ವಚನ ದಾಸೋಹ:ಬ್ರಹ್ಮಪದವಿಯನೊಲ್ಲೆ ವಿಷ್ಣುಪದವಿಯನೊಲ್ಲೆ
ವಚನ ದಾಸೋಹ: ಬ್ರಹ್ಮಪದವಿಯನೊಲ್ಲೆ ವಿಷ್ಣುಪದವಿಯನೊಲ್ಲೆ ವಚನ: #ಬ್ರಹ್ಮಪದವಿಯನೊಲ್ಲೆ ವಿಷ್ಣುಪದವಿಯನೊಲ್ಲೆ ರುದ್ರಪದವಿಯನೊಲ್ಲೆ ನಾನು ಮತ್ತಾವ ಪದವಿಯನೊಲ್ಲೆನಯ್ಯಾ, ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ. - ಗುರು ಬಸವಣ್ಣನವರು *Translation*: I do not seek The Brahma rank; I do not seek The Viṣṇu rank; I do not seek The Rudra rank. I seek, O Lord, No other rank! Give me of Thy grace The privilege to know the feet Of Thy true devotees! *ಅರ್ಥ*: ಬಸವಣ್ಣನವರಿಗೆ ಮುಖ್ಯವಾದದ್ದು ನಿರ್ಗುಣ ತತ್ತ್ವಾತೀತವಾದ ಪರಶಿವನ ಅಂಶವಾದ ಶಿವಶರಣರ ಭಕ್ತಿಯ ಸತ್ಸಂಗ. ಬ್ರಹ್ಮಪದವಿ ಅಲ್ಲ, ವಿಷ್ಣುಪದವಿ ಅಲ್ಲ, ರುದ್ರಪದವಿ ಅಲ್ಲ. ಯಾವುದೇ ಪದವಿಯ ಆಶೆ ಇಲ್ಲ. ನಿಮ್ಮ ಸದ್ಭಕ್ತರ ಭಕ್ತಿಯ ಪಾದವನ್ನು ಅರಿಯುವುದೇ ಮಹಾಪದವಿ; ಅದನ್ನು ಕರುಣಿಸಯ್ಶಾ ಎಂದು ಕೂಡಲಸಂಗಮದೇವನಲ್ಲಿ ಬೇಡಿಕೊಳ್ಳುತ್ತಾರೆ. ಸದ್ಭಕ್ತ ಎಂದರೆ ಯಾರು? #ಭೂತಿರುದ್ರಾಕ್ಷಸಂಯುಕ್ತೋ ಲಿಂಗಧಾರೀ ಸದಾಶಿವಃ | ಪಂಚಾಕ್ಷರಜಪೋದ್ಯೋಗೀ ಶಿವಭಕ್ತ ಇತಿ ಸ್ಮೃತಃ || 9-1 ವಿಭೂತಿ ರುದ್ರಾಕ್ಷಿಗಳನ್ನು ಧರಿಸಿದ, ಇಷ್ಟಲಿಂಗಧಾರಿಯಾದ, ಅಂತೆಯೇ ಸದಾ ಮಂಗಳಸ್ವರೂಪನಾದ ಮತ್ತು ಪಂಚಾಕ್ಷರ ಜಪದಲ್ಲಿ ನಿರತನಾದವನು ಶಿವಭಕ್ತ ಎಂದು ಕರೆಯಲ್ಪಡುತ್ತಾರೆ. ಇದು ಬಾಹ್ಯ ಸ್ವರೂಪವಾದರೆ, ಅ...