ವಚನ ದಾಸೋಹ - ಗುದಸ್ಥಾನದಲ್ಲಿ ಆಧಾರಚಕ್ರ
#ಗುದಸ್ಥಾನದಲ್ಲಿ ಆಧಾರಚಕ್ರ, ಅಲ್ಲಿಗೆ ಪೃಥ್ವಿಯೆಂಬ ಮಹಾಭೂತ,
ಸದ್ಯೋಜಾತವಕ್ತ್ರ,
ಬ್ರಹ್ಮ ಪೂಜಾರಿ, ಸುವರ್ಣದ ತೇಜ, ಬಾಲರವಿಕೋಟಿ ಪ್ರಕಾಶ,
ನಾಲ್ಕೆಸಳಿನ ತಾವರೆಯ ಮಧ್ಯದಲ್ಲಿ
ಸುವರ್ಣಮಯಲಿಂಗ - ಅದು ಆಚಾರಲಿಂಗ, ಅದಕ್ಕೆ ಬೀಜಾಕ್ಷಾರ
ಓಂ ನಾಂ ನಾಂ ನಾಂ ಎಂಬ ನಾದಘೋಷ. ಎಸಳು ನಾಲ್ಕರಲ್ಲಿ
ವ, ಶ, ಷ, ಸ ಎಂಬ ನಾಲ್ಕಕ್ಷರ.
ಅದು ದೇವರಿಗೂ ತಮಗೂ ಪಶ್ಚಿಮಮುಖ- ಸದ್ಯೋಜಾತ ವಕ್ತ್ರ, ಆಧಾರಚಕ್ರ.
ಲಿಂಗಸ್ಥಾನದಲ್ಲಿ ಸ್ವಾದಿಷ್ಠಾನಚಕ್ರ, ಅಲ್ಲಿಗೆ ಅಪ್ಪುವೆಂಬ
ಮಹಾಭೂತ, ವಾಮದೇವವಕ್ತ್ರ,
ವಿಷ್ಣು ಪೂಜಾರಿ, ನೀಲದ ತೇಜ, ಬಾಲದ್ವಿಕೋಟಿ ಸೂರ್ಯಪ್ರಕಾಶ,
ಅರೆಸಳಿನ ತಾವರೆಯ ಮಧ್ಯದಲ್ಲಿ
ಗೋಕ್ಷೀರದ ಹಾಗೆ ಧವಳ ವರ್ಣದ ಲಿಂಗ - ಅದು ಗುರುಲಿಂಗ; ಅದಕ್ಕೆ ಬೀಜಾಕ್ಷರ
ಓಂ ಮಾಂ ಮಾಂ ಮಾಂ ಎಂಬ ನಾದಘೋಷ.
ಎಸಳು ಆರರಲ್ಲಿ ಬ ಭ ಮ ಯ ರ ಲ ಎಂಬ ಷಡಕ್ಷರ
ಅದು ದೇವರಿಗೂ ತಮಗೂ ಉತ್ತರಮುಖ-ವಾಮದೇವವಕ್ತ್ರ, ಸ್ವಾದಿಷ್ಠಾನಚಕ್ರ.
ನಾಬಿಸ್ಥಾನದಲ್ಲಿ ಮಣಿಪೂರಕಚಕ್ರ,
ಅಲ್ಲಿಗೆ ಅಗ್ನಿಯೆಂಬ ಮಹಾಭೂತ, ಅಘೋರವಕ್ತ್ರ
ರುದ್ರ ಪೂಜಾರಿ, ಮಾಣಿಕ್ಯತೇಜ, ಬಾಲತ್ರಿಕೋಟಿಸೂರ್ಯಪ್ರಕಾಶ,
ಹತ್ತೆಸಳಿನ ತಾವರೆಯ ಮಧ್ಯದಲ್ಲಿ
ಮಾಣಿಕ್ಯವರ್ಣದ ಲಿಂಗ-ಅದು ಶಿವಲಿಂಗ, ಅದಕ್ಕೆ ಬೀಜಾಕ್ಷರ
ಓಂ ಶಿಂ ಶಿಂ ಶಿಂ ಎಂಬ ನಾದಘೋಷ.
ಎಸಳು ಹತ್ತರಲ್ಲಿ ಡ, ಢ, ಣ, ತ, ಥ, ದ, ಧ, ನ, ಪ, ಫ ಎಂಬ ದಶಾಕ್ಷರ.
ಅದು ದೇವರಿಗೂ ತಮಗೂ ದಕ್ಷಿಣಮುಖ - ಅಘೋರವಕ್ತ್ರ, ಮಣಿಪೂರಕಚಕ್ರ.
ಹೃದಯ ಸ್ಥಾನದಲ್ಲಿ ಅನಾಹತಚಕ್ರ,
ಅಲ್ಲಿಗೆ ವಾಯುವೆಂಬ ಮಹಾಭೂತ, ತತ್ಪುರುಷವಕ್ತ್ರ,
ಈಶ್ವರ ಪೂಜಾರಿ ಕಪೋತವರ್ಣದ ತೇಜ,
ಬಾಲಚತುಷ್ಕೋಟಿ ಸೂರ್ಯಪ್ರಕಾಶ, ಹನ್ನೆರಡೆಸಳಿನ ತಾವರೆಯ
ಮಧ್ಯದಲ್ಲಿ ಶುದ್ಧ ಪಚ್ಚವರ್ಣದಲಿಂಗ-ಅದು ಜಂಗಮಲಿಂಗ, ಅದಕ್ಕೆ ಬೀಜಾಕ್ಷರ
ಓಂ ವಾಂ ವಾಂ ವಾಂ ಎಂಬ ನಾದಘೋಷ.
ಎಸಳು ಹನ್ನೆರಡರಲ್ಲಿ ಕ ಖ ಗ ಘ ಙ ಚ ಛ ಜ ಝ ಞ ಟಂಠ
ಎಂಬ ದ್ವಾದಶಾಕ್ಷರ
ಅದು ದೇವರಿಗೂ ತಮಗೂ ಪೂರ್ವಮುಖ-ತತ್ಪುರುಷ ವಕ್ತ್ರ, ಅನಾಹತ ಚಕ್ರ.
ಕಠಸ್ಥಾನದಲ್ಲಿ ವಿಶುದ್ಧಿಚಕ್ರ, ಅಲ್ಲಿಗೆ ಆಕಾಶವೆಂಬ ಮಹಾಭೂತ, ಈಶಾನವಕ್ತ್ರ,
ಸದಾಶಿವ ಪೂಜಾರಿ, ವಿದ್ಯುಲ್ಲತೆಯ ತೇಜ,
ಬಾಲಪಂಚಕೋಟಿ ಸೂರ್ಯಪ್ರಕಾಶ, ಹದಿನಾರೆಸಳಿನ ತಾವರೆಯ ಮಧ್ಯದಲ್ಲಿ
ಅನಂತಕೋಟಿ ಮಿಂಚುಗಳ ವರ್ಣದ ಲಿಂಗ-
ಅದು ಪ್ರಸಾದಲಿಂಗ, [ಓಂ ಯಾಂ ಯಾಂ ಯಾಂ ಎಂಬ
ನಾದಘೋಷ]. ಎಸಳು ಹದಿನಾರರಲ್ಲಿ
ಅ ಆ ಇ ಈ ಉ ಊ ಋ ೂ ಏ ಐ ಓ ಔ ಅಂ ಅಃ ಎಂಬ
ಷೋಡಶಾಕ್ಷರ. ಅದು ದೇವರಿಗೂ ತಮಗೂ ಊಧ್ರ್ವಮುಖ-
ಈಶಾನವಕ್ತ್ರ, ವಿಶುದ್ಧಿಚಕ್ರ.
ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಅಲ್ಲಿಗೆ ಮನವೆಂಬ ಮಹಾಭೂತ, ಶ್ರೀಗುರುವೆ ವಕ್ತ್ರ
ಮಾಹೇಶ್ವರ ಪೂಜಾರಿ, ಜ್ಯೋತಿರ್ವರ್ಣದ ತೇಜ.
ಬಾಲಷಟ್ಕೋಟಿ ಸೂರ್ಯಪ್ರಕಾಶ
ಎರಡೆಸಳಿನ ತಾವರೆಯ ಮಧ್ಯದಲ್ಲಿ ಶ್ರೀಗುರುವಿನ ಶ್ರೀಪಾದದ ವರ್ಣದ ಲಿಂಗ
ಎಡಗಡೆಯ ಪಾದ ಕೆಂಪು ವರ್ಣ,
ಬಲಗಡೆಯ ಪಾದ ಶ್ವೇತವರ್ಣ-ಅದು ಮಹಾಲಿಂಗ.
ಅದಕ್ಕೆ ಬೀಜಾಕ್ಷರ `ಓಂಕಾರನಾದ ಘೋಷ.
ಎಸಳೆರಡರಲ್ಲಿ ಅಕ್ಷರ ಹಂ ಸಂ ಎಂಬ [ಎರಡಕ್ಷರ]
ಅದು ದೇವರಿಗೂ ತನಗೂ ಗಂಬಿರ ಮುಖ-ಶ್ರೀಗುರುವಕ್ತ್ರ, ಆಜ್ಞಾಚಕ್ರ.
ಅಲ್ಲಿಂದತ್ತ ಬ್ರಹ್ಮರಂಧ್ರದಲ್ಲಿ ಬ್ರಹ್ಮಚಕ್ರ ಅಲ್ಲಿಗೆ
ಚಂದ್ರನೆಂಬ ಮಹಾಭೂತ, ಲಿಂಗವಕ್ತ್ರ
ಪರಮೇಶ್ವರ ಪೂಜಾರಿ, ಮಹಾಜ್ಯೋತಿರ್ವರ್ಣದ ತೇಜ,
ಬಾಲ ಅನಂತಕೋಟಿಸೂರ್ಯಪ್ರಕಾಶ
ಒಂದುನೂರ ಎಂಟು ಸಾವಿರೆಸಳಿನ ತಾವರೆಯ ಮಧ್ಯದಲ್ಲಿ
ಮಹಾಜ್ಯೋತಿರ್ವರ್ಣದ ಲಿಂಗ.
ಅದು ನಿರಾಮಯ ಲಿಂಗ, ಅದಕ್ಕೆ ಬೀಜಾಕ್ಷರ ಪ್ರಣವ ನಾದ ಘೋಷ,
ಎಸಳೊಂದುನೂರ ಎಂಟು ಸಾವಿರದಲ್ಲಿ, ಒಂದನೂರ ಎಂಟು ಸಾವಿರ ಅಕ್ಷರ-
ಪ್ರೇತಾಸನ ವಿಶ್ವತೋಮುಖೋ ಬ್ರಹ್ಮಚಕ್ರ.
ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ
ವಿಶ್ವತೋ ಬಾಹುರುತ ವಿಶ್ವತಃ ಪಾತ್
ಸಂ ಬಾಹ್ಯಭ್ಯಾಂ ಧಮತಿ ಸಂಪತತ್ರೈ
ದ್ರ್ಯಾವಾ ಭೂಮೀ ಜನಯನ್ ದೇವ ಏಕಃ
ಇಂತೀ ಗುರುವಿನ ಬೆಳಗು ವಿಶ್ವವನ್ನಪಹರಿಸಿ, ತಾನು ತಾನೆ ಸೋಹಂ ಪ್ರಕಾಶ
ಕೂಡಲಚೆನ್ನಸಂಗಮದೇವಾ / 598
- ಅವಿರಾಳ ಜ್ಞಾನಿ ಚೆನ್ನಬಸವಣ್ಣನವರು
ಈ ವಚನದಲ್ಲಿ ಅವಿರಳ ಜ್ಞಾನಿ ಚೆನ್ನಬಸವಣ್ಣನವರು
ಶಿವಯೋಗದ ಚಕ್ರಗಳು, ದಳಗಳು, ಚಕ್ರಗಳ ಸ್ಥಾನ, ಮುಖ, ತೇಜ, ಪ್ರಕಾಶ, ಪೂಜಿಸುವ ಪೂಜಾರಿ, ಬೀಜಾಕ್ಷರ, ದಳಗಳ ಮೇಲಿನ ಕನ್ನಡ ಅಕ್ಷರಮಾಲೆಯ ಅಕ್ಷರಗಳು , ವರ್ಣಗಳು, ಚಕ್ರಗಳಲ್ಲಿ ಸ್ಥಾಪಿಸಿದ ಲಿಂಗದ ವರ್ಣನೆ ಮತ್ತು ದಿಕ್ಕುಗಳ ಪರಿಚಯ ಮಾಡಿಕೊಡುತ್ತಾರೆ. ಹಾಗಾದರೆ ಈ ಚಕ್ರಗಳು ಎಂದರೆ ಏನು ನೋಡುವಾ.
ಚಕ್ರಗಳು ಮಾನವನ ನರಗಳ ವ್ಯವಸ್ಥೆಯ ಬೆನ್ನು ಎಲುಬಿನ ಉದ್ದಕ್ಕೂ ಸ್ಥಾಪಿತವಾಗಿರುವ ಶಕ್ತಿಯ ಕೇಂದ್ರಗಳು, ಇವು ಸೂಕ್ಷ್ಮ ಶರೀರದ ಆವರ್ತಗಳು. ಶಕ್ತಿಗಳನ್ನು ಸ್ವೀಕರಿಸಲು ಮತ್ತು ರವಾನೆ ಮಾಡಲು ಇರುವ ಬಿಂದುಗಳಾಗಿವೆ. ಮುಖ್ಯವಾದ ಮೂರು ನಾಡಿಗಳು ಇಡಾ, ಪಿಂಗಲ ಮತ್ತು ಸುಷುಮ್ನಾಗಳು (ಸಿಂಪಥೆಟಿಕ್, ಪ್ಯಾರಾಸಿಂಪಥೆಟಿಕ್ ಮತ್ತು ಕೇಂದ್ರ ನರಗಳ ವ್ಯವಸ್ಥೆ) ಬೆನ್ನುಮೂಳೆಯ ಮೇಲೆ ಡೊಂಕಾದ ಹಾದಿಯಲ್ಲಿ ಚಲಿಸುತ್ತವೆ ಮತ್ತು ಹಲವು ಬಾರಿ ಒಂದನ್ನೊಂದು ದಾಟುತ್ತವೆ. ಛೇದನದ ಬಿಂದುವಿನಲ್ಲಿ ಬಲವಾದ ಶಕ್ತಿ ಕೇಂದ್ರಗಳನ್ನು ರಚಿಸುತ್ತವೆ, ಆ ಶಕ್ತಿ ಕೇಂದ್ರ ಗಳನ್ನು ಚಕ್ರ ಎಂದು ಕರೆಯಲಾಗುತ್ತದೆ. ಚಕ್ರವು ಚಟುವಟಿಕೆಗಳ ಕೇಂದ್ರವಾಗಿದ್ದು ಅದು ಜೀವ ಶಕ್ತಿಯನ್ನು ಸ್ವೀಕರಿಸಿ, ಸಮೀಕರಿಸಿ ನಂತರ ಅದನ್ನು ಪ್ರಕಟಿಸುತ್ತದೆ. ನಿಮ್ಮ ಬೆನ್ನಲುಬಿನಲ್ಲಿರುವ ಪ್ರತಿ ಚಕ್ರವೂ ತನ್ನ ಹತ್ತಿರದ ಶಾರೀರಿಕ ಕಾರ್ಯಗಳ ಮೇಲೆ ಪ್ರಭಾವ ಬೀರುತ್ತದೆ.
ಬೆನ್ನುಹುರಿಯ ತಳದಿಂದ ಆರಂಭವಾಗಿ ಮತ್ತು ತಲೆಯ ಬುರುಡೆಯ ಮೇಲ್ಭಾಗಕ್ಕೆ ಮೇಲ್ಮುಖವಾಗಿ ಚಲಿಸುತ್ತದೆ. ಚಕ್ರಗಳನ್ನು ಜೀವಭೌತಶಾಸ್ತ್ರದ ಶಕ್ತಿ ಅಥವಾ ಮಾನವ ಶರೀರದ ಪ್ರಾಣದ ಒಂದು ಬಿಂದುಸಂಪರ್ಕ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಏಳು ಚಕ್ರಗಳು ಇವು ಸೂಕ್ಷ್ಮ ಶರೀರದ ಒಳಗೆ ಅಸ್ತಿತ್ವದಲ್ಲಿದೆ. ದೈಹಿಕ ಶರೀರದ ಮೇಲಿನ ಒಂದು ಬಿಂದುವಿನಿಂದ ಸೂಕ್ಷ್ಮ ಶರೀರಗಳ ಪದರಗಳಲ್ಲಿ ವಿಸ್ತರಿಸಿ ತಿರುಗುತ್ತಾ ಫ್ಯಾನ್-ಆಕಾರದ ರಚನೆಯನ್ನು ಸೃಷ್ಟಿಸುತ್ತವೆ.
ಇವು ಶಕ್ತಿಯನ್ನು ಒಳಮುಖವಾಗಿ ವ್ಯಾಪಿಸುವ ಸುರುಳಿಗಳು. ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರು ಈ ವಚನದಲ್ಲಿ ತಿಳಿಸಿದ ಚಕ್ರಗಳ ಸಕೀಲಗಳು.
ಗುದಸ್ಥಾನ,
ಪೃಥ್ವಿ ಮಹಾಭೂತ,
ಸದ್ಯೋಜಾತವಕ್ತ್ರ,
ಸುವರ್ಣದ ತೇಜ,
ಬಾಲರವಿಕೋಟಿಪ್ರಕಾಶ,
ಆಚಾರಲಿಂಗ -.ಇದು ನಾಲ್ಕೆಸಳಿನ ತಾವರೆಯ ಮಧ್ಯದಲ್ಲಿಯ ಸುವರ್ಣಮಯ ಲಿಂಗ ಪೂಜಿಸುವ ಪೂಜಾರಿ ಬ್ರಹ್ಮ
ಬೀಜಾಕ್ಷಾರ "ಓಂ ನಾಂ ನಾಂ ನಾಂ"
ಎಸಳು ನಾಲ್ಕು
"ವ, ಶ, ಷ, ಸ" ಎಂಬ ನಾಲ್ಕಕ್ಷರ.
ಅದು ದೇವರಿಗೂ ತಮಗೂ ಪಶ್ಚಿಮಮುಖ.
2.ಸ್ವಾದಿಷ್ಠಾನಚಕ್ರ
ಲಿಂಗಸ್ಥಾನ
ಅಪ್ಪುವೆಂಬ ಮಹಾಭೂತ,
ವಾಮದೇವವಕ್ತ್ರ,
ನೀಲದ ತೇಜ,
ಬಾಲದ್ವಿಕೋಟಿ ಸೂರ್ಯಪ್ರಕಾಶ,
ಗುರುಲಿಂಗ - ಇದು ಆರು ಎಸಳುನ ತಾವರೆಯ ಮಧ್ಯದಲ್ಲಿ ಗೋಕ್ಷೀರದ ಹಾಗೆ ಧವಳ ವರ್ಣದ ಲಿಂಗ
ಪೂಜಿಸುವ ಪೂಜಾರಿ ವಿಷ್ಣು ,
ಬೀಜಾಕ್ಷರ "ಓಂ ಮಾಂ ಮಾಂ ಮಾಂ"
ಎಸಳು ಆರರಲ್ಲಿ "ಬ ಭ ಮ ಯ ರ ಲ" ಎಂಬ ಷಡಕ್ಷರ
ಅದು ದೇವರಿಗೂ ತಮಗೂ ಉತ್ತರಮುಖ.
3.ಮಣಿಪೂರಕಚಕ್ರ
ನಾಭಿಸ್ಥಾನ
ಅಗ್ನಿಯೆಂಬ ಮಹಾಭೂತ,
ಅಘೋರವಕ್ತ್ರ
ಮಾಣಿಕ್ಯತೇಜ, ಬಾಲತ್ರಿಕೋಟಿಸೂರ್ಯಪ್ರಕಾಶ,
ಶಿವಲಿಂಗ -ಹತ್ತೆಸಳಿನ ತಾವರೆಯ ಮಧ್ಯದಲ್ಲಿ ಮಾಣಿಕ್ಯವರ್ಣದ ಲಿಂಗ
ಪೂಜಿಸುವ ಪೂಜಾರಿ ರುದ್ರ
ಬೀಜಾಕ್ಷರ "ಓಂ ಶಿಂ ಶಿಂ ಶಿಂ"
ಎಸಳು ಹತ್ತರಲ್ಲಿ "ಡ, ಢ, ಣ, ತ, ಥ, ದ, ಧ, ನ, ಪ, ಫ" ಎಂಬ ದಶಾಕ್ಷರ.
ಅದು ದೇವರಿಗೂ ತಮಗೂ ದಕ್ಷಿಣಮುಖ.
4.ಅನಾಹತಚಕ್ರ
ಹೃದಯ ಸ್ಥಾನ
ವಾಯುವೆಂಬ ಮಹಾಭೂತ,
ತತ್ಪುರುಷವಕ್ತ್ರ,
ಕಪೋತವರ್ಣದ ತೇಜ,
ಬಾಲಚತುಷ್ಕೋಟಿ ಸೂರ್ಯಪ್ರಕಾಶ, ಜಂಗಮಲಿಂಗ - ಹನ್ನೆರಡೆಸಳಿನ ತಾವರೆಯ ಮಧ್ಯದಲ್ಲಿ ಶುದ್ಧ ಪಚ್ಚವರ್ಣದಲಿಂಗ
ಪೂಜಿಸುವ ಪೂಜಾರಿ ಈಶ್ವರ
ಬೀಜಾಕ್ಷರ "ಓಂ ವಾಂ ವಾಂ ವಾಂ"
ಎಸಳು ಹನ್ನೆರಡರಲ್ಲಿ "ಕ ಖ ಗ ಘ ಙ ಚ ಛ ಜ ಝ ಞ ಟಂಠ" ಎಂಬ ದ್ವಾದಶಾಕ್ಷರ
ಅದು ದೇವರಿಗೂ ತಮಗೂ ಪೂರ್ವಮುಖ
5.ವಿಶುದ್ಧಿಚಕ್ರ
ಕಂಠಸ್ಥಾನ
ಆಕಾಶವೆಂಬ ಮಹಾಭೂತ,
ಈಶಾನವಕ್ತ್ರ,
ವಿದ್ಯುಲ್ಲತೆಯ ತೇಜ, ಬಾಲಪಂಚಕೋಟಿ ಸೂರ್ಯಪ್ರಕಾಶ,
ಪ್ರಸಾದಲಿಂಗ - ಹದಿನಾರೆಸಳಿನ ತಾವರೆಯ ಮಧ್ಯದಲ್ಲಿ ಅನಂತಕೋಟಿ ಮಿಂಚುಗಳ ವರ್ಣದ ಲಿಂಗ
ಪೂಜಿಸುವ ಪೂಜಾರಿ ಸದಾಶಿವ
ಬೀಜಾಕ್ಷರ "ಓಂ ಯಾಂ ಯಾಂ ಯಾಂ"
ಎಸಳು ಹದಿನಾರರಲ್ಲಿ
"ಅ ಆ ಇ ಈ ಉ ಊ ಋ Iೂ ಏ ಐ ಓ ಔ ಅಂ ಅಃ" ಎಂಬ ಷೋಡಶಾಕ್ಷರ.
ಅದು ದೇವರಿಗೂ ತಮಗೂ ಊಧ್ರ್ವಮುಖ.
6.ಆಜ್ಞಾಚಕ್ರ
ಭ್ರೂಮಧ್ಯ
ಮನವೆಂಬ ಮಹಾಭೂತ,
ಶ್ರೀಗುರುವೆ ವಕ್ತ್ರ
ಜ್ಯೋತಿರ್ವರ್ಣದ ತೇಜ.
ಬಾಲಷಟ್ಕೋಟಿ ಸೂರ್ಯಪ್ರಕಾಶ
ಮಹಾಲಿಂಗ - ಇದು ಎರಡೆಸಳಿನ ತಾವರೆಯ ಮಧ್ಯದಲ್ಲಿ ಶ್ರೀಗುರುವಿನ ಶ್ರೀಪಾದದ ವರ್ಣದ ಲಿಂಗ
ಪೂಜಿಸುವ ಪೂಜಾರಿ ಮಾಹೇಶ್ವರ
ಎಡಗಡೆಯ ಪಾದ ಕೆಂಪು ವರ್ಣ,
ಬಲಗಡೆಯ ಪಾದ ಶ್ವೇತವರ್ಣ.
ಬೀಜಾಕ್ಷರ `ಓಂ"ಕಾರ
ಎಸಳೆರಡರಲ್ಲಿ ಅಕ್ಷರ "ಹಂ ಸಂ" ಎರಡಕ್ಷರ.
ಅದು ದೇವರಿಗೂ ತನಗೂ ಗಂಭೀರ ಮುಖ.
7.ಬ್ರಹ್ಮಚಕ್ರ
ಬ್ರಹ್ಮರಂಧ್ರ
ಚಂದ್ರನೆಂಬ ಮಹಾಭೂತ,
ಲಿಂಗವಕ್ತ್ರ
ಮಹಾಜ್ಯೋತಿರ್ವರ್ಣದ ತೇಜ,
ಬಾಲ ಅನಂತಕೋಟಿ ಸೂರ್ಯಪ್ರಕಾಶ
ನಿರಾಮಯ ಲಿಂಗ - ಇದು ಒಂದುನೂರಎಂಟು ಸಾವಿರೆಸಳಿನ ತಾವರೆಯ ಮಧ್ಯದಲ್ಲಿ ಮಹಾಜ್ಯೋತಿರ್ವರ್ಣದ ಲಿಂಗ.
ಪೂಜಿಸುವ ಪೂಜಾರಿ ಪರಮೇಶ್ವರ
ಬೀಜಾಕ್ಷರ "ಪ್ರಣವ"
ಎಸಳೊಂದುನೂರ ಎಂಟು ಸಾವಿರದಲ್ಲಿ(108000 ಎಸಳು), ಒಂದನೂರ ಎಂಟು ಸಾವಿರ ಅಕ್ಷರ(108000ಅಕ್ಷರ)
ಪ್ರೇತಾಸನ ವಿಶ್ವತೋ ಮುಖ,
ವಿಶ್ವತೋ ಚಕ್ಷು
ವಿಶ್ವತೋ ಬಾಹು ವಿಶ್ವತಃ ಪಾತ್ ಸಂ ಬಾಹ್ಯಭ್ಯಾಂ ಧಮತಿ ಸಂಪತತ್ರೈ ದ್ರ್ಯಾವಾ ಭೂಮೀ ಜನಕ್ಕೇ ಏಕಃ ದೇವ ಎಂಬ ಗುರುವಿನ ಬೆಳಗು.
#ಕುಂಡಲಿನಿ ಶಕ್ತಿ:
ಸೃಷ್ಟಿಯಲ್ಲಿ ಪ್ರಕಟವಾದ ಶಕ್ತಿಯನ್ನು ಕುಂಡಲಿನಿ ಶಕ್ತಿ ಎಂದು ಕರೆಯಲಾಗುತ್ತದೆ, ಇದು ಮಾನವನ ಕಾಯದಲ್ಲಿ ಸುಪ್ತವಾಗಿ ಸುರುಳಿಯಾಗಿ ಬೆನ್ನುಹುರಿಯ ತಳದಲ್ಲಿ ಮಲಗಿರುತ್ತದೆ. ಈ ಶಕ್ತಿಯನ್ನು ಎಚ್ಚರಿಸುವುದು ಶಿವಯೋಗದ ಉದ್ದೇಶವಾಗಿದೆ ಮತ್ತು ಈ ಶಕ್ತಿಯು ಬೆನ್ನಿನ ಮೂಲಕ ಅತ್ಯಂತ ಸೂಕ್ಷ್ಮವಾಗುತ್ತಾ ಹೋಗುವ ಚಕ್ರಗಳ ಮೂಲಕ ಏರುವುದು ಮತ್ತು ತಲೆಯ ಮೇಲಿರುವ ಸಹಸ್ರಾರವನ್ನು ಸೇರಿ ಆ ಮೂಲಕ ಭಗವಂತನನ್ನು ಸೇರುವುದು ಇದರ ಮುಖ್ಯ ಗುರಿಯಾಗಿದೆ.
ಮೆದುಳಿನ ಮೂರನೆಯ ಕುಹರದಲ್ಲಿರುವ ಪೀನಲ್ ಗ್ರಂಥಿಯು ಒಂದು ಲಘುವಾದ ಸೂಕ್ಷ್ಮಸಂವೇದನೆಯ ಗ್ರಂಥಿ. ನಿದ್ರೆ ಮತ್ತು ಎಚ್ಚರಗೊಳ್ಳುವುದನ್ನು ನಿಯಂತ್ರಿಸುವ ಈ ಗ್ರಂಥಿಯು ಮೆಲಟೊನಿನ್ ಹಾರ್ಮೋನನ್ನು ಉತ್ಪಾದಿಸುತ್ತದೆ. ಸಹಸ್ರಾರವನ್ನು ಸಾಮಾನ್ಯವಾಗಿ ಶುದ್ಧ ಅರಿವಿನ ಚಕ್ರ ಎಂದು ಪರಿಗಣಿಸಲಾಗುತ್ತದೆ.
ಯೋಗಿಗಳು ದೇವನಿಲಯವಾದ ಈ ದೇಹದಲ್ಲಿ ಆರು ಶಕ್ತಿ ಕೇಂದ್ರಗಳನ್ನು ಗುರುತಿಸಿದ್ದಾರೆ. ಮೊದಲನೆಯದು ಮೂಲಾಧಾರ, ಸ್ವಾಧಿಷ್ಟಾನ, ಮಣಿಪೂರಕ, ಅನಾಹತ ಮತ್ತು ವಿಶುದ್ದಿ, ಆರನೆಯದು ಆಜ್ಞಾಚಕ್ರ. ಈ ಚಕ್ರಗಳ ಮಧ್ಯೆ ಪ್ರಾಣ ಮತ್ತು ಮನಸ್ಸುಗಳು ಸಂಚರಿಸುತ್ತವೆ. ಮೇಲಿನಿಂದ ಕೆಳಗೆ ಹರಿವುದು ಅಧೋಚಲನೆ; ಕೆಳಗಿನಿಂದ ಮೇಲೆ ಮೇಲೆ ಹೋಗುವುದು ಊರ್ಧ್ವಚಲನೆ. ಸಾಮಾನ್ಯವಾಗಿ ಅಧೋಚಲನೆ ಹೆಚ್ಚು. ಅದು ಪ್ರವೃತ್ತಿ ಜೀವನ, ಅಧೋಮುಖಿಯಾದ ಮನಸ್ಸು ವಿಷಯಗಳತ್ತ ಹರಿಯುತ್ತದೆ. ವಿಷಯಸುಖದಲ್ಲಿ ರಮಿಸುತ್ತದೆ. ಅದು ಊರ್ಧ್ವಮುಖಗೊಂಡಾಗ ವಿಷಯಗಳಿಂದ ನಿವೃತ್ತವಾಗುತ್ತದೆ. ಮೊದಲನೆಯದು ಪ್ರವೃತ್ತಿ ಮಾರ್ಗ, ಎರಡನೆಯದು ನಿವೃತ್ತಿ ಮಾರ್ಗ, ಪ್ರವೃತ್ತಿ ಮಾರ್ಗದಲ್ಲಿ ನಡೆವವನೇ ಸಂಸಾರಿ, ನಿವೃತ್ತಿ ಮಾರ್ಗದಲ್ಲಿ ನಡೆವವನೇ ಯೋಗಿ,
ಯೋಗಿಯು ಆಯಾ ಸ್ಥಾನಗಳಲ್ಲಿ ನಿಂತು, ಮನಸ್ಸನ್ನು ಅಲ್ಲಿ ಸ್ಥಿರಗೊಳಿಸಿ ಅಲ್ಲಿರುವ ದೈವೀ ಕಳೆಯೊಂದಿಗೆ ಸುಖಿಸಬೇಕು. ಇದು ಆಜ್ಞಾಚಕ್ರದವರೆಗೆ, ಆಜ್ಞಾಚಕ್ರವನ್ನು ಮೀರಿ ಮೇಲಿರುವ ಪ್ರದೇಶವೆ ಉನ್ಮನಿಜ್ಯೋತಿ. ಮನಸ್ಸು ಆ ಪ್ರದೇಶವನ್ನು ಪ್ರವೇಶಿಸಿದಾಗ ಉನ್ಮನಿಯೆನಿಸುತ್ತದೆ. ವ್ಯಷ್ಟಿ ಸಮಷ್ಟಿ, ಪ್ರಪಂಚದ ಆಕರ್ಷಣೆಗಳಿಂದ ಅದು ಪೂರ್ಣ ಮುಕ್ತವಾಗಿರುತ್ತದೆ. ನಿಶ್ಚಿಂತ ನಿರಾಮಯವಾದ ಉನ್ಮನಿಗೊಂಡ ಆ ಮನಸ್ಸು ಉನ್ಮನಿ ಕ್ಷೇತ್ರವನ್ನು ಮೀರಿ ಬ್ರಹ್ಮರಂಧ್ರವನ್ನು ಪ್ರವೇಶಿಸಿ ಸಹಸ್ರಾರದಲ್ಲಿ ನಿಲ್ಲುತ್ತದೆ. ಅದುವೆ ನಿಃಕಲಲಿಂಗದ ಸ್ಥಲ, ನಿಶ್ಯಬ್ದ ಓಂಕಾರ ಪ್ರಣವ ಬ್ರಹ್ಮ, ಅಲ್ಲಿ ಮನಸ್ಸು, ಅಮನಸ್ಸು. ಆ ಮನೋಗತ ಜೀವನು ಅಲ್ಲಿರುವ ಲಿಂಗಪ್ರಭೆಯಲ್ಲಿ ನಿಮಗ್ಯ, ನಿರ್ವಿಷಯ ಸೌಖ್ಯವಾದ ಲಿಂಗಾನಂದದ ಅನುಭವ. ಅದು ಅಮೃತಸ್ಥಿತಿ.
ಇಲ್ಲಿ ಅವಿರಳಜ್ಞಾನಿ ಚೆನ್ನಬಸವಣ್ಣನವರು ಏಳು
(7) ಚಕ್ರಗಳ ವಿವರ ಕೊಟ್ಟರೂ, ಸಾಧನೆ ಮೇಲೆರಿದಂತೆ ಶರಣರು ಶಿವಯೋಗದಲ್ಲಿ ಮತ್ತೆ 3 ಚಕ್ರಗಳನ್ನು ಅನುಭಾವದಿಂದ ಕಂಡರು.
ಶಿಖಾಚಕ್ರ - ನಿಶೂನ್ಯಸ್ಥಲ ,
ಪಶ್ಚಿಮಚಕ್ರ- ನಿರಾಲಂಬ ಸ್ಥಲ,
ಅಣು ಚಕ್ರ- ಸಹಜ ಸ್ಥಲ, ಇವುಗಳ ವಿವರ ಬೇರೆ ಬೇರೆ ವಚನಗಳಲ್ಲಿ ಬರುತ್ತದೆ. ಇದೆ ರೀತಿ ಭೋಗಿಯಾಗಿಯೂ, ಸಂಸಾರಿಯಾಗಿಯೂ ಪ್ರತಿ ಚಕ್ರದಲ್ಲಿ ಇರುವ ಒಂದೊಂದು ಲಿಂಗಕ್ಕೆ ಮಾಡುವ ಪ್ರಸಾದಿ ಕರಣದಿಂದ ಯೋಗಿ ಯಾಗುವ ಪ್ರಕ್ರಿಯೆಯನ್ನು ಹಲವು ವಚನಗಳಲ್ಲಿ ತಿಳಿಸಿದ್ದಾರೆ.
-✍️ Dr Prema Pangi
#ಗುದಸ್ಥಾನದಲ್ಲಿ_ಆಧಾರಚಕ್ರ
Comments
Post a Comment