ವಚನ ದಾಸೋಹ - ಮರನೊಳಗಣ ಪತ್ರೆ ಫಲಂಗಳು
#ಮರನೊಳಗಣ ಪತ್ರೆ ಫಲಂಗಳು, ಮರಕಾಲವಶದಲ್ಲಿ ತೋರುವಂತೆ,
ಹರನೊಳಗಣ ಪ್ರಕೃತಿಸ್ವಭಾವಂಗಳು, ಹರಭಾವದಿಚ್ಛೆಗೆ ತೋರುವವು
ಲೀಲೆಯಾದಡೆ ಉಮಾಪತಿ, ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರಾ.
- ಅಲ್ಲಮ ಪ್ರಭುಗಳು
ಅರ್ಥ:
ಅಲ್ಲಮ ಪ್ರಭುಗಳು ಹೇಳಿದ ಮೇಲಿನ ವಚನ ಜಗತ್ತಿನ ಬಹು ಸೂಕ್ಷ್ಮ ತತ್ವವನ್ನು ವಿವರಿಸುತ್ತದೆ. ಮರ, ಫಲ,ಪುಷ್ಟಗಳ ರೂಪಕ ಕೊಟ್ಟು ಬಹಳ ಸುಂದರ ಮತ್ತು ಸರಳವಾಗಿ ಜಗತ್ತಿನ ರಹಸ್ಯ, ತಾತ್ಪರ್ಯ, ಉತ್ಪತ್ತಿ, ಲಯ ವಿವರಿಸಿದ್ದಾರೆ.
ಮರದಿಂದ ಹೊರಹೊಮ್ಮಿದ ಫಲಪುಷ್ಪಗಳು ನೋಡಲು ರೂಪದಲ್ಲಿ ವಿಭಿನ್ನವಾದವುಗಳು. ಆದರೂ ಮರದಿಂದ ವಿಭಿನ್ನವಲ್ಲ. ಅವು ಮರದಿಂದಲೇ ಹುಟ್ಟಿಕೊಂಡವು ಮತ್ತು ಮರದ ಎಲ್ಲಾ ಗುಣಗಳನ್ನು ಹೊತ್ತು ಹುಟ್ಟಿದವಂಥವಗಳು. ಹೀಗಾಗಿ ಅವು ಮರದ ಅಂಶಗಳೇ. ಅದರಂತೆ ಶಿವನಲ್ಲಿ ಅಂತರ್ಗತವಾದ "ಚಿತ್ ಶಕ್ತಿ " ಯಿಂದ ಅಭಿವ್ಯಕ್ತಿಯಾದ ಜೀವ ಜಡಯುಕ್ತವಾದ ಈ ವಿಶ್ವವು ಪರಶಿವನಿಂದ ಭಿನ್ನವಾಗಿ ಕಂಡರೂ ಅದು ಅವಿಭಿನ್ನ. ಈ ಜಗತ್ತು ಕೂಡಾ ಶಿವಾಂಶಿಕವೇ ಆಗಿದೆ. ಸೃಷ್ಟಿಸೋ ಪರಶಿವನ ಅನುವರ್ತಿತರೂಪ. ಅವರು ಲೀಲೆಯಲ್ಲಿ ಉಮಾಪತಿ, ಅಂದರೆ ಈ ವಿಶ್ವದ ಅಭಿವ್ಯಕ್ತಿಯೇ ಪರಮಾತ್ಮನ ಲೀಲೆ ಯಾಗಿದೆ. ಈ ಲೀಲಾ ಆಧಾರ ಅವನಾದುದರಿಂದ ಅವರು ಉಮಾಪತಿ ಎನಿಸಿ, ಮತ್ತೊಂದು ಸಮಯದಲ್ಲಿ ಈ ವ್ಯಕ್ತವಾದ ಸಮಸ್ತವೂ ಅವನಲ್ಲಿ ಅಡಗಿ ಹೋಗುತ್ತದೆ. ಲೀಲೆ ನಿಲ್ಲುತ್ತೆ. ಈಗ ಉಮಾಪತಿಯಲ್ಲ ಅಂದರೆ ಲೀಲೆ ತಪ್ಪಿದಡೆ ಸ್ವಯಂಭು. ಇದು ತಾನೇ ತಾನಾಗಿ ನಿಂತ ನಿಲುವು, ಇದೇ ಅಲ್ಲಮಪ್ರಭುಗಳು ಅದ್ಭುತ ಸರಳವಾಗಿ ವಿವರಿಸಿದ ಶಕ್ತಿವಿಶಿಷ್ಠಾದೈತ ಸಿದ್ಧಾಂತ. ಶಕ್ತಿಯಿಂದ ಹೊರಹೊಮ್ಮಿದ ಸೃಷ್ಟಿಯು ಮರಳಿ ಶಿವನಲ್ಲಿ ಐಕ್ಯಹೊಂದಿ ಲಯವಾಗುವುದು. ಶಿವನಿಗೆ ಲೀಲೆ ಸಾಕಾದಾಗ ಆ ಶಕ್ತಿ ಅವನಲ್ಲಿ ಐಕ್ಯವಾಗುವುದು. ಅದೊಂದು ಶಿವನ ಸ್ವಯಂಭೂ ಸ್ಥಿತಿ. ಶಿವ ಮತ್ತು ಶಕ್ತಿ ಬೇರೆ ಅಲ್ಲ. ಶಿವ ನಿಲ್ಲದೇ ಶಕ್ತಿ ಇಲ್ಲ.
ಶಕ್ತಿ ಎಂದರೆ ಅರ್ಥ ಎನರ್ಜಿ (energy). ಆಧುನಿಕ astro physics, therotical physics, quantum physics ಪ್ರಕಾರವೂ ಜಗತ್ತೆಂದರೆ ಬೇರೆ ಬೇರೆ ರೂಪದಲ್ಲಿ ಬದಲಾವಣೆಯಾಗುತ್ತಿರುವ ಶಕ್ತಿಗಳ ಸ್ವರೂಪ. (different forms of energy).ಮತ್ತು ಶಕ್ತಿಗೆ 9 ಸ್ವರೂಪ ಗಳಿವೆ. ಜಗತ್ತಿಗೆ ಉತ್ಪತ್ತಿ, ಲಯವು ಎರಡೂ ಇದೆ ಎಂದೇ ಇಂದಿನ ತಜ್ಞರ ಅಭಿಪ್ರಾಯ.
ಇನ್ನೂ ಐಕಾನೋಗ್ರಾಫಿ (iconography) ಯಲ್ಲಿ (ಐಕಾನೋಗ್ರಾಫಿ ಅಂದರೆ ಚಿತ್ರಕಲೆಗಾಗಿ, ಶಿಲ್ಪಕಲೆಗೆ , ಪೂಜೆಗಾಗಿ, ಪುರಾಣಗಳಿಗಾಗಿ ಮೂರ್ತ ಸ್ವರೂಪ ನಿರ್ಮಿಸುವುದು) ; ಶಕ್ತಿಯು ಉತ್ಪತ್ತಿಗೆ ಕಾರಣ ವಾದ್ದರಿಂದ ಹೆಣ್ಣಾಗಿ , ಶಕ್ತಿಸ್ವರೂಪಿನಿ ಯಾದ್ದರಿಂದ, ಶಕ್ತಿಯ ಪ್ರಭಲತೆ ತೋರಿಸಲು ಬಹುಭುಜ ಕೈ , ವಿವಿಧ ಆಯುಧಗಳಿಂದ ಚಿತ್ರಿಸಿ ಕಥೆ ರಚಿಸಿದ್ದಾರೆ. ಶಕ್ತಿ ಸ್ವರೂಪಿಣಿಯಾಗಿ ಜಗತ್ತಿನ ಎಲ್ಲ ಕೆಟ್ಟದ್ದನ್ನು(ರಾಕ್ಷಸ) ವಿನಾಶ ಮಾಡು ತಾಯಿ ಎಂದು ಪೂಜಿಸುತ್ತಾರೆ.
Science behind Shakti:
Unmanifested is called Shiva and the one manifested is called Shakti or
Energy. Adishakti is primordial energy. It is possible to understand manifested which is in different forms of energy (Shakti) by science but it is difficult to understand Unmenifested which has to be only experienced .(Anubhava).
Scientists began to recognize that everything in the Universe is made out of energy.
We are much more than what we perceive ourselves to be, and it’s time we begin to see ourselves in that light. If you observed the composition of an atom with a microscope you would see a small, invisible tornado-like vortex, with a number of infinitely small energy vortices called quarks and photons. These are what make up the structure of the atom. As you focus closer on the structure of the atom, you would see nothing, but a physical void. The atom has no physical structure, we have no physical structure, physical things really don’t have any physical structure! Atoms are made out of invisible energy, not tangible matter.
Quantum physicists discovered that physical atoms are made up of vortices of energy that are constantly spinning and vibrating, each one radiating its own unique energy signature.It turns out that roughly 68% of the universe is dark energy.
The nine different types of energy include thermal energy, radiant energy, chemical energy, nuclear energy, electrical energy, motion energy, sound energy, elastic energy and gravitational energy.
Each form can be converted or changed into the other forms.
*ಇದನ್ನೇ ನಮ್ಮ ಶಿವಯೋಗಿಗಳು ನವ ಶಕ್ತಿ ಎಂದು ಕರೆದರು.*
Although there are many specific types of energy, the two major forms of Energy are Kinetic Energy and Potential Energy.
*ಇದನ್ನೇ ನಮ್ಮ ಶಿವಯೋಗಿಗಳು ಸ್ಥಾವರ, ಜಂಗಮ ಎಂದು ಕರೆದರು.*
Anything that moves is an example of kinetic energy. Kinetic energy is the energy in moving objects or mass. Examples include mechanical energy, electrical energy etc.
Potential energy is any form of energy that has stored potential that can be put to future use. Examples include nuclear energy, chemical energy, etc.
Everything in Life is Vibration” – Albert Einstein
The law of nature states that everything in world has a vibration.
ನಿಮಗೆಲ್ಲ ನವರಾತ್ರಿ, ದಸರಾ ಹಬ್ಬದ ಶುಭಾಶಯಗಳು.
Wish you all Happy Navratri and Dasara.
- ✍️Dr Prema Pangi
#ಮರನೊಳಗಣ_ಪತ್ರೆಫಲಂಗಳು
Comments
Post a Comment