Posts

Showing posts with the label ವಚನ ದಾಸೋಹ - ಗುರು ಸ್ವಾಯತವಾದ ಬಳಿಕ

ವಚನ ದಾಸೋಹ - ಗುರು ಸ್ವಾಯತವಾದ ಬಳಿಕ

Image
ವಚನ ದಾಸೋಹ -  ಗುರು ಸ್ವಾಯತವಾದ ಬಳಿಕ  ವಚನ : #ಗುರು ಸ್ವಾಯತವಾದಬಳಿಕ ಗುರುವ ಮರೆಯಬೇಕಯ್ಯಾ  ಲಿಂಗ ಸ್ವಾಯತವಾದ ಬಳಿಕ ಲಿಂಗವ ಮರೆಯಬೇಕಯ್ಯಾ ಜಂಗಮಸ್ವಾಯತವಾದ ಬಳಿಕ ಜಂಗಮವ ಮರೆಯಬೇಕಯ್ಯಾ  ಇಂತೀ ಗುರುಲಿಂಗಜಂಗಮ ಪ್ರಸಾದದಲ್ಲಿ ಪರಿಣಾಮಿಯಾಗಿ ಸಮಯಭಕ್ತಿಯಲ್ಲಿ ಸಂತೋಷಿಯಾಗಿ ಬದುಕಿದೆನು ಕಾಣಾ ಕೂಡಲಸಂಗಮದೇವಾ - ಗುರು ಬಸವಣ್ಣನವರು ಅರ್ಥ: ಸೋಪಾದಿಕ ಅಷ್ಟಾವರಣ ಸ್ಥೂಲತನುವಿಗೆ, ನಿರುಪಾದಿಕ ಅಷ್ಟಾವರಣ ಸೂಕ್ಷ್ಮತನುವಿಗೆ ಇವೆ.  ಗುರು, ಲಿಂಗ, ಜಂಗಮ, ಪ್ರಸಾದ, ಪಾದೋದಕ, ವಿಭೂತಿ, ರುದ್ರಾಕ್ಷಿ, ಮಂತ್ರ ವೆಂಬ ಸೋಪಾದಿಕ ಅಷ್ಟಾವರಣಗಳನ್ನು ಆಶ್ರಯಿಸಿ ಅಂತರಂಗದೊಳಗೆ  ಪ್ರಕಾಶಿಸುವ ನಿರುಪಾದಿಕ ಅಷ್ಟಾವರಣಗಳನ್ನು ಅರಿಯಬೇಕು.  ಆಯತ ಸ್ವಾಯತ ಸನ್ನಿಹಿತ ಮೂರು ಕ್ರಿಯೆ ಗಳು. ಆಯತದಲ್ಲಿ ಇಷ್ಟಲಿಂಗದ ಪೂಜೆಯಿಂದ ಲಿಂಗ ಸ್ವಾಯತ ಆಗಿ, ಅಂತಃಪೂಜೆಯಾಗಿ ಪ್ರಾಣಲಿಂಗ ಪೂಜೆಯಲ್ಲಿ ವಿಕಾಸಗೊಳಿಸುತ್ತದೆ. ಅಂತಃಪೂಜೆಯು ಕಠಿಣವಾದುದೇನೋ ನಿಜ. ಆದ್ದರಿಂದಲೇ ಈ ಪ್ರಾಣಲಿಂಗದ ಪೂಜೆಗಿಂತ ಮೊದಲು ಇಷ್ಟಲಿಂಗ ಪೂಜೆಯ ಅವಶ್ಯಕತೆಯನ್ನು ತಿಳಿಸಿಕೊಟ್ಟಿರುವರು. ಸರ್ಪಭೂಷಣ ಶಿವಯೋಗಿಗಳ ಪ್ರಾಣಲಿಂಗ ಪೂಜೆಯನ್ನು ತಿಳಿಸುವ "ಲಿಂಗ ಪೂಜೆಯ ಮಾಡಿರೋ ನಿಮ್ಮೊಳು ಪ್ರಾಣಲಿಂಗ ಪೂಜೆಯ ಮಾಡಿರೊ" ಎಂಬ ಪದ್ಯವು  ಮಾರ್ಮಿಕವಾಗಿದೆ. ಬಹಿರಂಗದ ಅಷ್ಟಾವರಣಗಳು:  ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ...