ವಚನ ದಾಸೋಹ: ರೂಪನೆ ಕಂಡರು, ನಿರೂಪ ಕಾಣರು.
ವಚನ ದಾಸೋಹ: ರೂಪನೆ ಕಂಡರು, ನಿರೂಪ ಕಾಣರು. ವಚನ: #ರೂಪನೆ ಕಂಡರು, ನಿರೂಪ ಕಾಣರು. ಅನುವನೆ ಕಂಡರು, ತನುವನೆ ಕಾಣರು. ಆಚಾರವನೆ ಕಂಡರು, ವಿಚಾರವನೆ ಕಾಣರು. ಗುಹೇಶ್ವರಾ-ನಿಮ್ಮ ಕುರುಹನೆ ಕಂಡರು, ಕೂಡಲರಿಯದೆ ಕೆಟ್ಟರು ! / 1375 - ಅಲ್ಲಮ ಪ್ರಭುಗಳು *ಅರ್ಥ*: ಅಲ್ಲಮಪ್ರಭುಗಳು 12 ನೇ ಶತಮಾನದ ಪರಮ ಜಂಗಮಮೂರ್ತಿಗಳು, ಅತೀಂದ್ರಿಯ ಸಂತಶರಣರು ಮತ್ತು ಕನ್ನಡ ಭಾಷೆಯ ವಚನಕಾರ ಕವಿಗಳು. ಸ್ವಯಂ ಮತ್ತು ನಿರಾಕಾರ ಶಿವನ ಏಕೀಕೃತ ಪ್ರಜ್ಞೆಯನ್ನು ಪ್ರಚಾರ ಮಾಡಿದವರು. ಅಲ್ಲಮಪ್ರಭುಗಳು ಪ್ರಸಿದ್ಧ ಆಧ್ಯಾತ್ಮಿಕ ಜಂಗಮರು ಮತ್ತು ಮಧ್ಯಕಾಲೀನ ಕರ್ನಾಟಕ ಸಮಾಜ ಮತ್ತು ಆಧ್ಯಾತ್ಮಿಕ ಲೋಕವನ್ನು ಮತ್ತು ಕನ್ನಡ ಸಾಹಿತ್ಯವನ್ನು ಮರುರೂಪಿಸಿದವರು. ಗುರು ಬಸವಣ್ಣನವರ ಲಿಂಗಾಯತ ಚಳುವಳಿಗೆ ಹೊಸ ತಿರುವು ಕೊಟ್ಟ ಅತಿ ಮಹತ್ವದ ಮಾರ್ಗದರ್ಶಕರು, ಶೂನ್ಯಸಿಂಹಾಸನದ ಪ್ರಥಮ ಅಧ್ಯಕ್ಷರು. *#ರೂಪನೆ ಕಂಡರು, ನಿರೂಪ ಕಾಣರು* ಜನರು ದೇವರ ಸಾಕಾರ ಮಾನವ ರೂಪವನ್ನು ಕಲ್ಪಿಸಿಕೊಂಡು ಅದನ್ನೇ ಪೂಜಿಸಿ ಅದನ್ನೇ ಕಂಡರು ಅಂದರೆ ಅದು ಅವರ ಮನಸ್ಸಿನಲ್ಲಿ ಮೂಡಿದ ಕಲ್ಪನೆ ಅಷ್ಟೇ, ರೂಪವೇ ಇಲ್ಲದ ನಿರೂಪ, ನಿಜವಾದ ನಿರಾಕಾರ ಪರವಸ್ತುವನ್ನು ಕಾಣಲೇ ಇಲ್ಲ. . *#ಅನುವನೆ ಕಂಡರು, ತನುವನೆ ಕಾಣರು*. ಅನು(ಸಕ್ರಿಯೆ) ಪೂಜೆಯನ್ನು ಕಂಡರೆ ವಿನಃ ತಮ್ಮದೇ ತನುವಿನಲ್ಲಿಯ ದೇವರನ್ನು ಕಾಣಲಿಲ್ಲ. *#ಆಚಾರವನೆ ಕಂಡರು, ವಿಚಾರವನೆ ಕ...