Posts

Showing posts with the label ವಚನ ದಾಸೋಹ - ಕುಲದೊಳಗೆ ಹುಟ್ಟಿ ಕುಲವ ಬೆರಸದೆ

ವಚನ ದಾಸೋಹ - #ಕುಲದೊಳಗೆ ಹುಟ್ಟಿ ಕುಲವ ಬೆರಸದೆ

Image
ವಚನ ದಾಸೋಹ:  ಕುಲದೊಳಗೆ ಹುಟ್ಟಿ ಕುಲವ ಬೆರಸದೆ ವಚನ : #ಕುಲದೊಳಗೆ ಹುಟ್ಟಿ ಕುಲವ ಬೆರಸದೆ ತಮ್ಮ ನಿಲವ ಬಲಿದಿಪ್ಪವರು ಇನ್ನಾರು ಹೇಳಾ ? ಹಬ್ಬಿದ ಮೂರು ಬೆಟ್ಟಕ್ಕೆ ತನ್ನ ಮನವ ಹಬ್ಬಲೀಯದೆ ಲಿಂಗ ಜಂಗಮಕ್ಕೆ ಸವೆಸಿ ಸ್ವಯಲಿಂಗವಪ್ಪರಿನ್ನಾರು ಹೇಳಾ ? ಸ್ವಯೋ ಲಿಂಗ ಸ್ವಯೋ ಶರಣ ಸ್ವಯೋ ಭೋಗವೆಂದುದಾಗಿ,ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣಂಗೆ ನಮೋ ನಮೋ ಎಂಬೆನು. / 705* - ಅಲ್ಲಮ ಪ್ರಭುಗಳು *Translation:* Tell me who else could grow to such a great height, By rejecting the caste in which he is born Tell me who else could become Linga By wearing out himself in the service of Linga and jangama Without allowing his mind to spread to The three sprawling mountains Because, he himself is Linga, he himself is Sharana and he himself is the Blessed. Salute Salute to your Sharana, Sanganabasavanna  O! Guheshwara! *ಅರ್ಥ* : ಅಲ್ಲಮ ಪ್ರಭುಗಳು ತಮ್ಮ ಇಷ್ಟ ದೇವರಾದ ಗುಹೇಶ್ವರ ನಲ್ಲಿ ಕೇಳುತ್ತಾರೆ ಗುಹೇಶ್ವರಾ ಹೇಳು, ತಾನು ಹುಟ್ಟಿದ ಉಚ್ಚ ಕುಲವನ್ನು ಕೂಡದೆ, ಅದನ್ನು ಬಿಟ್ಟು, ಇಷ್ಟು ಎತ್ತರಕ್ಕೆ ಏರಿ, ತಾನೇ ಲಿಂಗವಾದ; ತನ್ನನ್ನೇ ಸಂಪೂರ್ಣವಾಗಿ ಲಿಂಗ ಜಂಗಮ ಸೇವೆಗೆ ಅರ್ಪಿಸಿಕೊಂಡು, ತನ್ನ ಮನವನ್ನು ಮೂರು ಶಿಖರಗಳ...