ವಚನ ದಾಸೋಹ - ಪಿಂಡದೊಳಗೆ ಪ್ರಾಣವಿರ್ಪುದ ಎಲ್ಲರೂ ಬಲ್ಲರಲ್ಲದೆ
ವಚನ ದಾಸೋಹ : #ವಚನ: #ಪಿಂಡದೊಳಗೆ ಪ್ರಾಣವಿರ್ಪುದ ಎಲ್ಲರೂ ಬಲ್ಲರಲ್ಲದೆ, ಪ್ರಾಣದೊಳಗೆ ಶಬ್ದವಿರ್ಪುದನಾರೂ ಅರಿಯರಲ್ಲ. ಪ್ರಾಣದೊಳಗೆ ಶಬ್ದವಿರ್ಪುದ ಎಲ್ಲರೂ ಬಲ್ಲರಲ್ಲದೆ, ಶಬ್ದದೊಳಗೆ ನಾದವಿರ್ಪುದನಾರೂ ಅರಿಯರಲ್ಲ. ಶಬ್ದದೊಳಗೆ ನಾದವಿರ್ಪುದ ಎಲ್ಲರೂ ಬಲ್ಲರಲ್ಲದೆ, ನಾದದೊಳಗೆ ಮಂತ್ರವಿರ್ಪುದನಾರೂ ಅರಿಯರಲ್ಲ. ಮಂತ್ರದೊಳಗೆ ಶಿವನಿರ್ಪುದ ಎಲ್ಲರೂ ಬಲ್ಲರಲ್ಲದೆ, ಶಿವನ ಕೂಡುವ ಅವಿರಳಸಮರಸವನಾರೂ ಅರಿಯರಲ್ಲ ಅಖಂಡೇಶ್ವರಾ. - ಷಣ್ಮುಖಸ್ವಾಮಿಗಳು ಸಮಗ್ರ ವಚನ ಸಂಪುಟ: 14 ವಚನದ ಸಂಖ್ಯೆ: 680 *ಅರ್ಥ*: ಜೇವರಗಿಯ ಷಣ್ಮುಖಸ್ವಾಮಿಗಳು ವಚನ ವಾಗ್ಮಯದ ಮೂರನೆ ಘಟ್ಟದ ಪ್ರಮುಖರು. ಇವರ ವಚನಗಳು ಹಾಗೂ ಸ್ವರಪದಗಳು ಅನುಭಾವಪೂರ್ಣವಾಗಿ, ಭಾವೋದ್ದೀಪಕವಾಗಿ ಅಂತರಾತ್ಮತೇಜೋಯುಕ್ತವಾಗಿವೆ. ಇವರು ಅಖಂಡೇಶ್ವರ ಗುರುಗಳ ಉತ್ತರಾಧಿಕಾರಿಯಾಗಿ, ಜೇವರಗಿ ವಿರಕ್ತ ಮಠಕ್ಕೆ ಸ್ವಾಮಿಯಾದವರು. ಆ ಕಾಲದ ಸಾಮಾಜಿಕ ಅಂತರದ ವಿರುದ್ಧ ಹೋರಾಡಿದ ಕ್ರಾಂತಿಕಾರಿ ಶರಣಗುರುಗಳು. ದಲಿತರ ಉದ್ಧಾರಕ್ಕಾಗಿ ಶ್ರಮಿಸಿ ಅವರೊಡನೆ ಸಹಪಂಕ್ತಿಭೋಜನ ಮತ್ತು ಸಮಾನತೆಗಳನ್ನು ಬೋಧಿಸಿ, ಹಾಗೆಯೇ ನಡೆದು ತೋರಿದ ಶಿವಯೋಗಿಗಳು. ಲೋಕ ಸಂಚಾರ ಕೈಕೊಂಡು ಧರ್ಮತತ್ವ ಬೋಧೆ ಮಾಡಿ ಅನೇಕರಿಗೆ ಶಿವದೀಕ್ಷೆಯನ್ನೂ ಕೊಟ್ಟವರು. ಅನುಭಾವ-ತತ್ವ-ಸಾಹಿತ್ಯ ಈ ಮೂರು ಇವರ ವಚನಗಳಲ್ಲಿ ಕಂಡು ಬರುತ್ತವೆ. ವಚನ ನಿರ್ವಚನ: *ಪಿಂಡದೊಳಗೆ ಪ್ರಾಣವಿರ್ಪು...