Posts

Showing posts with the label 🌷May1 ವಿಶ್ವ ಕಾರ್ಮಿಕ ದಿವಸದ ಶುಭಾಶಯಗಳು🌷

🌷May1 ವಿಶ್ವ ಕಾರ್ಮಿಕ ದಿವಸದ ಶುಭಾಶಯಗಳು🌷

Image
🌷May1 ವಿಶ್ವ ಕಾರ್ಮಿಕ ದಿವಸದ ಶುಭಾಶಯಗಳು🌷 *ಬಸವ ಧರ್ಮದಲ್ಲಿ ಕಾಯಕ*: ಕೆಲಸಕ್ಕೆ ಕಾಯಕವೆಂದು ಕರೆದು ದುಡಿಯುವ ವರ್ಗಕ್ಕೆ ಘನತೆ ಗೌರವ ತಂದು ಕೊಟ್ಟ ಬಸವಾದಿ ಶರಣರಿಗೆ ಶರಣು ಶರಣಾರ್ಥಿ🙏 *ಕಾಯಕ* : ಹನ್ನೆರಡನೆಯ ಶತಮಾನದಲ್ಲಿದ್ದ  ಶಿವಶರಣ ಶರಣೆಯರ ನಿಲುವಿನಲ್ಲಿ  ‘ಕಾಯಕ‘ ಎಂದರೆ ವ್ಯಕ್ತಿಯು ಮಾಡುವ ಕಸುಬು. ಅವನಿಗೆ ಮತ್ತು ಅವನ ಕುಟುಂಬಕ್ಕೆ  ನೆಮ್ಮದಿಯನ್ನು ತಂದುಕೊಡುವಂತೆಯೇ, ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಿದ್ದು, ಒಟ್ಟು ಜನಸಮುದಾಯದ ಹಿತಕ್ಕೆ ನೆರವಾಗುವಂತಿರುವ ದುಡಿಮೆ.  ವ್ಯಕ್ತಿಯು ತನ್ನ ಪಾಲಿನ ಕಾಯಕವನ್ನು ಒಲವು ನಲಿವು ಮತ್ತು ಪ್ರಾಮಾಣಿಕತನದಿಂದ ಮಾಡಿದರೆ, ಅದು ಅವನ ಬದುಕಿನ ಏಳಿಗೆಗೆ ಕಾರಣವಾಗುವುದರ ಜತೆಜತೆಗೆ  ಸಮಾಜಕ್ಕೂ ಒಳಿತನ್ನುಂಟುಮಾಡಿ, ಜನರು ವಾಸಮಾಡುತ್ತಿರುವ ನೆಲೆಯನ್ನೇ ನೆಮ್ಮದಿಯ ಬೀಡು  ಅರ್ಥಾತ್ ಕೈಲಾಸ ವನ್ನಾಗಿ ಮಾಡುತ್ತದೆ ಎಂಬ ತಿರುಳನ್ನು ಒಳಗೊಂಡಿದೆ. ಶಿವಲಿಂಗದ ಪೂಜೆಯಾಗಿದ್ದರೂ ಅದು ಕೂಡ ನಾವು ಮಾಡುವ ಕಾಯಕದಲ್ಲೇ ಸೇರಿಕೊಂಡಿದೆ.  ಕಾಯಕಕ್ಕಿಂತ ಮಿಗಿಲಾದ ಪೂಜೆಯಿಲ್ಲ. ಅದಕ್ಕಿಂತ ಮಹತ್ವದ ನೇಮವಿಲ್ಲ. ಕಾಯಕ ಮನುಷ್ಯನ ಘನತೆ. ಕಾಯಕ ಮನುಷ್ಯನ ಧರ್ಮ. ಆದ್ದರಿಂದಲೇ ಎಂಥಾ ಸನ್ನಿವೇಶದಲ್ಲೂ ಬಿಡದೆ ಕಾಯಕ ಮಾಡಬೇಕು. ಮೊದಲ ಆದ್ಯತೆ ಅದಕ್ಕೇ ಮೀಸಲಿರಬೇಕು. ದಿನದ ಪ್ರತಿ ತುತ್ತನ್ನೂ ನಮ್ಮ ದುಡಿಮೆಯ ಫಲವಾಗಿ ಉಣ್ಣಬೇಕು.  ಕಾಯಕಕ್ಕೆ ನಮ್ಮ ...