ಬಯಲು 1
ಬಯಲು 1 : ಬಯಲು 1 : "ಬಯಲು " ಅಂದರೆ ಶೃಷ್ಟಿ ರಚನೆಯಲ್ಲಿ ಕಾರ್ಯರೂಪವಾದ ಜಗತ್ತು ಹಾಗೂ ಕಾರಣರೂಪವಾದ ಮಹಾಲಿಂಗ ಇವೆರಡಕ್ಕೂ ಮೊದಲಿನ ಸ್ಥಿತಿ. ಬಯಲು ವಿಶ್ವವೂ ಅಲ್ಲ ಮಹಾಲಿಂಗವೂ ಅಲ್ಲ. ಅದು ಏನೂ ಅಲ್ಲ ಮತ್ತು ಅದರಲ್ಲಿ ಏನೂ ಇಲ್ಲದ್ದರಿಂದ, ಅದು ಬರಿಬಯಲು, ಬಟ್ಟಬಯಲು, ನಿರಾವಲಂಬ ಬಯಲು. ಬಯಲಲ್ಲಿ ಬಯಲಾಗುವುದು : ಶರಣ ಧರ್ಮದ ಶಿವಯೋಗದಲ್ಲಿ "ಬಯಲು" ಆನಂದಮಯವಾದ ಮುಕ್ತಾ ಮುಕ್ತ ಸ್ಥಿತಿ. ಶರಣ ಧರ್ಮದಲ್ಲಿ " ಬಯಲಾಗುವುದು" ಅಂದರೆ ಅಷ್ಟಮದಗಳನ್ನೆಲ್ಲಾ ನಿರಸನಗೊಳಿಸಿದ ನಂತರದ ವಿಕಾಸಗೊಂಡ ಆತ್ಮವು ವಿಶ್ವಾತ್ಮನೊಡನೆ ಸಮರಸಗೊಳ್ಳುವ ಪರಿಪೂರ್ಣ ಸ್ಥಿತಿ. ಸಾಧನಾ ಮಾರ್ಗದಲ್ಲಿ ಸಾಕಾರ ಹಿಡಿದು ನಿರಾಕಾರ ಅರಿಯಬೇಕು. ನಿರಾಕಾರ ಹಿಡಿದು ನಿರಾವಲಂಬ ಬಯಲು ಅರಿಯಬೇಕು. ಸಹಸ್ರಾರ ಚಕ್ರದ ಆಚೆಯ ಶಿಖಾಚಕ್ರದ ನಂತರ ಬರುವ ಪಶ್ಚಿಮ ಚಕ್ರದ ಸಾಧನೆ ಮಾಡಬೇಕು ಶಿವಯೋಗಿಗಳು ತಮ್ಮ ಶರೀರವನ್ನೇ ಮಾಧ್ಯಮ ವಾಗಿಟ್ಟುಕೊಂಡು ತನ್ನನ್ನು ಪರಿಮಿತಗೊಳಿಸುವ ಆಸೆ ದ್ವೇಷ ಮೋಹಗಳನ್ನೆಲ್ಲಾ ನಾಶಗೊಳಿಸಿ, ಯೋಗದಿಂದ ಲಿಂಗಸಾಧನೆ, ಲಿಂಗಾಂಗ ಸಾಮರಸ್ಯದಿಂದ ಮಹಾಲಿಂಗ ಮಹಾಬೆಳಗನ್ನು ಕಂಡು, ತನ್ನ "ಚತುಷ್ಟ ಕರಣ"ಗಳನ್ನು ಶೂನ್ಯದಲ್ಲಿ ಲೀನಗೊಳಿಸಿ ಸಮರಸವಾಗುವುದು ಎಂಬ ಅರ್ಥವನ್ನು ಬಯಲಾಗುವುದು ಎಂಬ ಮಾತಿನಲ್ಲಿ ಕಾಣುತ್ತೇವೆ. ಜಗತ್ತು “ಏನೆಂದೆನಲಿಲ್ಲದ ಬಯಲು” ಸ್ವರೂ...