ಶರಣ ಪರಿಚಯ : *ಶರಣ ಚಂದಿಮರಸ*
*ಶರಣ ಪರಿಚಯ : *ಶರಣ ಚಂದಿಮರಸ* * ಶರಣ ಪರಿಚಯ : *ಶರಣ ಚಂದಿಮರಸ* ಇವರು ವಚನಕಾರ ಶಿವಶರಣರು. ಕಾಲ : ಸು. 1020. (ಬಸವಣ್ಣನವರ ಹಿರಿಯ ಸಮಕಾಲೀನರು. ಚಂದಿಮರಸ ಹೆಸರಿನವರು ಒಬ್ಬರೋ ಇಬ್ಬರೋ ಎಂದು ಜ್ಞಿಜ್ಞಾಸೆ ಇದೆ. ಈತ ಜೇಡರ ದಾಸಿಮಯ್ಯನಿಗಿಂತ ಹಿಂದೆ ಇದ್ದಿರಬೇಕೆಂದು ಸಂಶೋಧಕರಾದ ಡಿ.ಎಲ್.ನರಸಿಂಹಾಚಾರ್ ಅವರ ಅಭಿಪ್ರಾಯ. ಕಾಯಕ : ಗುಲ್ಬರ್ಗ ಜಿಲ್ಲೆಯ ಕೆಂಭಾವಿಯಲ್ಲಿ ಅರಸನಾಗಿದ್ದರು. ಲಭ್ಯವಾದ ವಚನಗಳು: 157 ಈತ ಚಾಡಿ ಮಾತುಗಳನ್ನು ಕೇಳಿ,ತಮ್ಮ ರಾಜ್ಯದ ಪ್ರಜೆಯಾಗಿದ್ದ ಭೋಗಣ್ಣನೆಂಬ ಶರಣರನ್ನು ಊರಿನಿಂದ ಓಡಿಸಿದನೆಂದೂ ಆತನ ಹಿಂದೆಯೇ ಆ ಊರಿನ ಲಿಂಗಗಳೆಲ್ಲ (ಶರಣರೆಲ್ಲ?)ಹೋಗಲು ರಾಜ ಭೋಗಣ್ಣ ಶರಣನನ್ನು ಹಿಂದಕ್ಕೆ ಕರೆಸಿ ತಾನು ವೀರಶೈವ ಧರ್ಮವನ್ನು ಸ್ವೀಕರಿಸಿ, ರಾಜ್ಯಕೋಶಗಳನ್ನು ತೊರೆದು, ಕೃಷ್ಣಾ ನದೀತೀರದ ಚಿಮ್ಮಲಿಗೆಯಲ್ಲಿ ವಾಸಿಸುತ್ತ ಗುರು ನಿಜಗುಣ ರಿಂದ ವೀರಶೈವ ದೀಕ್ಷೆ ಪಡೆದು ತಾನೂ ಗುರುವಿನಂತೆ ವಚನಕಾರನಾಗಿ ಧರ್ಮಪ್ರಸಾರ ಕೈಗೊಂಡು ಚಿಮ್ಮಲಿಗೆಯಲ್ಲಿಯೇ ಸಮಾಧಿಸ್ಥನಾದರೆಂದು ಪ್ರತೀತಿ. ಚಿಮ್ಮಲಿಗೆಯಲ್ಲಿ ಇವರ ಹೆಸರಿನಲ್ಲಿ ಒಂದು ಗುಡಿ ಇಂದಿಗೂ ಇದೆ. ಘನಲಿಂಗ ಈತನನ್ನು ಮಹಾತ್ಮನೆಂದು ತನ್ನ ವಚನಗಳಲ್ಲಿ ಹಾಡಿದ್ದಾನೆ. ಅಂಕಿತ: ಸಿಮ್ಮಲಿಗೆಯ ಚೆನ್ನರಾಮ ಅರಿವು, ಗುರು-ಶಿಷ್ಯರ ಸಂಬಂಧ, ಇಷ್ಟಲಿಂಗ ದೀಕ್ಷೆ, ದೈವ, ಮಾಯೆ, ಅರಿವು. ಆತ್ಮಜ್ಞಾನ, ಶ...