Posts

Showing posts with the label 🌷ವೀರರಾಣಿ ಬೆಳವಡಿ ಮಲ್ಲಮ್ಮ🌷

🌷ವೀರರಾಣಿ ಬೆಳವಡಿ ಮಲ್ಲಮ್ಮ🌷

Image
🌷ವೀರರಾಣಿ ಬೆಳವಡಿ ಮಲ್ಲಮ್ಮ🌷 🌷🌷ವೀರರಾಣಿ ಬೆಳವಡಿ ಮಲ್ಲಮ್ಮನವರ ಜನ್ಮದಿನದ ಶುಭಾಶಯಗಳು.🌷🌷🌷 ಬೆಳವಡಿ ಮಲ್ಲಮ್ಮ ಛತ್ರಪತಿ ಶಿವಾಜಿ ಮಹಾರಾಜರ ಸಮಕಾಲೀನ ಕರ್ನಾಟಕದ ವೀರರಾಣಿ. ಸುಸಜ್ಜಿತ ಮಹಿಳಾ ಸೈನ್ಯವನ್ನು ಸಂಘಟಿಸಿದ ಮೊದಲ ಮಹಿಳೆ. 500 ವರ್ಷಗಳ ಹಿಂದೆ ಸುಸಜ್ಜಿತ ಎರಡು ಸಾವಿರ ಮಹಿಳಾ ಸೈನ್ಯ ಕಟ್ಟಿ ಪ್ರಭಲ ಮರಾಠಾ ಸೈನ್ಯದೊಂದಿಗೆ ಹೋರಾಡಿದವಳು ಬೆಳವಡಿಯ ವೀರರಾಣಿ ಮಲ್ಲಮ್ಮ. ಸಮಕಾಲೀನ ಬ್ರಿಟಿಷ್ ಕೃತಿಯೊಂದರ ಪ್ರಕಾರ ಈ ಯುದ್ಧದ ಸಮಯದಲ್ಲಿ ಶಿವಾಜಿ ತಾನೇ ಮುಂದೆ ನಿಂತು ಮಲ್ಲಮ್ಮನ ಕೋಟೆಯನ್ನು ಮುತ್ತಿಗೆ ಹಾಕಲು ಯತ್ನಿಸಿದ. ಈ ಪ್ರಯತ್ನದಲ್ಲಿ ದಖನಿನ (ಬಿಜಾಪುರದ) ಎಲ್ಲಾ ಮೊಘಲ್ ಅರಸರಿಂದ ಅನುಭವಿಸಿದಕ್ಕಿಂತ ಹೆಚ್ಚು ಮುಖಭಂಗವನ್ನು ಮಲ್ಲಮ್ಮನಿಂದ ಅನುಭವಿಸಿದ ಎಂದು ತಿಳಿದುಬರುತ್ತದೆ. "ಎಷ್ಟೋ ರಾಜ್ಯಗಳನ್ನು ಗೆದ್ದ ಶಿವಾಜಿಗೆ ಬೆಳವಡಿಯ ದೇಸಾಯಿ ವಂಶದ ರಾಣಿ ಮಲ್ಲಮ್ಮಳನ್ನು ಬಗ್ಗಿಸಲು ಸಾಧ್ಯವಾಗಲಿಲ್ಲ". ಮಲ್ಲಮ್ಮ ಸ್ವಾದಿ ಅರಸು ರಾಜ ಮಧುಲಿಂಗನಾಯಕ ಮತ್ತು ರಾಣಿ ವೀರಮ್ಮಳ ಹೆಮ್ಮೆಯ ಕುವರಿಯಾಗಿ ಕ್ರಿ.ಶ 1650 ಅಗಷ್ಟ 18 ರಂದು ಜನಿಸಿದಳು. ಇವಳು ಸೋದೆ ರಾಜ ಸದಾಶಿವನಾಯಕನ ತಂಗಿ. ಸೋಗಲದ ಸೋಮೇಶ್ವರ ದೇವರು ಇವರ ಆರಾದ್ಯ ದೈವ. ಅವಳು ಬೆಳೆದಂತೆ ದೈವಭಕ್ತಿ ಬೆಳೆಯುತ್ತಾ ಸಾಗಿತು. ಕನ್ನಡ, ಮರಾಠಿ, ಸಂಸ್ಕೃತ, ಉರ್ದು, ಹಲವು ಭಾಷೆಗಳಲ್ಲಿ , ಕವಿತ್ವದಲ್ಲಿ, ಕುದುರೆಸವಾರಿ, ಕತ್ತಿವರಸೆ, ಬಿಲ್ಲುಬಾಣ ಯುದ್ಧದ...