Posts

Showing posts with the label ವಚನ ದಾಸೋಹ : ಅಂಗಸೋಂಕೆಂಬುದು ಅಧಮವು.

ವಚನ ದಾಸೋಹ :ಅಂಗಸೋಂಕೆಂಬುದು ಅಧಮವು.

Image
ವಚನ ದಾಸೋಹ : ಅಂಗಸೋಂಕೆಂಬುದು ಅಧಮವು. ವಚನ: #ಅಂಗಸೋಂಕೆಂಬುದು ಅಧಮವು. ಉರಸೆಜ್ಜೆಯೆಂಬುದು ಎದೆಯ ಗೂಂಟ. ಕಕ್ಷೆಯೆಂಬುದು ಕವುಚಿನ ತವರುಮನೆ. ಅಮಳೋಕ್ಯವೆಂಬುದು ಬಾಯ ಬಗದಳ. ಮುಖಸೆಜ್ಜೆಯೆಂಬುದು ಪಾಂಡುರೋಗ. ಕರಸ್ಥಳವೆಂಬುದು ಮರವಡದ ಕುಳಿ. ಉತ್ತಮಾಂಗವೆಂಬುದು ಸಿಂಬಿಯ ಕಪ್ಪಡ. ಎಲ್ಲರಿಗೆಯೂ ಸೋಂಕಾಯಿತ್ತು ! ಈ ಹಸಿಯ ಗೂಂಟದಲ್ಲಿ ಕಟ್ಟಿ, ಒಣಗಿದ ಗೂಂಟದಲ್ಲಿ ಬಿಡುವ ಬಾಲಭಾಷೆಯ ಭಂಡರ ನುಡಿಯ ಕೇಳಲಾಗದು ಗುಹೇಶ್ವರಾ. - ಅಲ್ಲಮ ಪ್ರಭುಗಳು  ಸಮಗ್ರ ವಚನ ಸಂಪುಟ: 2   ವಚನದ ಸಂಖ್ಯೆ: 722   ಅರ್ಥ: ಬಹುಜನರು ದೇಹದ ಮೇಲೆ ಎದ್ದು ಕಾಣುವ ಹಾಗೆ ಅಂಗಸೋಂಕು, ಉರಸೆಜ್ಜೆ, ಕಕ್ಷೆ, ಅಮಳೋಕ್ಯ , ಮುಖಸಜ್ಜೆ, ಕರಸ್ಥಲ, ಉತ್ತಮಾಂಗ ಎಂಬ  ಈ ಆರು ಸ್ಥಾನಗಳಲ್ಲಿ ಆಗಮಶಾಸ್ತ್ರಗಳ ಪ್ರಕಾರ  ಬಾಹ್ಯಲಿಂಗಧಾರಣ ಮಾಡುತ್ತಿದ್ದರು. ಈ  ಷಡುಸ್ಥಲಗಳಲ್ಲಿ ಅಂದರೆ ಆರು ಸ್ಥಳದ ಒಂದು ಸ್ಥಳದಲ್ಲಿ ಇಷ್ಟಲಿಂಗ ಧರಿಸುತ್ತಿದ್ದರು. ಅಂಗಸೋಂಕು - ನಾಭಿಗಿಂತ ಮೇಲೆ ಉರಸೆಜ್ಜೆ - ಎದೆ  ಕಕ್ಷೆ - ಕಂಕುಳ, ಬಗಲು, ರಟ್ಟೆಯಲ್ಲಿ ಕಟ್ಟುವುದು. ಅಮಳೋಕ್ಯ- ಬಾಯಿ, ಕಿರು ನಾಲಿಗೆ ಮುಖಸಜ್ಜೆ - ಮುಖವಿವರ, ಲಲಾಟ.  ಕರಸ್ಥಲ - ಕೈ.  ಉತ್ತಮಾಂಗ - ಶಿರಸ್ಸು. ಈ ಷಡುಸ್ಥಲಗಳಲ್ಲಿ ಲಿಂಗ ಧರಿಸುತ್ತಿದ್ದರು. ಇದರಲ್ಲಿ ಉತ್ತಮಾಂಗದಲ್ಲಿ ಲಿಂಗ ಧರಿಸುವವರು ಶ್ರೇಷ್ಠ ಎಂದು ಪರಿಗಣಿಸುತ್ತಿದ್ದರು. ತಮ್ಮ ಯೋಗ ಸಾಧನೆಯ ಹ...