ವಚನ ದಾಸೋಹ

*ವಚನ*:
 ಹಸಿವೇ ನೀನು ನಿಲ್ಲು, ನಿಲ್ಲು, ತೃಷೆಯೇ ನೀನು ನಿಲ್ಲು ನಿಲ್ಲು
 ನಿದ್ರೆಯೇ ನೀನು ನಿಲ್ಲು ನಿಲ್ಲು, ಕಾಮವೇ ನೀನು ನಿಲ್ಲು ನಿಲ್ಲು
 ಕ್ರೋಧವೇ ನೀನು ನಿಲ್ಲು ನಿಲ್ಲು, ಮೋಹವೇ ನೀನು ನಿಲ್ಲು ನಿಲ್ಲು
 ಲೋಭವೇ ನೀನು ನಿಲ್ಲು ನಿಲ್ಲು, ಮದವೇ ನೀನು ನಿಲ್ಲು ನಿಲ್ಲು
 ಮಚ್ಚರವೇ ನೀನು ನಿಲ್ಲು ನಿಲ್ಲು, ಸಚರಾಚರವೇ ನೀನು ನಿಲ್ಲು ನಿಲ್ಲು
 ನಾನು ಚೆನ್ನಮಲ್ಲಿಕಾರ್ಜುನದೇವರ ಅವಸರದ
 ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ
- ಶರಣೆ ಅಕ್ಕಮಹಾದೇವಿ

*Translation:
Hunger, you stop stop,
Thirst, you stop stop, 
Sleep, you stop stop, 
Lust, you stop stop, 
Anger, you stop stop, 
Delusion, you stop stop, 
Greed, you stop stop,
Arrogance, you stop stop, 
Jealousy, you stop stop, 
Things moving and unmoving stop stop, 
I am carrying an urgent letter to Chennamallikarjuna.
Salutations to you. 
-Sharane Akkamahadevi

*ಅರ್ಥ-
ಪರ್ಯಟನೆ ಮಾಡುತ್ತ ಉಡತಡಿಯಿಂದ ಶ್ರೀಶೈಲಕ್ಕೆ ಹೊರಟ ಮಹಾದೇವಿ, ಭಕ್ತಿ ಭಂಡಾರಿ ಬಸವಣ್ಣನವರ ಮಹಿಮೆ ಕೇಳಿ ಕಲ್ಯಾಣಕ್ಕೆ ಪಯಣಿಸಿದಳು. ತನ್ನ ಇಷ್ಟ ದೈವವಾದ ಚೆನ್ನಮಲ್ಲಿಕಾರ್ಜುನನನ್ನು ಸೇರುವುದೇ ಅವಳ ಬಾಳಿನ ಪರಮ ಗುರಿಯಾಗಿತ್ತು. ಅದಕ್ಕಾಗಿಯೇ ಆಕೆ ಸದಾಕಾಲ ಹಂಬಲಿಸಿದಳು.  ಅವಳ ಆ ಹಂಬಲಿಕೆಯ ಪ್ರತಿಬಿಂಬವೇ ಈ ವಚನ. “ಚೆನ್ನಮಲ್ಲಿಕಾರ್ಜುನ” ಅಕ್ಕಮಹಾದೇವಿಯ ಸರ್ವಸ್ವ. ಅಕ್ಕ ವಚನಗಾರ್ತಿ,ಅನುಭಾವಿ, ಕವಯಿತ್ರಿ. 
ಕಲ್ಯಾಣದ ದಾರಿಯಲ್ಲಿ ಹಸಿವು, ಬಾಯಾರಿಕೆ, ನಿದ್ರೆ, ಸುಡುಬಿಸಿಲು ಲೆಕ್ಕಿಸದೆ ಬಳಲಿದಳು. ಹಸಿವು, ಬಾಯಾರಿಕೆ, ನಿದ್ರೆ, ಕಾಮ, ಕ್ರೋಧ, ಮೋಹ, ಮದ, ಮತ್ಸರ, ಲೋಭ ಮತ್ತು ಸಕಲ ಚರಾಚರ ವಿಷಯಗಳು ತನ್ನ ಬಳಿ ಸುಳಿಯದಿರಲಿ ಎಂದು ಪ್ರಾಥಿಸುತ್ತ, ತನ್ನ ಇಷ್ಟದೈವ ಚೆನ್ನಮಲ್ಲಿಕಾರ್ಜುನನ ಕಾಣುವ ಕಾತರದಲ್ಲಿ ಅವಸರದಲ್ಲಿ ಎಲ್ಲವನ್ನೂ ಸ್ವತಃ ತನ್ನನ್ನೇ ಮರೆತಳು.
- ✍️Dr Prema Pangi
#ಪ್ರೇಮಾ_ಪಾಂಗಿ,#ಅಕ್ಕಮಹಾದೇವಿ
#ಹಸಿವೇ_ನೀನು_ನಿಲ್ಲು_ನಿಲ್ಲು ,

Picture post designed and created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma