Posts

Showing posts with the label ಶರಣ ಪರಿಚಯ : ನುಲಿಯ ಚಂದಯ್ಯ

ಶರಣ ಪರಿಚಯ : ನುಲಿಯ ಚಂದಯ್ಯ

Image
ಶರಣ ಪರಿಚಯ:*ನುಲಿಯ ಚಂದಯ್ಯ* 12 ನೆಯ ಶತಮಾನದ ಕಾಯಕಯೋಗಿ ಶರಣರು. ಅಂಕಿತನಾಮ: ಚಂದೇಶ್ವರಲಿಂಗ ಕಾಯಕ: ನುಲಿಯ ಕಾಯಕ.  ಹಗ್ಗ ಹೊಸೆದು ಮಾರುವುದು.    ಕಾಯಕಯೋಗಿ ಶರಣ ನುಲಿಯ ಚಂದಯ್ಯನವರು ಕಲ್ಯಾಣ ರಾಜ್ಯದ ಹೊರವಲಯದ ಕೆರೆಯ ಹಿನ್ನಿರ ದಡದಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು ಹಗ್ಗ ಹೊಸೆದು, ಮಾರಿ ಬಂದ ಹಣದಿಂದ ಗುರು, ಜಂಗಮ ದಾಸೋಹ ನಡೆಸುತ್ತಿದ್ದರು.   ಕಾಲ :  1160.  ಹುಟ್ಟು : ಬಿಜಾಪುರ ಜಿಲ್ಲೆಯ ಶಿವಣಗಿ ಈತನ ಹುಟ್ಟೂರು.  ಲಿಂಗೈಕ್ಯ : ಚಿತ್ರದುರ್ಗದಿಂದ ಹೊಳಲ್ಕೆರೆಗೆ ಬರುವ ಮಾರ್ಗದ ನುಲೆನೂರು ಗ್ರಾಮದಲ್ಲಿ  ಅನುಷ್ಠಾನ ಮಾಡಿ ಅಲ್ಲಿಯೇ ಲಿಂಗೈಕ್ಯರಾದರು. ಚಂದಯ್ಯನವರ ತಂದೆ, ತಾಯಿ, ಗುರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ.  ' ಚಂದೇಶ್ವರ' ಅಂಕಿತದಲ್ಲಿ 48 ವಚನಗಳು ದೊರೆತಿವೆ. ಎಲ್ಲವೂ ಕಾಯಕದ ಮೌಲ್ಯವನ್ನು ಎತ್ತಿ ಹಿಡಿಯುತ್ತವೆ.  *ಇವರ ವಚನಗಳ ಸಾರ* : ಗುರು, ಲಿಂಗ, ಜಂಗಮ ಎಲ್ಲರಿಗೂ ಕಾಯಕ ಕಡ್ಡಾಯ. ಭಾವ ಶುದ್ಧವಾಗಿ ಮಾಡುವುದೇ ನಿಜವಾದ ಕಾಯಕ. ಕಾಯಕಕ್ಕೆ ಸಮನಾದ ಕೂಲಿಯನ್ನು ಕೊಳ್ಳಬೇಕಲ್ಲದೆ ದುರಾಶೆ ಪಡಬಾರದು. ಪುರಾಣ ಕಾವ್ಯಗಳಲ್ಲಿ ಚಂದಯ್ಯನ ಬದುಕಿನ ಘಟನೆಗಳು: ಹುಲ್ಲು ಕೊಯ್ಯುವ ಕಾಯಕದಲ್ಲಿ ನಿರತರಾಗಿರುವಾಗ ಚಂದಯ್ಯನನ್ನು ಪರೀಕ್ಷಿಸಲು ಇಷ್ಟಲಿಂಗ ಹರಿದು ಜಾರಿ ಕೆಳಗೆ ಬೀಳುತ್ತದೆ. ಬಿದ್ದರೂ ಲೆಕ್ಕಿಸದೆ, ಎತ್ತಿಕೊಳ್ಳದೆ ಕಾಯಕ ಮುಂದುವರ...