ಬಯಲು 5
ಬಯಲು 5 ಬಯಲು - 5 ಶಿವಯೋಗದಲ್ಲಿ ಅಂಗತತ್ವಗಳು ಲಿಂಗತತ್ವ ಗಳಾದ ನಂತರ ಲಿಂಗಾಂಗ ಸಾಮರಸ್ಯದಿಂದ ಬಯಲು ಎಂಬ ನಿರಾಕಾರ ನಿರ್ಗುಣ ಅನುಭಾವ ಸಾಕ್ಷಾತ್ಕಾರವಾಗುತ್ತದೆ. ಭಕ್ತನಾದವನು ದೇವರ ಸಂಬಂಧದಿಂದ ಬದಲಾವಣೆಯಾಗುತ್ತಾ. ಸಾಧನೆಯಿಂದ ಪರಿಪೂರ್ಣದೆಡೆಗೆ ಸಾಗುತ್ತಾನೆ. ಪುಣ್ಯ ಮಾಡಿದವರು ಸ್ವರ್ಗಕ್ಕೆ ಪಾಪ ಮಾಡಿದವರು ನರಕಕ್ಕೆ ಹೋಗುತ್ತಾರೆಂಬುದನ್ನು ಶರಣರು ಒಪ್ಪಲಿಲ್ಲ. ದ್ವೈತ ಸಿದ್ಧಾಂತ ಹೇಳುವಂತೆ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಇತ್ಯಾದಿ ವಿವಿಧ ಹಂತದ ಮುಕ್ತಿಯಿದೆಯೆಂಬುದನ್ನೂ ಅವರು ಅಂಗಿಕರಿಸಲಿಲ್ಲ. ಗುರು ಬಸವಣ್ಣನವರ ಮಾತಿನಲ್ಲಿ #ಈ ಲೋಕದ ಭೀತರು, ಆ ಲೋಕದ ಕಲಿಗಳು, ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯರೆಲ್ಲರು ಅಜನಿತಂಗೆ ಸರಿಯೆ, ಮೂಜಗದಲ್ಲಿ ನಿರತರು ಕೂಡಲಸಂಗನ ಶರಣರು ತ್ರಿವಿಧವನರಿಯರು. / 273 "ಲಿಂಗ ಗುಣಗಳ ತಿಳಿದು, ಅಂಗಗುಣಗಳನತಿಗಳೆದು ಲಿಂಗವಾದುದೇ ಸ್ವರ್ಗ' ಎನ್ನುತ್ತಾರೆ ಶಿವಯೋಗಿ ಸಿದ್ಧರಾಮರು. ಕೈಲಾಸವನ್ನು ಕುರಿತು ಅವರು ಹೇಳುವುದು : #ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿಲಾ ಕೇಳಿರಯ್ಯ, ..... ಅಂಗಾಂಗ ಸಮರಸವ ತಿಳಿದು ನಿಮ್ಮ ಪಾದ ಪದ್ಮದೊಳು ಬಯಲಾದ ಪದವಿ ಕೈಲಾಸವಯ್ಯ ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ, "ಇಲ್ಲಿ ಬಯಲಾಗು ” ಎಂಬ ಮಾತು ಬರುತ್ತದೆ. ಶರಣರ ಮೋಕ್ಷದ ಕಲ್ಪನೆಯಲ್ಲಿ ಈ ಮಾತು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. “ಬಯಲು, 'ನಿರವಯ', ನಿರ್ವಯಲು, ...