ವಚನ ದಾಸೋಹ
ಶಿವಭಕ್ತರ ರೋಮನೊಂದಡೆ, ಶಿವನು ನೋವ ನೋಡಾ.
ಶಿವಭಕ್ತರು ಪರಿಣಾಮಿಸಿದಡೆ, ಶಿವನು ಪರಿಣಾಮಿಸುವ ನೋಡಾ.
ಭಕ್ತದೇಹಿಕದೇವನೆಂದು ಶ್ರುತಿ ಹೊಗಳುವ ಕಾರಣ,
ಶಿವಭಕ್ತರ ಲೇಸು ಹೊಲ್ಲೆಹ ಶಿವನ ಮುಟ್ಟುವುದು ನೋಡಾ.
ತಾಯಿನೊಂದಡೆ ಒಡಲಶಿಶು ನೋವತೆರನಂತೆ,
ಭಕ್ತರು ನೊಂದಡೆ ತಾ ನೋವ ನೋಡಾ ಚೆನ್ನಮಲ್ಲಿಕಾರ್ಜುನ. / 378
- ವೀರ ವಿರಾಗಿಣಿ ಅಕ್ಕ ಮಹಾದೇವಿ
Comments
Post a Comment