*ಶರಣರ ಶಿವರಾತ್ರಿ*
ಶಿವರಾತ್ರಿಯ ಶುಭಾಶಯಗಳು🌷🌷🌷🌷*ಶರಣರ ಶಿವರಾತ್ರಿ* ಶಿವನ ಕೀರ್ತಿಯೇ ಬಸವಣ್ಣನ ಧರ್ಮ, ಶಿವನ ಸ್ತೋತ್ರವೇ ಬಸವಣ್ಣನ ಧರ್ಮ ಶಿವನ ಮಂತ್ರೋಚ್ಚಾರಣೆಯೆ(ಓಂ ನಮಃ ಶಿವಾಯ) ಗುರುಬಸವಣ್ಣನವರ ಧರ್ಮವಯ್ಯಾ ಎನ್ನುತ್ತಾರೆ ಶಿವಯೋಗಿ ಸಿದ್ಧರಾಮೇಶ್ವರರು. #ಶಿವನ ಕೀರ್ತಿ ಬಸವಣ್ಣನ ಧರ್ಮವಯ್ಯಾ, ಶಿವನ ಸ್ತೋತ್ರ ಬಸವಣ್ಣನ ಧರ್ಮವಯ್ಯಾ, ಶಿವನ ಮಂತ್ರೋಚ್ಚಾರಣೆ ಬಸವಣ್ಣನ ಧರ್ಮವಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ. / 1742 ಶರಣರಿಗೆ ಲಿಂಗಪೂಜೆ ಅಂದರೆ ಶಿವನ ಪೂಜೆ, ಶಿವಯೋಗಮಾಡಿ ಸ್ವಯಂ ಶಿವನಾಗುವುದು. ದೇವರ ಪೂಜೆ ಮಾಡುತ್ತ ಮಾಡುತ್ತ ತಾನೇ ದೈವತ್ವಕ್ಕೇರುವುದು. ತಾನೇ ದೇವರಾಗುವುದು. ದೇವರಲ್ಲಿ ಬೇರ್ಪಡಿಸದಂತೆ ಐಕ್ಯನಾಗುವುದು. ಶಿವನಲ್ಲಿ ಶಿವನಾಗಿ ಸೇರಿಕೊಂಡಾಗಷ್ಟೇ ಶಿವರಾತ್ರಿಯಲ್ಲಿ ಬೆಳಕು ಜಗದ ಹೊರಗೂ, ತನ್ನ ಒಳಗೂ ಕಂಡೀತು. 1. #ಶರಣ ನಿದ್ರೆಗೈದಡೆ ಜಪ ಕಾಣಿರೊ, ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ, ಶರಣ ನಡೆದುದೆ ಪಾವನ ಕಾಣಿರೊ, ಶರಣ ನುಡಿದುದೆ ಶಿವತತ್ವ ಕಾಣಿರೊ, ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ. - ವಿಶ್ವಗುರು ಬಸವಣ್ಣನವರು 2. ಶಿವಶರಣರಿಗೆ ನಿತ್ಯ ಶಿವಯೋಗ. ಅದು ಬರೀ ಪೂಜಾ ವಿಧಾನವಲ್ಲ. ಅರಿವು ಎಂಬ ಜ್ಞಾನದಿಂದ ಇಷ್ಟಲಿಂಗವೆಂಬ ಕುರುಹನ್ನು ನಿರಾಕಾರ ನಿರಂಜನ ನಿರ್ಗುಣ ನಿರ್ಮಾಯ ಪರಶಿವನೆಂದು ತಿಳಿದು ಕರಹಸ್ತವೆಂಬ ಗದ್ದುಗೆಯಲ್ಲಿ ಸುಜ್ಞಾನವೆಂಬ ಬೆಳಕಿನಿಂದ ಮಾಡುವ ಪೂಜೆ. ಮಹಾಲಿಂಗವನ್ನು ನೆಲೆಗೊ...