Posts

Showing posts with the label ವಚನ ದಾಸೋಹ - ಮಠವೇಕೋ

ವಚನ ದಾಸೋಹ - ಮಠವೇಕೋ, ಪರ್ವತವೇಕೋ

Image
ವಚನ ದಾಸೋಹ - ಮಠವೇಕೋ, ಪರ್ವತವೇಕೋ  ವಚನ: #ಮಠವೇಕೋ, ಪರ್ವತವೇಕೋ ; ಜನವೇಕೋ, ನಿರ್ಜನವೇಕೋ ; ಸತ್ಯ ಸಮಾಧಾನವುಳ್ಳ ಶರಣಂಗೆ? ಮತ್ತೆ ಹೊರಗಣ ಚಿಂತೆ, ಧ್ಯಾನ, ಮೌನ, ಜಪವೇಕೋ, ತಪವೇಕೋ,  ತನ್ನ ತಾನರಿದವಂಗೆ ಗುಹೇಶ್ವರಾ? -  ಅಲ್ಲಮ ಪ್ರಭುದೇವರು ಅರ್ಥ: ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಆಧ್ಯಾತ್ಮಿಕ ವಿಚಾರ ಸಂಕಿರಣದಲ್ಲಿ ಅಲ್ಲಮ ಪ್ರಭುಗಳು ಶರಣನ ಗುಣ ಲಕ್ಷಣ ತಿಳಿಸುವ ವಚನ ಇದು. ಅಲ್ಲಮ ಪ್ರಭುಗಳು ಪ್ರಶ್ನೆ ಮಾಡುತ್ತಲೆ ಉತ್ತರವನ್ನೂ ಸೂಚಿಸಿದ್ದಾರೆ. *ಮಠವೇಕೋ, ಪರ್ವತವೇಕೋ ; ಜನವೇಕೋ, ನಿರ್ಜನವೇಕೋ ; ಸತ್ಯ ಸಮಾಧಾನವುಳ್ಳ ಶರಣಂಗೆ?* ಸತ್ಯ ಶಾಂತಿ ಸೈರಣೆ ಸಮಾಧಾನವಿರುವವರು   ಯಾವುದೇ ಮಠಕ್ಕೆ, ದೇವಸ್ಥಾನಕ್ಕೆ,  ಪರ್ವತಕ್ಕೆ ಹೋಗುವ ಅವಶ್ಯಕತೆ ಇರುವುದಿಲ್ಲ, ಶಾಂತಿಯನ್ನು  ಹುಡುಕಿಕೊಂಡು, ನಿರ್ಜನ ಪ್ರದೇಶಕ್ಕೆ ಹೋಗುವ ಅವಶ್ಯಕತೆಯೂ ಇರುವುದಿಲ್ಲ. ನಿರಾಕಾರನಾದ ಶಿವನನ್ನು ಇಷ್ಟಲಿಂಗ ರೂಪದಲ್ಲಿ, ಲಿಂಗಸ್ವಾಯತ್ತ ಮಾಡಿ  ಪ್ರಾಣಲಿಂಗ ಸ್ವರೂಪವಾಗಿ, ಪ್ರಾಣಲಿಂಗ ಶಿವನನ್ನು ಭಾವಲಿಂಗವಾಗಿ ಬಯಲಾಗಿ ಕಾಣಬಲ್ಲವನು ಶರಣನು. ಈ ಶರಣನು ಸದಾಕಾಲ ಶಾಂತಿ, ಸತ್ಯ ಮತ್ತು ಸಮಾಧಾನದಿಂದ ಇರುವವನು. ಇಂಥಹ ಶರಣರಿಗೆ ಶಾಂತಿ ಅರಸುತ್ತಾ ಧ್ಯಾನ ಮಾಡಲು ನಿರ್ಜನ ಪ್ರದೇಶಕ್ಕೆ ಕಾಡಿಗೆ ಹೋಗುವ ಅವಶ್ಯಕತೆ ಇಲ್ಲ. ದೇವರನ್ನು ಅರೆಸುತ್ತಲೋ, ಜನರನ್ನು, ಸಮಾಜವನ್ನು ಮೆಚ್ಚಿಸಲೋ ಯಾವುದೇ ಮಠಕ್ಕೆ, ದ...