ವಚನ ದಾಸೋಹ :ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ
ವಚನ ದಾಸೋಹ : ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ , ವಚನ: #ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ , ಮರದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ, ಸೇತುರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ ಅಷ್ಟಾಷಷ್ಠಿಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ. ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ನೋಡಾ, ಅಪ್ರಮಾಣಕೂಡಲಸಂಗಮದೇವ. / 603 ಅರ್ಥ: ಈ ವಚನವನ್ನು ಬಾಲಸಂಗಯ್ಯ ಶರಣರು ರಚಿಸಿದ್ದಾರೆ. ಇವರು ಬಸವೋತ್ತರಯುಗದ ಮಹತ್ವದ ವಚನಕಾರರು. ನಿಜನಾಮ 'ಅಪ್ರಮಾಣದೇವ'. ಬಾಲಸಂಗಯ್ಯ ಶರಣರು ಅದ್ವಿತೀಯ ಪಂಡಿತರಾಗಿದ್ದು, ಸರ್ವ ಧರ್ಮಶಾಸ್ತ್ರ, ಪುರಾಣ, ವೇದ, ಉಪನಿಷತ್ತು, ಆಗಮಗಳನ್ನು ಬಲ್ಲವನಾಗಿದ್ದರು. 'ಬಾಲಸಂಗಯ್ಯ'ನವರ ವಚನಗಳು ಶಾಸ್ತ್ರ ಸಮ್ಮತ, ನೀತಿಪ್ರಧಾನ, ತತ್ವ ಪ್ರಬೋಧಕವಾಗಿವೆ. 'ಸಕಲಾಗಮ ಶಿಖಾಮಣಿ' ಅಪ್ರಮಾಣದೇವರ ಕೃತಿಯ ಹೆಸರು, ಇದರಲ್ಲಿ 'ಅಪ್ರಮಾಣ ಕೂಡಲ ಸಂಗಮದೇವ' ಅಂಕಿತದ ಒಟ್ಟು ೯೨೦ ವಚನಗಳು ಸಂಕಲನಗೊಂಡಿವೆ. ಇದು ಒಂದು ಎಂಬ ಶುದ್ಧ ತಾತ್ವಿಕ ಶಾಸ್ತ್ರ. ಚೆನ್ನಬಸವಾದಿಗಳು ಹೇಳಿದ ಲಿಂಗಾಯತ ಧರ್ಮತತ್ವಗಳನ್ನು ವ್ಯವಸ್ಥಿತವಾಗಿ ಪ್ರತಿಪಾದಿಸುವುದೇ ಇದರ ಗುರಿ. *ನಿರ್ವಚನ*: ಲಿಂಗಾಯತ ಧರ್ಮದ ಗಹನವಾದ ವೈಚಾರಿಕ ಏಕತ್ರದ ವಿಚಾರಗಳು ಈ ವಚನದಲ್ಲಿ ಇರುವದರಿಂದ ವಚನವನ್ನು ಮೂರಾಗಿ ವಿಂಗಡಿಸಿ ನಿರ್ವಚನ ಮಾಡಲಾಗಿದೆ. 1. *ಕಲ್ಲದೇ...