ಶರಣ ಪರಿಚಯ: ಮಹಾಶರಣ ಹರಳಯ್ಯನವರು
12ನೇ ಶತಮಾನದಲ್ಲಿ ಬಸವಾದಿ ಶರಣರ ಸಾಲಿನಲ್ಲಿ ಅತ್ಯಂತ ಹಿರಿಯ ಮತ್ತು ಸಮರ್ಥ ಸಿದ್ಧಿಯೋಗಿ ಸಂಕಲ್ಪ ಸಾಧಕ ಶರಣರು ಸಮಗಾರ ಹರಳಯ್ಯನವರು. ಬಸವಧರ್ಮವನ್ನು ಎತ್ತಿ ಹಿಡಿದ ಮಹಾಮಾನವತಾವಾದಿ ಶರಣರು. ತಂದೆ :ಪಾರಪಯ್ಯ, ತಾಯಿ : ಹೊನ್ನಮ್ಮ ಜನ್ಮಸ್ಥಳ : ವಿಜಯಪುರ ಜಿಲ್ಲೆ ಕಲಿಗೂಡು ದವನದ ಹುಣ್ಣಿಮೆಯಂದು ಹರಳ ಪೂಜೆಯ ಫಲವಾಗಿ ಜನಿಸಿದನೆಂದು ಹರಳಯ್ಯಎಂದು ನಾಮಕರಣ ಮಾಡುತ್ತಾರೆ. ಆ ಮನೆತನಕ್ಕೆ ಇಂದಿಗೂ ಹರಳಯ್ಯನ ಮಠ ಎಂದು ಕರೆಯುತ್ತಾರೆ. “ದವಣದ ಹುಣ್ಣಿಮೆ ದಿನ ಬಂತು ಧರೆ ದೇವ ಹರಳಯ್ಯ ಧರೆಗೆ ಬಂದಾನೊ” ಜನಪದದಲ್ಲಿ ಶರಣ ಹರಳಯ್ಯನ ಜನನವನ್ನು ಪದ ಕಟ್ಟಿ ಜಾನಪದರು ಹಾಡುತ್ತಾರೆ. ಅರಳಲಿಂಗ ಪೂಜೆಯ ಫಲವಾಗಿ ಜನಿಸಿದ ಶರಣನೇ ಅರಳಲಿಂಗ ಮುಂದೆ ಜಾನಪದರಲ್ಲಿ ಹರಳಯ್ಯ ಎಂದು ಪ್ರಸಿದ್ಧ ಶರಣನಾದನು. ಹರಳಯ್ಯನವರು ಬಾಲ್ಯದಲ್ಲಿಯೇ ಅನೇಕ ಪವಾಡಗಳನ್ನು ಮಾಡಿದ್ದರು. ಬಾಯಿಂದ ಬಂದ ಮಾತು ದಿಟವಾಗುವಂತ ಮಹಾನ ಚೇತನಶಕ್ತಿ ಆವರಲ್ಲಿತ್ತು. ಬಸವಕಲ್ಯಾಣ ಸೇರುವ ಪೂರ್ವದಲ್ಲಿಯೇ ಹರಳಯ್ಯ ಸಾತ್ವಿಕ ಶರಣರಾಗಿದ್ದರು. ಅವರ ಅನೇಕ ಪವಾಡ ಕಥೆಗಳಿವೆ. ಇಡೀ ಬಡಾವಣೆಗೆ ಬೆಂಕಿ ಹತ್ತಿ ಉರಿಯುತ್ತಿರುವಾಗ ಮಳೆ ತರಿಸಿದ್ದರು, ತನ್ನ ಪ್ರದೇಶದ ರಾಜನಿಗೆ ಹಾವು ಕಚ್ಚಿದಾಗ ತಮ್ಮ ಶಕ್ತಿಯಿಂದ ಬದುಕುಳಿಯುವಂತೆ ಮಾಡಿದ್ದರು. ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿಗಳು ಇಂದಿನ ಗುಲಬರ್ಗಾ ಜಿಲ್ಲೆಯ ಮುದೇನೂರ ದಲ್ಲಿ ವಾಸಿಸು...