ಶರಣ ಪರಿಚಯ : ಮೆರೆಮಿಂಡಯ್ಯ
ಶರಣ ಪರಿಚಯ : ಮೆರೆಮಿಂಡಯ್ಯ *ಶರಣ ಮೆರೆಮಿಂಡಯ್ಯ* ಇವರು ಬಸವಾದಿಶರಣರ ಸಮಕಾಲೀನರು. ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಇವರೂ ಒಬ್ಬ ವಚನಕಾರ ಶರಣರು. ಕಾಲ : 1160. ಇವರು ತಮಿಳುನಾಡಿನ 63 ಪುರಾತನರಲ್ಲಿ ಒಬ್ಬನಾಗಿರುವ 'ಮೆರೆಮಿಂಡದೇವ' ಬೇರೆ ಇವರು ಬೇರೆ. ವಚನಾಂಕಿತ : "ಐಘಟದೂರ ರಾಮೇಶ್ವರ ಲಿಂಗ' ರೇವಣಸಿದ್ಧರ ಮಗ ರುದ್ರಮುನಿಯಿಂದ ಲಿಂಗದೀಕ್ಷೆ ಪಡೆದ ಮೆರೆಮಿಂಡಯ್ಯನವರು ರೇವಣಸಿದ್ಧರನ್ನು ಗುರು ಎಂದೇ ಸ್ತೋತ್ರ ಮಾಡಿದ್ದಾರೆ. ಲಭ್ಯವಿರುವ ವಚನಗಳು: ೧೧೦ ವಚನಗಳಲ್ಲಿ ಅಷ್ಟಾವರಣ, ಲಿಂಗಾಂಗ ಸಾಮರಸ್ಯ ಈ ಮೊದಲಾದ ತಾತ್ವಿಕ ವಿಷಯ, ಸಾಮಾಜಿಕ ವಿಡಂಬನೆಗಳು ಸರಳ ಶೈಲಿಯಲ್ಲಿ ನಿರೂಪಿತವಾಗಿವೆ. ಅನೇಕ ಶರಣರನ್ನು ಗೌರವದಿಂದ ಸ್ಮರಿಸಿದ್ದಾರೆ. ಇವರ ಕಾಯಕದ ಬಗ್ಗೆ ಮಾಹಿತಿಯಿಲ್ಲ. ಆದರೆ ಕಾಯಕದ ಮಹತ್ವವನ್ನು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ' ಯಾವುದೇ ಕಾಯಕವಿರಲಿ, ಅದನ್ನು ಮಾಡುವಾಗ ಹುಸಿಯಿಲ್ಲದಿರಬೇಕು, ಅದು ಶಿವನವರ, ಪಶುಪತಿಯ ವಾಸಸ್ಥಾನ, ಅದು ಪ್ರತ್ಯಕ್ಷ ಪರಮೇಶ್ವರ' ಎಂದು ಕಾಯಕದ ಬಗ್ಗೆ ತುಂಬಾ ಆದರ ಗೌರವದಿಂದ ಬರೆದಿದ್ದಾರೆ. ಗುರುವಾಗಿ ದೀಕ್ಷೆಯನ್ನು ಅನುಗ್ರಹಿಸಿ ಆ ಭಕ್ತರ ಮನೆಯಲ್ಲಿ ಉಣ್ಣಲೊಲ್ಲದೆ ಅಕ್ಕಿ ತುಪ್ಪವನ್ನು ಪಡೆದು, ಪ್ರತ್ಯೇಕವಾಗಿ ಅಡುಗೆ ಮಾಡಿ ಉಣ್ಣುವ ಗುರುವನ್ನು ತೀವ್ರವಾಗಿ ಟೀಕಿಸಿರುವರು. ಶರಣ ಮೆರೆಮಿಂಡಯ್ಯನವರ ವಚನಗಳು: 1.ವಚನ: #ಎನ್ನ ಘ್ರಾಣ ಶುದ್ಧವ...