Posts

Showing posts with the label ಬಸವಾದಿ ಶರಣರು ಮತ್ತು ಆಹಾರ ಪದ್ಧತಿ

ಬಸವಾದಿ ಶರಣರು ಮತ್ತು ಆಹಾರ ಪದ್ದತಿ

Image
*ಬಸವಾದಿ ಶರಣರು ಮತ್ತು ಆಹಾರ ಪದ್ಧತಿ* 12 ನೆಯ ಶತಮಾನದ ಬಸವಾದಿ ಶರಣರ ಆಹಾರ ಪದ್ಧತಿ ಸಸ್ಯಾಹಾರವು ಯಾವುದೇ ಸಸ್ಯಾಹಾರ ಮೇಲು, ಮಾಂಸಾಹಾರ ಕೀಳು ಎಂಬ ಭಾವನೆ ಮೇಲೆ ಬಂದುದಲ್ಲ. ಅದು "ಅಹಿಂಸೆ, ಪ್ರಾಣಿದಯೆ" ಯಿಂದ ಪ್ರೇರಿತವಾದುದು. 'ಸರ್ವ ಜೀವ ದಯಾಪಾರಿ' ಯಾದವನು ಯಾವ ಜೀವಿಯನ್ನೂ ಹಿಂಸಿಸಲಾರ.  ಅಪಾರವಾದ ಅನುಕಂಪತೆಯಿಂದ ತನ್ನಂತೆ ಎಲ್ಲ ಪ್ರಾಣಿಗಳನ್ನೂ ಕಂಡ ಶರಣರು ಹಿಂಸೆಯನ್ನು ಯಾವುದೇ ಕಾರಣಕ್ಕಾಗಲೀ  ಒಪ್ಪಲಿಲ್ಲ. ದಯೆಯೇ ಧರ್ಮದ ಮೂಲವಯ್ಯ ಎಂದ ಶರಣರು ಎಲ್ಲ ಧರ್ಮ ಸಾಧನೆಗೂ ಮೂಲಭೂತವಾದದ್ದು," ದಯೆ" ಎನ್ನುತ್ತಾರೆ. #ದಯವಿಲ್ಲದ ಧರ್ಮವದೇವುದಯ್ಯಾ ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ. ದಯವೇ ಧರ್ಮದ ಮೂಲವಯ್ಯಾ, ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. / 726 ಎಂದು ಗುರು ಬಸವಣ್ಣನವರು ಇದನ್ನು ಬಹಳ ಸುಂದರವಾಗಿ ಪ್ರತಿಪಾದಿಸಿದ್ದಾರೆ.  #ನಾನೊಂದು ಸುರಗಿಯನೇನೆಂದು ಹಿಡಿವೆನು? ಏನ ಕಿತ್ತೇನನಿರಿವೆನು? ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ. / 103  ಜಗವೆಲ್ಲಾ ಪರಮಾತ್ಮನೇ ಆಗಿರುವಾಗ ಸುರಗಿಯನ್ನು( ಕತ್ತಿಯಂಥ ಆಯುಧ) ಹಿಡಿದು ಎನನ್ನೂ ಕಿತ್ತಲಿ? ಏನನ್ನು ಕತ್ತರಿಸಲಿ?  ಯಾವ ಜೀವವನ್ನು, ಯಾರನ್ನು ಹಿಂಸಿಸಿದರೂ ಅದು ಆತ್ಮ ಹಿಂಸೆಯೇ ಆಗುತ್ತದೆ ಎನ್ನುತ್ತಾರೆ ಶರಣರ ಗುರು ದಾಸಿಮಯ್ಯನವರು. ಜಗತ್ತಿನ ಪ್ರತಿ ಅಣು ಅಣುವಿನಲ್ಲಿ ಕಣಕಣದಲ್ಲೂ ಪರಮಾತ್ಮನನ್ನೇ ಕಂಡವರು ಶರಣರು. ಧ...