ವಚನ ದಾಸೋಹ

#ವಚನ:
#ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮರಲ್ಲಿ ಬೆಳೆದೆ
ಸತ್ಯಶರಣರ ಪಾದವಿಡಿದೆ.
ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ, ಜಂಗಮವ ಕಂಡೆ, ಪಾದೋದಕವ ಕಂಡೆ, ಪ್ರಸಾದವ ಕಂಡೆ. ಇಂತಿವರ ಕಂಡೆನ್ನ ಕಂಗಳ
ಮುಂದಣ ಕತ್ತಲೆ ಹರಿಯಲೊಡನೆ, ಮಂಗಳದ ಮಹಾಬೆಳಗಿನೊಳೊಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚನ್ನಬಸವಣ್ಣ
-  ಶರಣೆ ಲಿಂಗಮ್ಮ
Meaning
Sharane Lingamma says "Though I am born in lower caste; in the Satsang with truthful Sharanas I saw Guru, Linga, Jangam, Padodaka and Prasad. After seeing all these the darkness infront of my eyes disappeared and I became one with God and became blessed Appanna Priya Channabasavanna".
In this vachana Sharane Lingamma highlights importance of Satsang or the company of Sharanas and how it changed her life and made her blissful.
Guru, Linga, Jangama, Padodaka, Prasada are part of Ashtavaranas and they protect sadhaka in Shivayoga sadhana. They are considered auspecious in Sharana dharma.
*ಶರಣೆ ಪರಿಚಯ:*
ಶರಣ ಹಡಪದ ಅಪ್ಪಣ್ಣರ ಪುಣ್ಯ ಸ್ತ್ರೀ ಶರಣೆ ಲಿಂಗಮ್ಮ (c:1160)
ಶರಣೆ ಲಿಂಗಮ್ಮನವರು  ಶರಣ ಹಡಪದ ಅಪ್ಪಣ್ಣನವರ ಧರ್ಮಪತ್ನಿ.
ಅಂಕಿತನಾಮ :ಅಪ್ಪಣ್ಣಪ್ರಿಯ ಚನ್ನಬಸವಣ್ಣ
ಈಕೆ ಬಸವಣ್ಣನವರ ಆಪ್ತರಲ್ಲಿ ಮುಖ್ಯವೆನಿಸಿದ ಹಡಪದ ಅಪ್ಪಣ್ಣನವರ ಹೆಂಡತಿ. 
ಗುರು-ಚೆನ್ನಮಲ್ಲೇಶ. 
ಅತ್ಯಂತ ಉನ್ನತ ಅನುಭಾವಿಯಾದ ಲಿಂಗಮ್ಮಳ 114 ವಚನ, 1 ಸ್ವರವಚನ, 1 ಮಂತ್ರಗೋಪ್ಯ ದೊರೆತಿವೆ.   ಈಕೆಯ ವಚನಗಳು 'ಭೋಧೆಯ ವಚನಗಳು' ಎಂದು ಹೆಸರಾಗಿವೆ. ವಚನಗಳಲ್ಲಿ  ತತ್ವಭೋಧೆಯೇ ಮುಖ್ಯವಾಗಿರುವುದು. ಮನದ ಚಂಚಲತೆ, ಅದನ್ನು ನಿಗ್ರಹಿಸುವ ವಿಧಾನ, ಗುರು-ಲಿಂಗ-ಜಂಗಮ ಭಕ್ತಿ, ಶರಣರ ನಡೆನುಡಿ, ಆಚಾರ ವಿಚಾರ ನಿಷ್ಠೆ, ಡಾಂಭಿಕಭಕ್ತರ ಟೀಕೆ, ಶಿವಯೋಗ, ವಿಚಾರ ಪ್ರಜ್ಞೆ, ಬೆಡಗಿನ ವಚನಗಳು ಮತ್ತು ಲಿಂಗಾಂಗ ಯೋಗ ಈಕೆಯ ವಚನಗಳಲ್ಲಿ ತೋರುವ ಪ್ರಮುಖ ವಿಷಯಗಳಾಗಿವೆ. ಭಾಷೆಯ ತಾತ್ವಿಕ ವಿಷಯ ನಿರೂಪಣೆಯಲ್ಲಿ ಬೆಡಗಿನಿಂದ ಕೂಡಿದ್ದರೆ, ಟೀಕೆ ವಿಡಂಬನೆಗಳಲ್ಲಿ ನೇರ, ದೇಶೀ ಸೊಗಡಿನಿಂದ ಸಂಭ್ರಮಿಸುತ್ತದೆ. 
 ಈಕೆಯ ಗುರು ಚನ್ನಮಲ್ಲೇಶನ ಸ್ತುತಿ ವಿಶೇಷವಾಗಿದೆ. 
ವ್ಯಕ್ತಿಯ ಹುಟ್ಟಿಗೂ ಜಾತಿಗೂ ಅವನು ಸಾಧಿಸುವ ಸಿದ್ಧಿಗೂ ಏನೇನು ಸಂಬಂಧವಿಲ್ಲ ಎಂಬುದನ್ನು ನಿರೂಪಿಸಿದವಳು. ಈಕೆಯ ವಚನಗಳಲ್ಲಿ ಬೋಧೆಯ ಧಾಟಿ, ಕಂಡ ದರ್ಶನ, ಬೀರಿದ ಬೆಳಕು, ಏರಿದ ನಿಲುವು ಬೆರಗು ಗೊಳಿಸುತ್ತವೆ, ಸರ್ವರಿಗೂ ಆದರ್ಶನಿಯವಾದವು. ಸಾಮಾನ್ಯರಿಗೂ, ಶರಣರಿಗೂ ಇರುವ ವ್ಯತ್ಯಾಸವನ್ನು ತಿಳಿಸಿದ್ದಾಳೆ. ಶಿವಯೋಗದಲ್ಲಿ ಮಹಾಬೆಳಗು ಕಂಡಿದನ್ನು, ಅರಿಷಡ್ವರ್ಗಗಳನ್ನು ಜಯಸಿದ  ವಿಚಾರವಾಗಿ ವಚನಗಳನ್ನು ರಚಿಸಿದ್ದಾರೆ. ಎಲ್ಲ ಸಾಧನೆಗೂ ಮೂಲವಾದ ಮನಸ್ಸನ್ನು ಸ್ವೇಚ್ಛೆಯಾಗಿ ಹರಿದಾಡಲು ಬಿಡದೆ ಬಯಲಿನೊಳಗೆ ಓಲಾಡುವ ಶರಣರ ಪಾದದಲ್ಲಿ ಬೆರೆಯಬೇಕೆನ್ನುವಳು.
- ✍️Dr Prema Pangi
#ಪ್ರೇಮಾ_ಪಾಂಗಿ,#ಶರಣೆ_ಲಿಂಗಮ್ಮ
#ಕನಿಷ್ಠದಲ್ಲಿ_ಹುಟ್ಟಿದೆ_ಉತ್ತಮರಲ್ಲಿ_ಬೆಳೆದೆ
Picture post created by me.Hope you all will like it.A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma