Posts

Showing posts with the label ವಚನ ದಾಸೋಹ : ನಡೆವ ನುಡಿವ ಚೈತನ್ಯವುಳ್ಳನಕ್ಕ ಒಡಲ

ವಚನ ದಾಸೋಹ : ನಡೆವ ನುಡಿವ ಚೈತನ್ಯವುಳ್ಳನಕ್ಕ ಒಡಲ

Image
ವಚನ ದಾಸೋಹ : ನಡೆವ ನುಡಿವ ಚೈತನ್ಯವುಳ್ಳನಕ್ಕ ಒಡಲ ವಚನ: #ನಡೆವ ನುಡಿವ ಚೈತನ್ಯವುಳ್ಳನಕ್ಕ ಒಡಲ ಗುಣಂಗಳಾರಿಗೂ ಕಾಣವು.  ನೋಡುವ ನಯನ, ಕೇಳುವ ಶೋತ್ರ, ವಾಸಿಸುವ ಘ್ರಾಣ, ಮುಟ್ಟವ ತ್ವಕ್ಕು, ರುಚಿಸುವ ಜಿಹ್ವೆ ತಾಗಿತ್ತೆನಬೇಡ. ನೋಡುತ್ತ ಕೇಳುತ್ತ ವಾಸಿಸುತ್ತ ಮುಟ್ಟುತ್ತ ರುಚಿಸುತ್ತ, ಲಿಂಗಾರ್ಪಿತವಮಾಡಿ ಲಿಂಗಭೋಗೋಪಭೋಗಿಯಾದ ಪ್ರಸಾದಿಗಳಿಗೆ ಸರ್ವಾಂಗಶುದ್ಧವೆಂಬುದಿದೆಯಯ್ಯಾ. ಕಾಯತ್ರಯಂಗಳ ಜೀವತ್ರಯಂಗಳ ಭಾವತ್ರಯಂಗಳನೊಂದು ಮಾಡಿ, ಸುಖ-ದುಃಖ, ಗುಣ-ನಿರ್ಗುಣಂಗಳೆಂಬ ಉಭಯವ, ಲಿಂಗದಲ್ಲಿ ಏಕವ ಮಾಡಿ, ಅಹುದು ಅಲ್ಲ, ಬೇಕು ಬೇಡೆಂಬ ಸಂಶಯವ ಕಳೆದು, ಕೂಡಲಚೆನ್ನಸಂಗನ ಆದಿಯ ಪುರಾತನರು ಮಾಡಿದ ಪಥವಿದು. - ಅವಿರಳ ಜ್ಞಾನಿ ಚೆನ್ನಬಸವಣ್ಣನವರು *ಅರ್ಥ*: ನಡೆಯುವ ನುಡಿಯುವ ಚೈತನ್ಯಯುಕ್ತ ಒಡಲ ಗುಣಗಳು ಯಾರಿಗೂ ಕಾಣಿಸದು.   ಪಂಚೇಂದ್ರಿಯಗಳಾದ  ಕಣ್ಣು, ಕಿವಿ, ನಾಲಗೆ, ಮೂಗು, ತ್ವಕ್ಕುಗಳು  ಇವುಗಳ ವಿಷಯಗಳಾದ ನೋಡುವ ನಯನ, ಕೇಳುವ ಶೋತ್ರ, ವಾಸಿಸುವ ಘ್ರಾಣ, ಮುಟ್ಟವ ತ್ವಕ್ಕು, ರುಚಿಸುವ ಜಿಹ್ವೆಗಳ ವಿಷಯಗಳು  ತಟ್ಟುವುದಿಲ್ಲ. ನೋಡುತ್ತ ಕೇಳುತ್ತ ವಾಸಿಸುತ್ತ ಮುಟ್ಟುತ್ತ ರುಚಿಸುತ್ತ, ಇವೆಲ್ಲದರ ಅನುಭವವನ್ನು ಲಿಂಗಾರ್ಪಿತವ ಮಾಡಿ ಭೋಗಿಸುವವರೆ ಪ್ರಸಾದಿಗಳು. ಲಿಂಗದಲ್ಲಿ ಅನನ್ಯಾನುಭವಿಯವಾಗಿ ಭಿನ್ನವಳಿದು "ಲಿಂಗಭೋಗೋಪಭೋಗಿ" ಯಾಗುತ್ತಾನೆ. ಸರ್ವವೂ ಶಿವನ ಪ್ರಸಾದವೆಂಬ ಭಾವದ ಪ್ರಸಾದಿ ಸ್ಥಲ ಇದು....