*ಸರ್ದಾರ್ ವಲ್ಲಭಭಾಯ್ ಪಟೇಲ್* ರಾಷ್ಟ್ರೀಯ ಏಕತಾ ದಿನದ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ರ ಜಯಂತಿಯ ಶುಭಾಶಯಗಳು.🌷🌷🌷🌷🌷🌷


*ಸರ್ದಾರ್ ವಲ್ಲಭಭಾಯ್ ಪಟೇಲ್* :

*ಭಾರತದ ಏಕೀಕರಣ ನೇತಾರ 
ಸರ್ದಾರ್ ವಲ್ಲಭಭಾಯ್ ಪಟೇಲ್* :

ಜನನ : ಅಕ್ಟೋಬರ್ 31, 1875
            ನಾಡಿಯಾಡ್ , ಗುಜರಾತ್
ಮರಣ :  1950 ಡಿಸೆಂಬರ್ 15,  ಮುಂಬೈ
ಪ್ರಶಸ್ತಿಗಳು : ಭಾರತ ರತ್ನ

ಶಿಕ್ಷಣ :
ಪ್ರಾಥಮಿಕ ಶಿಕ್ಷಣ : ಕರಮ್ ಸಾದ್ 
ಪ್ರೌಡ ಶಿಕ್ಷಣ : ಪೆಟ್ಲಾಡ್
ಜಿಲ್ಲಾ ನ್ಯಾಯವಾದಿ ಪರೀಕ್ಷೆ ಪಾಸು ಮಾಡಿ ಕಾನೂನು ಅಭ್ಯಾಸ ಮಾಡಿದರು.
1900ರಲ್ಲಿ ಗೋದ್ರಾದಲ್ಲಿ ಅವರು ಸ್ವತಂತ್ರ ಜಿಲ್ಲಾ ನ್ಯಾಯವಾದಿ ಕಚೇರಿಯನ್ನು ಸ್ಥಾಪಿಸಿದರು. 1910ರಲ್ಲಿ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ ಗೆ  ತೆರಳಿದರು.
1913ರಲ್ಲಿ ಅವರು ಭಾರತಕ್ಕೆ ಮರಳಿ ಅಹ್ಮದಾಬಾದ್ ನಲ್ಲಿ ನೆಲೆಸಿ. ಅಹ್ಮದಾಬಾದ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಕಾನೂನಿನ ಬ್ಯಾರಿಸ್ಟರ್ ಆಗಿದ್ದರು.

ಉದ್ಯೋಗ ಕ್ಷೇತ್ರ:
1917-1924ರ ತನಕ ಪಟೇಲ್ ಅವರು ಅಹ್ಮದಾಬಾದ್ ನಲ್ಲಿ ಭಾರತದ ಮೊದಲ ಪಾಲಿಕೆ ಕಮಿಷನರ್ ಆಗಿ ಕಾರ್ಯನಿರ್ವಹಿಸಿದರು ಮತ್ತು 1924-1928ರ ವರೆಗೆ ಅವರು ಅಹ್ಮದಾಬಾದ ಪಾಲಿಕೆಯ ಅಧ್ಯಕ್ಷರಾಗಿದ್ದರು.

ಹೋರಾಟದ  ಕ್ಷೇತ್ರ:
 ಭಾರೀ ಮಳೆಯಿಂದಾಗಿ ಬೆಳೆಗೆ ಹಾನಿ ಆಗಿದ್ದರೂ ಆಗಿನ ಬಾಂಬೆ ಸರ್ಕಾರವು ಸಂಪೂರ್ಣ ವಾರ್ಷಿಕ ಕರ ವಿಧಿಸಿದ್ದನ್ನು  ವಿರೋಧಿಸಿ 1918ರಲ್ಲಿ ಸರ್ದಾರ್ ಅವರು ಗುಜರಾತಿನ ಕೈರಾದ ರೈತರು ಮತ್ತು ಭೂಮಾಲೀಕರ ಬೃಹತ್ ಚಳವಳಿಯ ಮುಂದಾಳತ್ವ ವಹಿಸಿದರು.

1928ರಲ್ಲಿ ಅವರು ಬರ್ಡೊಲಿ ಚಳವಳಿಯನ್ನು ಯಶಸ್ವಿಯಾಗಿ ಆಯೋಜಿಸಿದರು ಮತ್ತು ಅವರ ಕಾರ್ಯ ದಕ್ಷತೆಗೆ ನಿರಾಡಂಬರ ಸ್ವಚ್ಚ ವ್ಯಕ್ತಿತ್ವದ ಕಾರಣ , ಅಪಾರ ಜನಪ್ರಿಯತೆ ಗಳಿಸಿದರು. ಅವರಿಗೆ ಜನರು "ಸರ್ದಾರ್'' ಎಂದು ಪ್ರೀತಿಯಿಂದ ಬಿರುದು ನೀಡಿದರು. ಸರ್ದಾರ್ ಅರ್ಥ ನಾಯಕ "ನಮ್ಮ ನಾಯಕ' ಎಂದು ಅಭಿಮಾನ ವ್ಯಕ್ತ ಪಡಿಸಿದರು.

 ಕ್ವಿಟ್ ಇಂಡಿಯಾ ಚಳವಳಿಯನ್ನು ಉತ್ತೇಜಿಸುವುದರ ಜೊತೆಯಲ್ಲೇ, ಕಾಂಗ್ರೆಸ್ ಪಕ್ಷವನ್ನು 1934 ಮತ್ತು 1937ರ ಚುನಾವಣೆಗಳಲ್ಲಿ ಮುನ್ನಡೆಸಿದರು.

1931ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಕರಾಚಿ ಅಧಿವೇಶನದಲ್ಲಿ ಅವರು ಅಧ್ಯಕ್ಷರಾದರು.

ಸೇವೆ ಕ್ಷೇತ್ರಗಳು:
- ಪಟೇಲ್ ಅವರು ಜಾವೇರಿಭಾಯಿ ದಜಿಭಾಯ್ ಪಟೇಲ್ ಹೈಸ್ಕೂಲ್ (ಈಗ ಎಡ್ವರ್ಡ್ ಸ್ಮಾರಕ ಹೈಸ್ಕೂಲ್ ಬೊರಸದ್)ನ ಸ್ಥಾಪಕ ಹಾಗೂ ಮೊದಲ ಕಾರ್ಯಾಧ್ಯಕ್ಷರಾಗಿದ್ದರು.

- ಸ್ವಾತಂತ್ರ್ಯ ಬಳಿಕ ಮೊದಲ ಮೂರು ವರ್ಷಗಳ ಕಾಲ ಅವರು ಮೊದಲ ಉಪ ಪ್ರಧಾನಿ, ಗೃಹ ಸಚಿವ, ಮಾಹಿತಿ ಮತ್ತು ರಾಜ್ಯಗಳ ಸಚಿವಾಲಯದ ಸಚಿವರಾಗಿ ಕಾರ್ಯ ನಿರ್ವಹಿಸಿದರು.

- ಭಾರತ ವಿಭಜನೆಯಿಂದ ಉಂಟಾದ ಹಿಂಸಾಚಾರದ ಸಮಯದಲ್ಲಿ, ಪಂಜಾಬ್ ಮತ್ತು ದೆಹಲಿಯ ನಿರಾಶ್ರಿತರ ಪರಿಹಾರ ಕಾರ್ಯಗಳನ್ನು ಸಂಘಟಿಸಿ, ಆ ಭಾಗಗಳಲ್ಲಿ ಶಾಂತಿ ಪುನಃಸ್ಥಾಪಿಸಲು ಕೆಲಸ ಮಾಡಿದರು.

- ಭಾರತಕ್ಕೆ ಆಗಸ್ಟ್ 15, 1947 ರಲ್ಲಿ  ಸ್ವಾತಂತ್ರ್ಯ ಸಿಕ್ಕಿದ ಮೇಲೂ ಕೆಲವೊಂದು ಭೂ ಪ್ರದೇಶಗಳು ರಾಜರ ಮತ್ತು ವಿದೇಶಿಗರ ವಶದಲ್ಲಿದ್ದವು. ಇದನ್ನು ವಶಪಡಿಸಿಕೊಂಡು, ದೇಶಕ್ಕೆ ಸೇರ್ಪಡೆ ಮಾಡಿ ಭವ್ಯ ಭಾರತದ ನಿರ್ಮಾಣಕ್ಕೆ ಕಾರಣರಾದರು.

565  ಅರೆ-ಸ್ವತಂತ್ರ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸುವ ಮಹತ್ಕಾರ್ಯಕ್ಕೆ ಪಟೇಲರೇ ಸೂಕ್ತ ವ್ಯಕ್ತಿ ಎಂದು ಕಾಂಗ್ರೆಸ್ ಪಕ್ಷದ , ಮೌಂಟ್ ಬ್ಯಾಟನ್ನರ ಹಾಗೂ ಹಿರಿಯ ಬ್ರಿಟಿಷ್ ಅಧಿಕಾರಿಗಳ ಒಮ್ಮತದ ಅಭಿಪ್ರಾಯವಾಗಿತ್ತು. “ರಾಜ್ಯಗಳ ಈ ಸಮಸ್ಯೆ ಎಷ್ಟು ಸಂಕೀರ್ಣವಾಗಿದೆಯೆಂದರೆ ನೀವೊಬ್ಬರೇ ಅದನ್ನು ಬಗೆಹರಿಸಲು ಸಮರ್ಥರು” ಎಂದು ಗಾಂಧೀಜಿ ಕೂಡಾ ಪಟೇಲರಿಗೆ ಹೇಳಿದ್ದರು.
ಈ ಗುರುತರ ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸುವ ಮನಃ ಸ್ಥೈರ್ಯ , ಚಾಣಾಕ್ಷತನ ಹಾಗೂ ಅಚಲತೆ ಇದ್ದವರಾದ ಪಟೇಲರು, ರಾಷ್ಟ್ರಹಿತಕ್ಕಾಗಿ ಮುಂದೆ ನಿಂತು ಸರ್ಕಾರದ ನಿರ್ಧಾರಗಳನ್ನು ಜಾರಿಮಾಡುವುದಕ್ಕೆ ತಯಾ ರಿದ್ದರೂ ಸಂಸ್ಥಾನಿಕರೊಂದಿಗೆ ಸಂಧಾನ ನಡೆಸಲು ಬೇಕಾದ ಅನುಭವವನ್ನೂ, ಮುತ್ಸದ್ದಿತನವನ್ನೂ ಪಡೆದು ಕೊಂಡಿದ್ದರು.1947ರ ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ನ ಪ್ರಕಾರ ಬ್ರಿಟಿಷ್ ಆಳ್ವಿಕೆಯಿಂದ ಸುಮಾರು 565 ಸ್ವಯಂ ಆಡಳಿತದ ಸಂಸ್ಥಾನಗಳನ್ನು ಬಿಡುಗಡೆ ಮಾಡಲಾಯಿತು. ಮನ ಓಲೈಕೆ, ವಸ್ತು ಸ್ಥಿತಿಯ ಚಿತ್ರಣ, ಸೇನಾಪಡೆಗಳ ಬೆದರಿಕೆಯನ್ನು ಉಪಯೋಗಿಸಿ ಬಹುತೇಕ ರಾಜಪ್ರಭುತ್ವದ ರಾಜ್ಯಗಳನ್ನು ಭಾರತಕ್ಕೆ ಸೇರಿಸಿದರು. ಹೊಸ ಸ್ವತಂತ್ರ ಭಾರತ ದೇಶದಲ್ಲಿ ರಾಷ್ಟ್ರೀಯ ಏಕೀಕರಣಕ್ಕೆ ಅವರ ಬದ್ಧತೆಯು ಸಂಪೂರ್ಣ ವಾಗಿತ್ತು.

 - 1947ರ ಇಂಡೋ-ಪಾಕಿಸ್ತಾನ ಯುದ್ಧದ ಅವಧಿಯಲ್ಲಿ ಅವರು ಭಾರತೀಯ ಸೈನ್ಯದ ಕಮಾಂಡರ್-ಇನ್-ಚೀಫ್ ಆಗಿ ಸಹ ಕಾರ್ಯ ನಿರ್ವಹಿಸಿದರು.

- ಆಧುನಿಕ ಅಖಿಲ ಭಾರತ ಸೇವೆಗಳ ವ್ಯವಸ್ಥೆಯನ್ನು ಸ್ಥಾಪಿಸಿದ್ದಕ್ಕಾಗಿ ಅವರು "ಭಾರತದ ನಾಗರಿಕ ಸೇವಕರ ಪೋಷಕ ಸಂತ" ( patron saint of India's civil servants) ಎಂದು ನೆನಪಿಸಿಕೊಳ್ಳುತ್ತಾರೆ.

ಸರ್ದಾರ್ ವಲ್ಲಭ ಭಾಯ್ ಪಟೇಲ್. ಅವರು ಭಾರತದ ಏಕತೆಗಾಗಿ ಶ್ರಮಿಸಿದ ಕಾರಣ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಇಂದು ಪಟೇಲ್ ಅವರ 145 ನೇ ಜನ್ಮ ದಿನಾಚರಣೆ. ಭಾರತದ ಏಕೀಕರಣಕ್ಕಾಗಿ ಅವರು ತಳೆದ ನಿಲುವಿನಿಂದ ಉಕ್ಕಿನ ಮನುಷ್ಯನೆಂದು ಕರೆಯಲ್ಪಟ್ಟರು. ದೇಶದ ಏಕೀಕರಣ ದಲ್ಲಿ ಅವರದೇ ಪ್ರಮುಖ ಪಾತ್ರ. ಭಾರತ ಗಣರಾಜ್ಯವಾಗುವ ದರಲ್ಲಿಯೂ ಪ್ರಮುಖ ಪಾತ್ರ. ಶ್ರೇಷ್ಠ ಭಾರತ ನಿರ್ಮಾಣಕ್ಕಾಗಿ ಅವರು ದೇಶದ ಎಲ್ಲ ಭಾಗದ, ಎಲ್ಲ ಧರ್ಮದ, ಎಲ್ಲ ಭಾಷೆಯ ಜನರಿಗೆ ಕರೆ ನೀಡಿದ್ದರು. ಈ ದಿನ ದೇಶಕ್ಕಾಗಿ ಅವರು ನೀಡಿರುವ ಅದ್ಭುತ ಸೇವೆಗಾಗಿ ಅವರನ್ನು ಗೌರವಿಸಲಾಗುತ್ತಿದೆ.
ಪ್ರಪಂಚದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯನ್ನು 31 ಅಕ್ಟೋಬರ್ 2018 ರಂದು ದೇಶಕ್ಕೆ ಸಮರ್ಪಿಸಲಾಯಿತು, ಅದು ಸುಮಾರು 182 ಮೀಟರ್ ಎತ್ತರದ್ದಾಗಿದೆ. 
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಟೇಲ್ ಅವರ ಭವ್ಯ ಮೂರ್ತಿಗೆ ಮಾಲಾರ್ಪಣೆ ಮಾಡಿ ಅವರ ಗೌರವ ಸೂಚಕವಾಗಿ "ರಾಷ್ಟ್ರೀಯ ಏಕತಾ ದಿನ"ವನ್ನು ಆಚರಣೆಗೆ ತಂದರು.
-✍️ Dr Prema Pangi
#ಪ್ರೇಮಾ_ಪಾಂಗಿ,
#ರಾಷ್ಟ್ರೀಯ_ಏಕತಾ_ದಿನ
#ಸರ್ದಾರ್_ವಲ್ಲಭಭಾಯ್_ಪಟೇಲ್:

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma