ವಚನ ದಾಸೋಹ - #ಕುಲದೊಳಗೆ ಹುಟ್ಟಿ ಕುಲವ ಬೆರಸದೆ

ವಚನ ದಾಸೋಹ: 
ಕುಲದೊಳಗೆ ಹುಟ್ಟಿ ಕುಲವ ಬೆರಸದೆ
ವಚನ :
#ಕುಲದೊಳಗೆ ಹುಟ್ಟಿ ಕುಲವ ಬೆರಸದೆ
ತಮ್ಮ ನಿಲವ ಬಲಿದಿಪ್ಪವರು ಇನ್ನಾರು ಹೇಳಾ ?
ಹಬ್ಬಿದ ಮೂರು ಬೆಟ್ಟಕ್ಕೆ ತನ್ನ ಮನವ ಹಬ್ಬಲೀಯದೆ
ಲಿಂಗ ಜಂಗಮಕ್ಕೆ ಸವೆಸಿ ಸ್ವಯಲಿಂಗವಪ್ಪರಿನ್ನಾರು ಹೇಳಾ ?
ಸ್ವಯೋ ಲಿಂಗ ಸ್ವಯೋ ಶರಣ ಸ್ವಯೋ ಭೋಗವೆಂದುದಾಗಿ,ಗುಹೇಶ್ವರಾ
ನಿಮ್ಮ ಶರಣ ಸಂಗನಬಸವಣ್ಣಂಗೆ
ನಮೋ ನಮೋ ಎಂಬೆನು. / 705*
- ಅಲ್ಲಮ ಪ್ರಭುಗಳು
*Translation:*
Tell me who else could grow to such a great height,
By rejecting the caste in which he is born
Tell me who else could become Linga
By wearing out himself in the service of Linga and jangama
Without allowing his mind to spread to
The three sprawling mountains
Because, he himself is Linga,
he himself is Sharana and he himself is the Blessed.
Salute Salute to your Sharana,
Sanganabasavanna 
O! Guheshwara!
*ಅರ್ಥ* :
ಅಲ್ಲಮ ಪ್ರಭುಗಳು ತಮ್ಮ ಇಷ್ಟ ದೇವರಾದ ಗುಹೇಶ್ವರ ನಲ್ಲಿ ಕೇಳುತ್ತಾರೆ
ಗುಹೇಶ್ವರಾ ಹೇಳು, ತಾನು ಹುಟ್ಟಿದ ಉಚ್ಚ ಕುಲವನ್ನು ಕೂಡದೆ, ಅದನ್ನು ಬಿಟ್ಟು,
ಇಷ್ಟು ಎತ್ತರಕ್ಕೆ ಏರಿ, ತಾನೇ ಲಿಂಗವಾದ; ತನ್ನನ್ನೇ ಸಂಪೂರ್ಣವಾಗಿ ಲಿಂಗ ಜಂಗಮ ಸೇವೆಗೆ ಅರ್ಪಿಸಿಕೊಂಡು, ತನ್ನ ಮನವನ್ನು ಮೂರು ಶಿಖರಗಳಿಗೆ ಹರಿಯಲು ಬಿಡದೆ, ಸ್ವಯಂ ಲಿಂಗವಾದ,  ಸ್ವಯಂ ಶರಣನಾದ ಸ್ವಯಂ ಭೋಗವಾದ ಶರಣ ಸಂಗನಬಸವಣ್ಣನ ಬಿಟ್ಟರೆ ಇನ್ನಾರಿದ್ದಾರೆ? ಸಂಗನ ಬಸವಣ್ಣನು ಲಿಂಗದಲ್ಲಿ ಬೆರೆತು ತಾನೇ ಲಿಂಗತತ್ವವಾದ. ಶರಣರಲ್ಲಿ ಬೆರೆತು ತಾನೇ ಶರಣತತ್ವವಾದ. ಲಿಂಗದ ಭೋಗ ಅಂದರೆ ಲಿಂಗದ ಕೃಪೆಯಲ್ಲಿ ಬೆರೆತು ತಾನೇ ಪರಶಿವನ ಕೃಪೆಯಾದ. ಇಂಥವ ಶರಣ ಸಂಗನಬಸವಣ್ಣನ ಬಿಟ್ಟರೆ ಇನ್ನಾರಿದ್ದಾರೆ?
ನಿಮ್ಮ ಶರಣ ಸಂಗನಬಸವಣ್ಣಂಗೆ
ನಮೋ ನಮೋ ಎಂದು 
ನಮಿಸುವೆನು. ಹೀಗೆ ಅನುಭವ ಮಂಟಪದಲ್ಲಿ ಶರಣರ ಸಮ್ಮುಖ ಬಸವಣ್ಣನವರನ್ನು ಹಾಡಿ ಹೊಗಳಿದ್ದಾರೆ ಅಲ್ಲಮ ಪ್ರಭುಗಳು.

ಅಲ್ಲಮ ಪ್ರಭುಗಳ ಪ್ರಕಾರ
ಜಾತಿ ವರ್ಣಾಶ್ರಮ, ಕುಲ ಗೋತ್ರ ನಾಮ ಸೀಮೆ ಎನ್ನುವವರು ಭಕ್ತರೇ ಅಲ್ಲ. ಇವು ಷಡುಭ್ರಮೆಗಳು.
 ಭಕ್ತ ಸ್ಥಲಕ್ಕೆ ಅವರು ಯೋಗ್ಯರಲ್ಲ ಎಂದು ತಿಳಿಸಿದ್ದಾರೆ.
"ಜಾತಿ ವರ್ಣಾಶ್ರಮ ಕುಲ ಗೋತ್ರ ನಾಮ ಸೀಮೆಯೆಂಬ
ಷಡುಭ್ರಮೆಗಳನ್ನೂ  ಪಂಚಸೂತಕಗಳನ್ನು
ಕಣ್ಣಲ್ಲಿ ಕವಿದು ಓಲಾಡುವವರು ಭಕ್ತನೆ ?
ತನುವಂಚಕ, ಮನವಂಚಕ ಧನವಂಚಕ ಭಕ್ತನೆ ?" ಎಂದು ಪ್ರಶ್ನಿಸುತ್ತಾರೆ.

ಇನ್ನೂ ಒಂದು ವಚನದಲ್ಲಿ
#ಜಾತಿಭೇದಗಳನ್ನು ಅರಿತು
 ಹಿಂದಿನ ಮುಂದಿನ ಹರಿಯುವುದು.
ಪ್ರೀತಿಯಿಂದ ಬೆಳಗಾದರೆ, 
-ಆತ ಗುಹೇಶ್ವರನೆಂದರಿವುದಯ್ಯಾ-2/1204 ಎನ್ನುತ್ತಾರೆ ಅಲ್ಲಮ ಪ್ರಭುಗಳು 
*Meaning:*
Know the caste differences , caste system why and who created and then 
Tear off these caste  differences between the ‘before’ and ‘after’ the caste system. God's Love and Grace will bring the dawn once again, ,
When that happens, know that it is Guheshwara, who brings that dawn.
*ಅರ್ಥ:*
 ಜಾತಿ ಪದ್ದತಿಯನ್ನು ಸಂಪೂರ್ಣವಾಗಿ ಅರಿತು ಮೊದಲಿನದು ಎನು ಇತ್ತು; ನಂತರದು ಎನು ಆಯಿತು ಎಂಬುದನ್ನು ತಿಳಿದುಕೊಂಡು, ಕಾಯಕಗಳು ಹೇಗೆ ಜಾತಿಗಳಾದವು ಎಂಬುದನ್ನು ಅರಿತು ಜಾತಿ ಪದ್ಧತಿಯನ್ನು ಕಿತ್ತು ಬಿಸಾಡಿ. ಆಗ ಗುಹೇಶ್ವರನ ಪ್ರೀತಿಯ-ಕೃಪೆಯ ಬೆಳಗು ಬಂದು ಈಶ್ವರನ ಅರಿವಾಗುವುದು ಎನ್ನುತ್ತಾರೆ ಅಲ್ಲಮ ಪ್ರಭುಗಳು.

ಬಸವಾದಿ ಶರಣರು ಜಾತಿ ವರ್ಣಾಶ್ರಮದ ವಿರುದ್ಧ  ತಮ್ಮ ಕೊನೆಗಳಿಗೆಯವರಿಗೆ ಹೋರಾಡಿ ತಮ್ಮ ಪ್ರಾಣಗಳನ್ನು ಸಮರ್ಪಿಸಿದರು. ಆದರೂ ತಮ್ಮ ಆದರ್ಶಗಳನ್ನು, ಗುರು ತೋರಿದ ಮಾರ್ಗವನ್ನು ಬಿಡಲಿಲ್ಲ.
-✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮ_ಪ್ರಭುಗಳು,
#ಕುಲದೊಳಗೆ_ಹುಟ್ಟಿ_ಕುಲವ_ಬೆರಸದೆ
#ಜಾತಿಭೇದಗಳನ್ನು_ಅರಿತು
Picture post created by me. Hope you all will like it.A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma