ವಚನ ದಾಸೋಹ:ಬ್ರಹ್ಮಪದವಿಯನೊಲ್ಲೆ ವಿಷ್ಣುಪದವಿಯನೊಲ್ಲೆ


ವಚನ ದಾಸೋಹ:
ಬ್ರಹ್ಮಪದವಿಯನೊಲ್ಲೆ ವಿಷ್ಣುಪದವಿಯನೊಲ್ಲೆ
ವಚನ:
#ಬ್ರಹ್ಮಪದವಿಯನೊಲ್ಲೆ ವಿಷ್ಣುಪದವಿಯನೊಲ್ಲೆ ರುದ್ರಪದವಿಯನೊಲ್ಲೆ ನಾನು ಮತ್ತಾವ ಪದವಿಯನೊಲ್ಲೆನಯ್ಯಾ, ಕೂಡಲಸಂಗಮದೇವಾ,
ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ.
- ಗುರು ಬಸವಣ್ಣನವರು
*Translation*:
I do not seek
The Brahma rank;
I do not seek
The Viṣṇu rank;
I do not seek
The Rudra rank.
I seek, O Lord,
No other rank!
Give me of Thy grace
The privilege to know the feet
Of Thy true devotees!

*ಅರ್ಥ*:
   ಬಸವಣ್ಣನವರಿಗೆ ಮುಖ್ಯವಾದದ್ದು ನಿರ್ಗುಣ ತತ್ತ್ವಾತೀತವಾದ ಪರಶಿವನ ಅಂಶವಾದ ಶಿವಶರಣರ ಭಕ್ತಿಯ ಸತ್ಸಂಗ. ಬ್ರಹ್ಮಪದವಿ ಅಲ್ಲ, ವಿಷ್ಣುಪದವಿ ಅಲ್ಲ, ರುದ್ರಪದವಿ ಅಲ್ಲ. ಯಾವುದೇ ಪದವಿಯ ಆಶೆ ಇಲ್ಲ. ನಿಮ್ಮ ಸದ್ಭಕ್ತರ ಭಕ್ತಿಯ ಪಾದವನ್ನು ಅರಿಯುವುದೇ ಮಹಾಪದವಿ; ಅದನ್ನು  ಕರುಣಿಸಯ್ಶಾ ಎಂದು ಕೂಡಲಸಂಗಮದೇವನಲ್ಲಿ ಬೇಡಿಕೊಳ್ಳುತ್ತಾರೆ.

ಸದ್ಭಕ್ತ ಎಂದರೆ ಯಾರು?
#ಭೂತಿರುದ್ರಾಕ್ಷಸಂಯುಕ್ತೋ
ಲಿಂಗಧಾರೀ ಸದಾಶಿವಃ |
ಪಂಚಾಕ್ಷರಜಪೋದ್ಯೋಗೀ
ಶಿವಭಕ್ತ ಇತಿ ಸ್ಮೃತಃ || 9-1
ವಿಭೂತಿ ರುದ್ರಾಕ್ಷಿಗಳನ್ನು ಧರಿಸಿದ, ಇಷ್ಟಲಿಂಗಧಾರಿಯಾದ, ಅಂತೆಯೇ ಸದಾ ಮಂಗಳಸ್ವರೂಪನಾದ ಮತ್ತು ಪಂಚಾಕ್ಷರ ಜಪದಲ್ಲಿ ನಿರತನಾದವನು ಶಿವಭಕ್ತ ಎಂದು ಕರೆಯಲ್ಪಡುತ್ತಾರೆ. ಇದು ಬಾಹ್ಯ ಸ್ವರೂಪವಾದರೆ, ಅಂತರಂಗದಲ್ಲಿ 
ಸೃಷ್ಟಿಯ ರಚನೆಗಿಂತ ಮೊದಲಿದ್ದ ಬಟ್ಟ ಬಯಲೇ ತಾನು ಎಂದು ಅರಿತ ಮಹಾಶರಣ "ಅರಿವನ್ನೆ ಗುರುವಾಗಿ ಮಾಡಿ" ಆ ಅರಿವಿನಿಂದ ತಾನೇ ದೇವರ ಸ್ವರೂಪ ಎಂದು ಅರಿತವನು. ಇಂತಹ ಸದ್ಭಕ್ತರ ಸತ್ಸಂಗ ಸಹವಾಸ ಬ್ರಹ್ಮಪದವಿ, ವಿಷ್ಣುಪದವಿ, ರುದ್ರಪದವಿ, ಯಾವುದೇ ಪದವಿಗಿಂತ ಹೆಚ್ಚಿನದು ಏನ್ನುತ್ತಾರೆ ಗುರು ಬಸವಣ್ಣನವರು.

ಇನ್ನೊಂದು ವಚನದಲ್ಲಿ ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು ಎಂದು ಕೇಳಿಕೊಳ್ಳುತ್ತಾರೆ. ಭೃತ್ಯಾಚಾರವನ್ನೇ  ಮೈ-ಮನವಾಗಿರಿಸಿ ಕೊಂಡವರು ಗುರು ಬಸವಣ್ಣನವರು. "ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ" ಎಂಬ ಈ ಭಾವವೇ ಆನೇಕ ಸಾಧಕರನ್ನು ಶರಣರನ್ನು ಕಲ್ಯಾಣಕ್ಕೆ ಸೆಳೆಯಿತು.
#ಮೇಲಾಗಲೊಲ್ಲೆನು ಕೀಳಾಗಲಲ್ಲದೆ,
 ಕೀಳಿಂಗಲ್ಲದೆ ಹಯನು ಕರೆವುದೆ ಮೇಲಾಗಿ ನರಕದಲೋಲಾಡಲಾರೆನು. 
ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು, ಮಹಾದಾನಿ ಕೂಡಲಸಂಗಮದೇವಾ.

#ಕಾಗೆ ವ್ಟಿಸುವ ಹೊನ್ನಕಳಸವಹುದರಿಂದ
ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯಾ.
ಅಯ್ಯಾ ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯಾ.
ಕರ್ಮಾವಲಂಬಿನಃ ಕೇಚಿತ್ ಕೇಚಿತ್ ಜ್ಞಾನಾವಲಂಬಿನಃ
ವಯಂ ತು ಶಿವಭಕ್ತಾನಾಂ ಪಾದರಕ್ಷಾವಲಂಬಿನಃ
ಕೂಡಲಸಂಗಮದೇವಾ,
ನಿಮ್ಮ ಸೆರಗೊಡ್ಡಿ ಬೇಡುವುದೊಂದೇ ವರವ ಕರುಣಿಸಯ್ಯಾ. / 499
- ✍️Dr Prema Pangi 
ಶರಣು ಶರಣಾರ್ಥಿ 🙏

Comments

Popular posts from this blog

ವಚನ ದಾಸೋಹ: ರೂಪನೆ ಕಂಡರು, ನಿರೂಪ ಕಾಣರು.

Ajna system

Shika chakra or Bindu chakra:Bindu visarga