ವಚನ ದಾಸೋಹ : ಭಾನು ಶಶಿ ಕಳೆಗುಂದಿ,
ವಚನ ದಾಸೋಹ : ಭಾನು ಶಶಿ ಕಳೆಗುಂದಿ, ವಚನ : ಭಾನು ಶಶಿ ಕಳೆಗುಂದಿ, ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ- ವಾಯುವನರಿಯವೊ! ಆದಿಪ್ರಣಮವನರಿದಹೆನೆಂಬವಂಗೆ, ಬಯಲು ಆಕಾಶದೊಳಗೊಂದು ರಸದ ಬಾವಿ! ಮುನ್ನಾದವರೆಲ್ಲಿಯವರೆಂದೆನಬೇಡ ಗುಹೇಶ್ವರನೆಂಬ ಲಿಂಗವು ತಾನೆ ಕಂಡೆಲವೊ! / 1238* - ಅಲ್ಲಮ ಪ್ರಭುಗಳು *ಅರ್ಥ*: ಅಲ್ಲಮಪ್ರಭುಗಳು ಬಸವ ತತ್ವದ ಅರಿವು ಆಚಾರ ಅನುಷ್ಠಾನಕ್ಕೆ ಮಹಾಮಾರ್ಗ ತೋರಿದ ನಿರಂಜನ ಜಂಗಮ ಮೂರ್ತಿ. ಶರಣರನ್ನು ಒರಿಗೆ ಹಚ್ಚಿ ತಿಕ್ಕಿ ನೋಡಿ ಜಗತ್ತಿಗೆ ಅವರ ಧಿವ್ಯತೆಯನ್ನು ಪರಿಚಯಿಸಿದ ಚರಜಂಗಮ ಗುರುಗಳು. ಅಲ್ಲಮಪ್ರಭುಗಳು ವಚನ ಸಾಹಿತ್ಯದ ಸರ್ವಕಾಲಿಕ ಎಚ್ಚರದ ಪ್ರತೀಕ.ಈ ವಚನ ದಲ್ಲಿ ಪ್ರಾಣಲಿಂಗಿ ಸ್ಥಲದ ಲಿಂಗಾನುಭೂತಿಯ ದೈವಿ ಆನಂದ ಸ್ಥಿತಿಯನ್ನು ಅದನ್ನು ಪಡೆಯುವ ವಿಧಾನ ವನ್ನು ತಿಳಿಸಿಕೊಡುತ್ತಾರೆ. *ಬಾನು ಶಶಿ ಕಳೆಗುಂದಿ* ಅಷ್ಟಾಂಗಯೋಗ ಕ್ರಿಯೆಯ ಪ್ರಾಣಾಯಾಮದಲ್ಲಿ ಭಾನು - ಈ ಶಬ್ದವು ವಾಯುವಿನ ರೇಚಕ ಗತಿ. ವಾಯುವು ಹೊರಹರಿದು ಹೋಗುವುದು ರೇಚಕ. ಶಶಿ - ಈ ಶಬ್ದವು ಇಲ್ಲಿ ವಾಯುವಿನ ಪೂರಕ ಗತಿ. ವಾಯುವು ಒಳಗೆ ಹರಿದು ಬರುವುದು ಪೂರಕ. ಇವೆರಡೂ ಅವ್ಯಾಹತವಾಗಿ ನಡೆಯುವ ಪ್ರಾಣ ಗತಿಗಳು. ದೈಹಿಕ ಮತ್ತು ಮನಸ್ಸಿನ ಚಲನೆ ಎಲ್ಲವೂ ಈ ಗತಿಗಳನ್ನು ಅವಲಂಬಿಸಿರುತ್ತವೆ. ಪ್ರಾಣಲಿಂಗದ ಅನುಸಂಧಾನ ಮಾಡುವ ಯೋಗಿಯ ತನ್ನ ಸಾಧನೆಯಲ್ಲಿ ಮಗ್ನವಾ...