ವಚನ ದಾಸೋಹ : ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ
ವಚನ ದಾಸೋಹ : ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ ವಚನ: #ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ. ಗುರುಪ್ರಸಾದವಂಗವ ಸೋಂಕಿದಲ್ಲಿ ಸರ್ವಾಂಗ ಗುರುವಪ್ಪುದು ತಪ್ಪದಯ್ಯ. ಲಿಂಗಪ್ರಸಾದ ಮನವ ಸೋಂಕಿದಲ್ಲಿ ಮನ ಲಿಂಗವಪ್ಪುದು ತಪ್ಪದಯ್ಯ. ಜಂಗಮಪ್ರಸಾದ ಅರಿವ ಸೋಂಕಿದಲ್ಲಿ ಅಖಂಡಿತ ಪ್ರಸನ್ನಪ್ರಸಾದವಪ್ಪುದು ತಪ್ಪದಯ್ಯ. ಶಿವಶಿವಾ, ಪ್ರಸಾದದ ಮಹಿಮೆಯನೇನೆಂದುಪಮಿಸುವೆ ? ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಪ್ರಸಾದವೇ ಜಂಗಮ, ಪ್ರಸಾದವೇ ಪರಾತ್ಪರ, ಪ್ರಸಾದವೇ ಪರಮಾನಂದ, ಪ್ರಸಾದವೇ ಪರಮಾಮೃತ, ಪ್ರಸಾದವೇ ಪರಮಜ್ಞಾನ, ಪ್ರಸಾದವೇ ವಾಙ್ಮನೋತೀತ, ಪ್ರಸಾದವೇ ನಿತ್ಯಪರಿಪೂರ್ಣ. ಇಂತಪ್ಪ ಪ್ರಸಾದವ ಕೊಂಡು ಬದುಕಿದೆನಯ್ಯ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. / 11 ಎನ್ನುತ್ತಾರೆ ಉರಿಲಿಂಗ ಪೆದ್ದಿ ಶರಣ ಗುರುಗಳು. *ಅರ್ಥ*: ಗುರುಪ್ರಸಾದದಿಂದ ಸರ್ವಾಂಗವೂ ಗುರುವಾಗುವುದು. ಲಿಂಗಪ್ರಸಾದದಿಂದ ಸರ್ವಮನವೂ ಲಿಂಗವಾಗುವುದು. ಜಂಗಮಪ್ರಸಾದದಿಂದ ಅಖಂಡಿತ ಪ್ರಸನ್ನತೆಯು ಪ್ರಸಾದವಾಗುವುದು. ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಜಂಗಮ, ಪರಾತ್ಪರ, ಪರಮಾನಂದ, ಪರಮಾಮೃತ, ಪರಮಜ್ಞಾನ, ವಾಙ್ಮನೋತೀತ, ನಿತ್ಯಪರಿಪೂರ್ಣ ಎಂಬ ಮಾತು ಪ್ರಸಾದದ ಮಹತ್ವ ಮತ್ತು ಅದರಿಂದಾಗುವ ಪರಿಣಾಮವನ್ನು ಅರ್ಥವತ್ತಾಗಿ ಸೂಚಿಸುತ್ತಿದೆ. *ವಚನ ಚಿಂತನೆ*: ಶರಣರಲ್ಲಿ 'ಪ್ರಸಾದ' ಎಂಬುದಕ್ಕೆ ವ್ಯಾಪಕವಾದ ಅರ್ಥವಿದೆ. “ನೈರ್ಮಲ್ಯಂ ಮನಸೋ ಲಿಂಗಂ ಪ...