ವಚನ ದಾಸೋಹ - 'ಲಿ'ಕಾರವೆ ಶೂನ್ಯ
#'ಲಿ' ಕಾರವೆ ಶೂನ್ಯ, ಬಿಂದುವೆ ಲೀಲೆ,
`ಗ' ಕಾರವೆ ಚಿತ್ತು.
ಈ ತ್ರಿವಿಧದೊಳಗಿದೆ ಲಿಂಗವೆಂಬ ಸಕೀಲ.
ಇದರ ಸಂಚವನಾವಾತ ಬಲ್ಲ ಆತನೆ ಲಿಂಗಸಂಗಿ. ಇದು ಕಾರಣ-
ಲಿಂಗಾನುಭವಿಗಳ ಶ್ರೀಚರಣಕ್ಕೆ
ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ / 1306
- ಅವಿರಳ ಜ್ಞಾನಿ ಚೆನ್ನಬಸವಣ್ಣ
ಅರ್ಥ:
"ಲಿ" ಕಾರವು ಲಯ ವನೆಯ್ದಿಸಿ ಸರ್ವಶೂನ್ಯ ಮಾಡುವುದು. ಹೀಗೆ ಲಿಕಾರವು ಸರ್ವವನ್ನು ಲೀನವಾಗಿಸಿಕೊಳ್ಳುವ ಶೂನ್ಯದ ಸೂಚಕ.
"0" ಚಿದ್ಬಿಂದುವೆ ಆ ಚಿತ್ ಚೈತನ್ಯಕ್ಕೆ ಅಂಗವಾಗಿ ಲೀಲಸ್ಥಿತಿಯ ನಟಿಸುತ್ತಿಹುದಾಗಿ ಬಿಂದುವೇ ಲೀಲೆ. ಬಿಂದುವು ಸೃಷ್ಟಿಯ ಲೀಲೆಯ ಸೂಚಕ.
"ಗ" ಕಾರ ಚಿತ್ ಚೈತನ್ಯ ಗಮಿಸಿ, ಜಗತ್ ಚೈತನ್ಯವಾಗಿ ಸೃಷ್ಟಿರಚನೆಯಾಯಿತು.ಸೃಷ್ಟಿಯ ಉತ್ಪತ್ತಿಗೆ ಮೂಲವಾದ ಚಿತ್ ಶಕ್ತಿಯ ಸೂಚಕವಾಗಿದೆ.
ಲಿಕಾರವು ಲೀನವಾಗುವುದರ ಸೂಚಕ , ಗಕಾರವು ಗಮಿಸುವ (ಉತ್ಪತ್ತಿ) ಸೂಚಕ.
0 ನಡುವಿನ ಬಿಂದು ಲೀಲೆ.
ಸೃಷ್ಟಿಯ
ಲೀನ<--->0 ಲೀಲೆ<--->ಗಮಿಸು(ಉತ್ಪತ್ತಿ)
ಸೃಷ್ಟಿಯ ಲೀನ ಮತ್ತು ಉತ್ಪತ್ತಿ ಎರಡರ ಮಧ್ಯೆ ಲೀಲೆ. ಅರ್ಥಾತ್ ಲೀಲೆಯಿಂದಲೇ ಸೃಷ್ಠಿ ಗಮಿಸುವದು(ಉತ್ಪತ್ತಿಯಾಗುವುದು) ಮತ್ತು ಲಯ ವಾಗುವುದು. ಹೀಗೆ ಶೂನ್ಯವೆಂಬ ಲೀಲೆಯಿಂದಲೇ ಸಕಲ ಸೃಷ್ಟಿಯ ವಿಲೀನ ಹಾಗೂ ಉತ್ಪತ್ತಿ. ಲಿಂಗವು ಸೃಷ್ಟಿ ಸ್ಥಿತಿ ಲಯ ಈ ಮೂರು ಪ್ರಕ್ರಿಯೆಗಳಿಗೆ ಕಾರಣ. ಈ ಲಿಂಗದ ಮರ್ಮವನರಿದು ಆಚರಿಸುವ ಲಿಂಗನುಭಾವಿಗಳಿಗೆ ಶರಣು ಶರಣು ಎಂದಿದ್ದಾರೆ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರು.
ಯಾವುದರಿಂದ ಜಗತ್ತು ಉತ್ಪತ್ತಿಯಾಗುವುದೋ, ಯಾವುದರಲ್ಲಿ ಸರ್ವಜಗತ್ತು ಲೀನವಾಗುವುದೋ, ಆ ಪರವಸ್ತುವೇ ಲಿಂಗವು.
*ಲಿಂಗವೇ ಜಗತ್ ಸೃಷ್ಟಿ, ಸ್ಥಿತಿ, ಲಯಕರ್ತ*
- ✍️Dr Prema Pangi
#ಲಿ_ಕಾರವೆ_ಶೂನ್ಯ
Picture post created by me.A small service to popularise Vachana Sahitya. Hope you all will like it.
Comments
Post a Comment