*ಸರ್ದಾರ್ ವಲ್ಲಭಭಾಯ್ ಪಟೇಲ್* ರಾಷ್ಟ್ರೀಯ ಏಕತಾ ದಿನದ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ರ ಜಯಂತಿಯ ಶುಭಾಶಯಗಳು.🌷🌷🌷🌷🌷🌷
*ಸರ್ದಾರ್ ವಲ್ಲಭಭಾಯ್ ಪಟೇಲ್* : * ಭಾರತದ ಏಕೀಕರಣ ನೇತಾರ ಸರ್ದಾರ್ ವಲ್ಲಭಭಾಯ್ ಪಟೇಲ್* : ಜನನ : ಅಕ್ಟೋಬರ್ 31, 1875 ನಾಡಿಯಾಡ್ , ಗುಜರಾತ್ ಮರಣ : 1950 ಡಿಸೆಂಬರ್ 15, ಮುಂಬೈ ಪ್ರಶಸ್ತಿಗಳು : ಭಾರತ ರತ್ನ ಶಿಕ್ಷಣ : ಪ್ರಾಥಮಿಕ ಶಿಕ್ಷಣ : ಕರಮ್ ಸಾದ್ ಪ್ರೌಡ ಶಿಕ್ಷಣ : ಪೆಟ್ಲಾಡ್ ಜಿಲ್ಲಾ ನ್ಯಾಯವಾದಿ ಪರೀಕ್ಷೆ ಪಾಸು ಮಾಡಿ ಕಾನೂನು ಅಭ್ಯಾಸ ಮಾಡಿದರು. 1900ರಲ್ಲಿ ಗೋದ್ರಾದಲ್ಲಿ ಅವರು ಸ್ವತಂತ್ರ ಜಿಲ್ಲಾ ನ್ಯಾಯವಾದಿ ಕಚೇರಿಯನ್ನು ಸ್ಥಾಪಿಸಿದರು. 1910ರಲ್ಲಿ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ ಗೆ ತೆರಳಿದರು. 1913ರಲ್ಲಿ ಅವರು ಭಾರತಕ್ಕೆ ಮರಳಿ ಅಹ್ಮದಾಬಾದ್ ನಲ್ಲಿ ನೆಲೆಸಿ. ಅಹ್ಮದಾಬಾದ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಕಾನೂನಿನ ಬ್ಯಾರಿಸ್ಟರ್ ಆಗಿದ್ದರು. ಉದ್ಯೋಗ ಕ್ಷೇತ್ರ: 1917-1924ರ ತನಕ ಪಟೇಲ್ ಅವರು ಅಹ್ಮದಾಬಾದ್ ನಲ್ಲಿ ಭಾರತದ ಮೊದಲ ಪಾಲಿಕೆ ಕಮಿಷನರ್ ಆಗಿ ಕಾರ್ಯನಿರ್ವಹಿಸಿದರು ಮತ್ತು 1924-1928ರ ವರೆಗೆ ಅವರು ಅಹ್ಮದಾಬಾದ ಪಾಲಿಕೆಯ ಅಧ್ಯಕ್ಷರಾಗಿದ್ದರು. ಹೋರಾಟದ ಕ್ಷೇತ್ರ: ಭಾರೀ ಮಳೆಯಿಂದಾಗಿ ಬೆಳೆಗೆ ಹಾನಿ ಆಗಿದ್ದರೂ ಆಗಿನ ಬಾಂಬೆ ಸರ್ಕಾರವು ಸಂಪೂರ್ಣ ವಾರ್ಷಿಕ ಕರ ವಿಧಿಸಿದ್ದನ್ನು ವಿರೋಧಿಸಿ 1918ರಲ್ಲಿ ಸರ್ದಾರ್ ಅವರು ಗುಜರಾತಿನ ಕೈರಾದ ರೈತರು ಮತ್ತು ಭ...