ವಚನ ದಾಸೋಹ - ಸಕಲಭೋಗ ವಿಲಾಸಿತ ಲಿಂಗಕ್ಕೆಂದಲ್ಲಿ
ವಚನ ದಾಸೋಹ - ಸಕಲಭೋಗ ವಿಲಾಸಿತ ಲಿಂಗಕ್ಕೆಂದಲ್ಲಿ ವಚನ: #ಸಕಲಭೋಗ ವಿಲಾಸಿತ ಲಿಂಗಕ್ಕೆಂದಲ್ಲಿ ತನ್ನಂಗಕ್ಕೆ ಶೃಂಗಾರವುಂಟೆ ? ಶ್ರೀರುದ್ರಾಕ್ಷಿ ವಿಭೂತಿಯ ಸ್ವಸ್ಥಾನದಲ್ಲಿ ತನ್ನಂಗಕ್ಕೆ ಶೃಂಗಾರವೆಂದು ಮಾಡಿದಡೆ, ಆ ನಿಜಪದದಂಗವೊಂದು ಇಲ್ಲ ಎಂದನಂಬಿಗ ಚೌಡಯ್ಯ. - ಅಂಬಿಗರ ಚೌಡಯ್ಯನವರು ಸಮಗ್ರ ವಚನ ಸಂಪುಟ: 6 ವಚನದ ಸಂಖ್ಯೆ: 266 ಅಂಬಿಗ ಚೌಡಯ್ಯ ಶರಣರು, ವಿಭೂತಿ ರುದ್ರಾಕ್ಷಿ ಗಳ ಮಹತ್ವವನ್ನು ಅರಿಯದೆ ತನ್ನ ಅಂಗದ ಬಾಹ್ಯ ಶೃಂಗಾರಕ್ಕೆ ಆಡಂಬರಕ್ಕಾಗಿ ಬಳಸುವವರನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಾರೆ. ಅಂತಹ ಡಾಂಬಿಕರಿಗೆ ನಿಜ ಪದದ ಅಂಗತತ್ವಗಳು ಅಂದರೆ ಲಿಂಗ ದೇವನ ತತ್ವಗಳಿಲ್ಲ. ಅವರ ಅಂಗ ತತ್ವಗಳು ಪರಶಿವನ ಲಿಂಗತತ್ವಗಳಾಗಿ ಮಾರ್ಪಾಡುವಾಗುವದಿಲ್ಲ. ಹೀಗೆ ಅವರು ಅಂಗ-ಲಿಂಗ ಸಮರಸದಿಂದ ವಂಚಿತರಾಗುವವರು. ವಿಭೂತಿ ರುದ್ರಾಕ್ಷಿಗಳ ಶೃಂಗಾರದ ಸಮರ್ಪಿತ ಭಾವವನ್ನು ಅಂಬಿಗರ ಚೌಡಯ್ಯ ಸೂಚಿಸಿದ್ದಾರೆ. ಮನ ಶುಚಿಯಾಗದೆ ತನು ಬತ್ತಲೆಯಾದರೇನು ? ಭಾವ ಬಯಲಾಗದೆ ಮಂಡೆ ಬೋಳಾದರೇನು? ಕೇವಲ ಬಹಿರಂಗದ ಕ್ರಿಯೆ ಆಚರಣೆ ಆಗಬಾರದು ಎನ್ನುತ್ತಾರೆ ಅಲ್ಲಮ ಪ್ರಭುಗಳು. ಅಲ್ಲಮ ಪ್ರಭುಗಳು ವಿಭೂತಿ ರುದ್ರಾಕ್ಷಿ ಗಳನ್ನು ಶೃಂಗಾರಕ್ಕೆ ಲೋಕದ ಜನರನ್ನು ಮೆಚ್ಚಿಸಲಿಕ್ಕೆ ಧರಿಸುವ ಡಾಂಭಿಕ ಭಕ್ತರನ್ನು ಖಂಡಿಸುತ್ತಾರೆ. "ಭಸ್ಮವ ಪೂಸಿದೊಡೇನು ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ ?” ಎಂದು ಆಶೆಯ ವೇಷಕ್ಕೆ ಗುರಿಯಾ...