲಿ ಉಂಟಾಗದಿರಲಿ. ಶ್ಲೋಕ 48: #ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ | ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ ||೪೮|| -ಭಗವದ್ಗೀತಾ ಅರ್ಥ : ಗೆಲವು-ಸೋಲುಗಳಿಗೆ ಕುಂದದೆ ಎರಡನ್ನೂ ಸಮಾನಚಿತ್ತದಿಂದ ಸ್ವೀಕರಿಸುತ್ತ ನಿನ್ನ ಕರ್ತವ್ಯಗಳನ್ನು ಮಾಡು. ಈ ಸಮತ್ತ್ವಭಾವವೇ ಯೋಗ ಎಂದು ಕರೆಯಲ್ಪಡುತ್ತದೆ. ಎಂಬುದು ಈ  ಅರ್ಥ. ಜಯ-ಅಪಜಯ, ಕೀರ್ತಿ-ಅಪಕೀರ್ತಿ, ನೋವು-ನಲಿವು  ಇವೆಲ್ಲವನ್ನೂ ಅನುಭವಿಸುವ ಮನಸ್ಸು ಸ್ಥಿರವಾಗಿರಬೇಕು.  ಗೆಲುವು-ಸೋಲುಗಳಿಗೆ ಸಮನಾದ ಭಾವವನ್ನು ಹೊಂದುವ ಮನಸ್ಥಿತಿ ನಮ್ಮದಾಗಬೇಕು. *ಶ್ಲೋಕಗಳ ಚಿಂತನೆ*: ಇಲ್ಲಿ ಕರ್ಮದ ಅರ್ಥ *ಕಾರ್ಯ ಅಥವಾ ಕರ್ತವ್ಯಕ್ಕೆ*.  ಕರ್ತವ್ಯನಿರತನಿಗೆ ಜಯಾಪಜಯಗಳ  ಭಯ ಇರಬಾರದು. ಆಗುಹೋಗುಗಳ ಭಯ ಇರಬಾರದು....