ಪಂಚಾಚಾರ - ಶಿವಾಚಾರ
ಪಂಚಾಚಾರ - ಶಿವಾಚಾರ ಪಂಚಾಚಾರ - ಶಿವಾಚಾರ *ಶಿವಾಚಾರ*: ಮೊದಲಿನ ಮೂರು ಆಚಾರಗಳಾದ ಲಿಂಗಾಚಾರ ಸದಾಚಾರ ಗಣಾಚಾರದ ನಿಷ್ಠೆಯ ಆಚರಣೆಯಿಂದ ಕರಸ್ಥಲದ ಇಷ್ಟಲಿಂಗ, ಕರಸ್ಥಲದಲ್ಲಿ ಮಾತ್ರ ಉಳಿಯದೆ ಅಂತರಂಗವನ್ನೂ ವ್ಯಾಪಿಸಿ ಪ್ರಾಣಲಿಂಗ ಭಾವಲಿಂಗಗಳ ಅರಿವನ್ನೂ ಅನುಭಾವವನ್ನೂ ತಂದುಕೊಡುತ್ತದೆ. ಲಿಂಗಾಚಾರ ಸದಾಚಾರ ಗಣಾಚಾರಗಳನ್ನು ಅಳವಡಿಸಿಕೊಂಡು ಭಕ್ತಸ್ಥಲ, ಮಹೇಶ್ವರ ಸ್ಥಲಗಳನ್ನು ದಾಟಿಬಂದ ಸಾಧಕನ ವಿಕಸಿತ ಜೀವನದಲ್ಲಿ, ಶಿವಾಚಾರ ಸಂಯುಕ್ತವಾಗುತ್ತದೆ. ಶಿವಾಚಾರದಲ್ಲಿ ಭಕ್ತಸ್ಥಲದ ಶ್ರದ್ಧಾಭಕ್ತಿ, ಮಹೇಶ್ವರ ಸ್ಥಲದ ನೈಷ್ಠಿಕಾಭಕ್ತಿಗಳನ್ನು ಆಚರಿಸುತ್ತ ಬಂದಂತೆಯೆ, ಶಿವಾಚಾರದ ಅವಧಾನ ಮತ್ತು ಅನುಭಾವ ಭಕ್ತಿಗಳು ಉದಯಿಸಿ ಸಾಧಕನನ್ನು ಒಳಗೊಳ್ಳುತ್ತವೆ. ಶಿವಾಚಾರದಲ್ಲಿ ವ್ಯಕ್ತಿ ತಾನು ಶಿವಸ್ವರೂಪನೆಂದು ಧ್ಯಾನ, ಅನುಭಾವದಿಂದ ಕಂಡುಕೊಳ್ಳುವುದರ ಜೊತೆಗೆಯೇ, ಸಕಲ ಚರಾಚರವು ಶಿವಸ್ವರೂಪವೆಂದು ಅರಿಯುತ್ತಾನೆ. ಅದರ ಉದ್ಧಾರಕ್ಕಾಗಿ ತನ್ನ ಸಾಧನೆಯನ್ನು ತನ್ನನ್ನೂ ಸಮರ್ಪಿಸಿ ಕೊಳ್ಳುತ್ತಾನೆ. ಶಿವಾಚಾರವು ಅದಕ್ಕೆ ಅನುಗುಣವಾದ ನಡೆ ನುಡಿಗಳನ್ನು ಕೈಗೂಡಿಸಿಕೊಡುತ್ತದೆ. ಷಟ್ಸ್ಥಲದಲ್ಲಿ ಪ್ರಸಾದಿ ಪ್ರಾಣಲಿಂಗಿ ಸ್ಥಲಗಳಲ್ಲಿ ಆ ನಿಲುವನ್ನು ಕಾಣುತ್ತೇವೆ. ಎಲ್ಲೆಲ್ಲಿಯೂ ಶಿವಸ್ವರೂಪವನ್ನು ಕಾಣುವುದೇ ಶಿವಾಚಾರ. ತಾನು ಶಿವಸ್ವರೂಪ ನೆಂಬುದು ಮಾತ್ರವಲ್ಲ; ಸಕಲ ಚರಾಚರ ಜಗತ...