ವಚನ ದಾಸೋಹ
#ವಚನ:
ಅಳಿಸಂಕುಳವೆ, ಮಾಮರವೇ, ಬೆಳದಿಂಗಳೇ,
ಕೋಗಿಲೆಯೇ, ನಿಮ್ಮನ್ನೆಲ್ಲರನೂ ಒಂದು ಬೇಡುವೆನು.
ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವರ ಕಂಡಡೆ,
ಕರೆದು ತೋರಿರೆ.
- ಶರಣೆ ಅಕ್ಕಮಹಾದೇವಿ
Translation:
O Squrills, Mango tree, Moonlight, Koel
I request you all for one wish.
If you see my master, Chennamallikarjuna (Shiva) please call me and show me.
-Sharane Akka Mahadevi
ಅರ್ಥ-
ಅಕ್ಕಮಹಾದೇವಿ ಪ್ರಕೃತಿ ಪ್ರೇಮಿ. ತನ್ನ ಇಷ್ಟ ದೈವವಾದ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತಾ ಸಾಗುವಾಗ ದಾರಿಯಲ್ಲಿ ಎದುರಾಗುವ ಅಳಿಲುಗಳು, ಮಾಮರ, ಕೋಗಿಲೆ ಮುಂತಾದ ಗಿಡ, ಪ್ರಾಣಿ, ಪಕ್ಷಿ ಹಾಗೂ ಬೆಳದಿಂಗಳ ಸುಂದರ ತಂಪಾದ ರಾತ್ರಿಗೆ ತನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವರ ದರ್ಶನದ ಕಾತರ ಹಂಬಲಿಕೆ ತಿಳಿಸುತ್ತಾಳೆ. ವಚನದಲ್ಲಿ ಅವಳ ಹಂಬಲಿಕೆ ಅತ್ಯುತ್ತಮವಾಗಿ ಬಿಂಬಿತವಾಗಿದೆ. ಅಕ್ಕ ತನ್ನ ವಚನಗಳಲ್ಲಿ ಯಾವುದೇ ಹಿಂಜರಿಕೆ ಇಲ್ಲದೇ ತನ್ನ ಉತ್ಕಟ ನಿಷ್ಕಮಲ ಪ್ರೀತಿ, ಪ್ರೇಮ, ಹಂಬಲ, ವಿರಹವನ್ನು ಅಭಿವ್ಯಕ್ತಿಸಿದ್ದಾಳೆ.
- ✍️Dr Prema Pangi
#ಪ್ರೇಮಾ_ಪಾಂಗಿ, #AkkaMahadevi, #ಅಕ್ಕಮಹಾದೇವಿ,
#ಅಳಿಸಂಕುಳವೆ_ಮಾಮರವೇ_ಬೆಳದಿಂಗಳೇ,
Comments
Post a Comment