Posts

Showing posts with the label ವಚನ ದಾಸೋಹ - ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ

ವಚನ ದಾಸೋಹ - ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ

Image
ವಚನ : ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ; ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ,  ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕರ. -- ಶರಣೆ ಆಯ್ದಕ್ಕಿ ಲಕ್ಕಮ್ಮ * ಅರ್ಥ *: ಮನ ಶುದ್ಧವಿಲ್ಲವರಿಗೆ ದ್ರವ್ಯದ ಬಡತನ, ಹಣದ ಕೊರತೆ ಉಂಟಾಗುತ್ತದೆ. ಆದರೆ ಚಿತ್ತ ಮನ ಶುದ್ಧವಾಗಿ ಸತ್ಯ ಶುದ್ಧ ಕಾಯಕದಲ್ಲಿ,  ತೊಡಗಿಸಿಕೊಂಡವರಿಗೆ, ಎಲ್ಲೆಡೆಯೂ ಲಕ್ಷ್ಮಿಯೇ ಕಂಡು ಬರುತ್ತಾಳೆ. ಎಲ್ಲೆಡೆಯೂ ಸುಖ ಸಮೃದ್ಧಿಯೇ ಕಂಡುಬರುತ್ತದೆ, ಯಾವ ಕೊರತೆಯೂ ಉಂಟಾಗುವುದಿಲ್ಲ ಎನ್ನುತ್ತಾಳೆ ಶರಣೆ ಆಯ್ದಕ್ಕಿ ಲಕ್ಕಮ್ಮ. ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯಲ್ಲಿ ತೊಡಗಿದವರಿಗೆ ಎಲ್ಲೆಡೆಯೂ ಲಕ್ಷ್ಮಿಯೇ ಕಂಡು ಬರುತ್ತಾಳೆ.  *ವಚನ ವಿವೇಚನೆ*:  ಆಸೆಯೇ ಸಕಲ ದುಃಖಕ್ಕೆ ಕಾರಣವೆಂಬ ಭಗವಾನ ಬುದ್ಧರ ಹೇಳಿಕೆಯಂತೆ,  ಆಸೆಗೆ ಬಲಿಯಾದ ಮನಸ್ಸು, ನ್ಯಾಯ ಅನ್ಯಾಯಗಳ ವಿವೇಚನೆಯನ್ನೇ ಕಳೆದುಕೊಂಡು, ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹಗಳಿಗೆ ಗುರಿಯಾಗಿ ಅಶುದ್ಧವಾಗುತ್ತದೆ. ಸಂತೃಪ್ತಿ ಇಲ್ಲದೇ ಸದಾ ತೊಳಲುತ್ತದೆ. ತನ್ನ ಸುತ್ತಮುತ್ತಲೆಲ್ಲ ಅಶಾಂತಿಯಿಂದ ನಕಾರಾತ್ಮಕ ಭಾವನೆಗಳನ್ನು ಪಸರಿಸುತ್ತದೆ.    ನಿಜ ಅರ್ಥದಲ್ಲಿ ನೋಡಿದರೆ ಸರಳವಾಗಿ ಬದುಕಲು ಅವಶ್ಯಕತೆಗಳು ಕಡಿಮೆ. ಬದುಕಲು ಅವಶ್ಯಕವಾದವುಗಳಿಗಿಂತ ಹೆಚ್ಚಿನವುಗಳನ್ನು ಆಶಿಸುವುದು ...