ಶೂನ್ಯ - 2

ಶೂನ್ಯ -  2
#ಶೂನ್ಯ2: 
ಸೃಷ್ಟಿ ರಚನೆ:
ನಿರವಯ ಶೂನ್ಯಲಿಂಗಮೂರ್ತಿ:
ಚಿನ್ಮಯ ಜ್ಞಾನಿ ಚನ್ನಬಸವಣ್ಣನವರಿಗೆ ಅವರ ಆಧ್ಮಾತ್ಯಗುರು ಅಲ್ಲಮ ಪ್ರಭುಗಳು ನಿರವಯ ಶೂನ್ಯಲಿಂಗಮೂರ್ತಿಯ ನಿಲುವಿನ ವಿವರಣೆ  ತಿಳಿಸಿದ 6 ಕ್ಕಿಂತ ಹೆಚ್ಚು ವಚನಗಳು ಇವೆ. ಶೂನ್ಯಲಿಂಗಮೂರ್ತಿ ಅಂದರೆ
"ಸಾಕಾರ-ನಿರಾಕಾರ, ಆದಿ-ಅನಾದಿ, ಇಹ-ಪರ, ಸುಖ-ದುಃಖ, ಪುಣ್ಯ-ಪಾಪ, ಕರ್ತೃ-ಭೃತ್ಯ, ಕಾರಣ-ಕಾರ್ಯ, ಧರ್ಮ-ಕರ್ಮಿ, ಪೂಜ್ಯ-ಪೂಜಕ ಈ ಎಲ್ಲ ಉಭಯಗಳಿಗೂ ಹೊರತಾದವನು. ಈ ಎಲ್ಲ ಉಭಯ ಅಳಿದವನು, ಅಂತಹ ನಿರವಯ ಶೂನ್ಯಲಿಂಗಮೂರ್ತಿಯು ಬಸವಣ್ಣನವರ ಶುದ್ಧ ಹೃದಯಕಮಲದಲ್ಲಿ ನೆಲಸಿದೆ ಅವರೇ ನಿರವಯ ಶೂನ್ಯಲಿಂಗಮೂರ್ತಿ ಎಂದು ಬಸವಣ್ಣನವರನ್ನು ಅನಾದಿ ಪ್ರಥಮ ಶರಣನಾಗಿ ಕಂಡು ಶಿಖಾ ಚಕ್ರದ ತ್ರಿದಳ ದಲ್ಲಿ ಬಸವಾಕ್ಷರ ಸ್ಥಾಪಿಸಿದರು.

#ಅಯ್ಯ ! ನಿರವಯಶೂನ್ಯಲಿಂಗಮೂರ್ತಿಯ ನಿಲುಕಡೆ ಎಂತೆಂದಡೆ,-
ಸಾಕಾರನಲ್ಲ ನಿರಾಕಾರನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಆದಿಯಲ್ಲ ಅನಾದಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಇಹದವನಲ್ಲ ಪರದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಸುಖದವನಲ್ಲ ದುಃಖದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪುಣ್ಯದವನಲ್ಲ ಪಾಪದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕರ್ತುವಲ್ಲ ಭೃತ್ಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕಾರಣನಲ್ಲ ಕಾರ್ಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಧರ್ಮಿಯಲ್ಲ ಕರ್ಮಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪೂಜ್ಯನಲ್ಲ ಪೂಜಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಇಂತು ಉಭಯವಳಿದು ಬೆಳಗುವ ಸಂಗನಬಸವಣ್ಣನ
ಹೃತ್ಕಮಲಮಧ್ಯದಲ್ಲಿ ನೆಲಸಿರ್ಪುದು ನೋಡ ! ಗುಹೇಶ್ವರಲಿಂಗವು ಚೆನ್ನಬಸವಣ್ಣ.
- ಅಲ್ಲಮ ಪ್ರಭುಗಳು
ನಿರಯವ ಅಂದರೆ ಅವಯವರಹಿತವಾದದ್ದು, ನಿರಾಕಾರವಾದದ್ದು. ಇಂತಹ  ನಿರಾಕಾರ ಸ್ವರೂಪನಾದ ಪರವಸ್ತು ಸೃಷ್ಟಿಮುಖವಾಗಿ, ಈ ಜಗತ್ತಿನ ನಿರ್ಮಾಣದಲ್ಲಿ ತೊಡಗುತ್ತದೆ. ಆಗ ಬಹುಮುಖವಾದ ಈ ಸೃಷ್ಟಿ ಹಲವಾರು ಹಂತಗಳಲ್ಲಿ ರೂಪುಗೊಳ್ಳುತ್ತದೆ. ಅದಕ್ಕೆ  ಮೊಟ್ಟಮೊದಲನೆಯದೇ ಹಂತವೇ ಶೂನ್ಯಲಿಂಗ.
 ಈ ರೀತಿಯ ನಿರವಯ ಶೂನ್ಯಲಿಂಗವು  ನಿಕಃಲ ಲಿಂಗವಾಗಿ, ಅದರಲ್ಲಿ  ಸೃಷ್ಟಿಯ ಮೂಲದಲ್ಲಿದ್ದ ಅಭಿವ್ಯಕ್ತಿ ಸೃಷ್ಟಿ ಶಕ್ತಿ  ಸಂಚಯವಾಗುತ್ತದೆ. ಅದುವೇ "ಚಿಚ್ಛಕ್ತಿ." ಪರಮಾತ್ಮನಲ್ಲಿರುವ ಈ ಮೂಲ ಚಿಚ್ಛಕ್ತಿಯಲ್ಲಿ ಮೂರು ಸೂಕ್ಷ್ಮ ಮುಖಗಳು. ಅವೇ ಜ್ಞಾನಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿ, ಸೃಷ್ಟಿಯ ರಚನೆಗೆ ಇವೆಲ್ಲವೂ ಅತ್ಯವಶ್ಯಕವೇ. ಯಾವುದೊಂದು ಕೆಲಸವನ್ನು ನಾವು ಮಾಡಬೇಕಾದರೂ ಜ್ಞಾನ, ಇಚ್ಛಾ, ಕ್ರಿಯಾಶಕ್ತಿಗಳು ಬೇಕೇ ಬೇಕಾದಂತೆ ; ಸೃಷ್ಟಿ ರಚನೆಗೂ ಬೇಕು. ಈ ಮೂರರ ಸಮುಚ್ಛಯವೇ ಚಿಚ್ಛಕ್ತಿ ಅಥವಾ ಚಿತ್ ಶಕ್ತಿ,
ನಾದ ಬಿಂದು ಕಳೆ:
ನಾದ ವೆಂದರೆ ಪ್ರಣವ' ಓಂ' ಕಾರ (the first sound, sound energy,) , 
ಬಿಂದು A single, minute point, in a  burst created all the matter in the Universe around 13.8 billion years ago (Big bang theory)
ಕಳೆ.
ಪಂಚ ಭೂತಗಳು :
ಆಕಾಶ, ವಾಯು, ಅಗ್ನಿ , ಅಪ್(ಜಲ), ಪ್ರಥ್ವಿ  ಹೀಗೆ ವಿಶ್ವದ ಹುಟ್ಟಿಗೆ ಕಾರಣವಾಗುತ್ತದೆ. 
These five Classical elements  earth, water, air, fire and aether  explain the nature and complexity of all matter as per  modern astrophysics. 
ಸಕಲ ಜೀವರಾಶಿ ಈ ಜಗತ್ತು(all life forms and universe) 
ಪರಶಿವ:
ಒಂದು ಇಲ್ಲದ ಪರಮ ಮೂಲವಸ್ತು ಪರಶಿವ ನೆಂಬ ಪರತತ್ವ  ಅದು ಕಾಲ, ದೇಶ, ವಸ್ತು, ಅವಸ್ಥೆ ಮತ್ತು ಸಂಬಂಧಗಳಿಗೆ ಮೀರಿದ ತತ್ವ, ಎಲ್ಲದಕ್ಕೂ ಅತೀತವಾದದ್ದು (ಪರ ಶಿವ - beyond Shiva). ಇಲ್ಲಿ ಗಮನಿಸುವಂಥದ್ದು ಏನೆಂದರೆ ಏನೂ ಏನೂ ಅಲ್ಲದವನು ಎನ್ನುವುದು ಅದು ಇದು ಏನೂ ಇಲ್ಲದಂತಾಗಿರುವುದು ಇದೇ ಶೂನ್ಯ ಅವಸ್ಥೆ.
ನಿರವಯ ಶೂನ್ಯಲಿಂಗಮೂರ್ತಿ:
ಒಂದು ಇಲ್ಲದ ಪರಮ ಮೂಲವಸ್ತು ಪರತತ್ವ (ಪರಶಿವ) ಅದು ಕಾಲ, ದೇಶ, ವಸ್ತು, ಅವಸ್ಥೆ ಮತ್ತು ಸಂಬಂಧಗಳಿಗೆ ಅತೀತವಾದದ್ದು ಮತ್ತು ಅವನ್ನು ಮೀರಿದ ತತ್ವ, ಎಂದರೆ ಸಾಕಾರ-ನಿರಾಕಾರ ನಲ್ಲ, ಆದಿ-ಅನಾದಿಯಲ್ಲ, ಇಹ -ಪರದೇವನಲ್ಲ, ಸುಖ-ದುಃಖದವನಲ್ಲ,ಪುಣ್ಯ-ಪಾಪದವನಲ್ಲ, ಪೂಜ್ಯ- ಪೂಜಕರಲ್ಲ, ಕರ್ತೃ ಭತ್ಮನಲ್ಲ, ಕಾರಣ - ಕಾರ್ಯ ಅಲ್ಲದ, ಧರ್ಮಿ ಕರ್ಮಿಯಲ್ಲ ಇವೆಲ್ಲವುಗಳಿಗೆ ಅತೀತನಾಗಿರುವವನು ಪರಶಿವ. 
ಹೀಗೆ ಎಲ್ಲ ದ್ವಂದ್ಯತೆಯನ್ನು ಮೀರಿ ನಿಂತಿದ್ದರಿಂದ  'ಶೂನ್ಯ'  ಎಂಬ ಪರಿಕಲ್ಪನೆ ಮಾಡಿದೆ. ಇಲ್ಲಿ ಗಮನಿಸುವಂಥದ್ದು ಏನೆಂದರೆ ' ಬಸವಣ್ಣನ ಹೃತ್ಕಮಲದಲ್ಲಿ ನಿರವಯ ಶೂನ್ಯ ಪರವಸ್ತು  ನೆಲೆಸಿದೆ' ಎನ್ನುವುದು. ಅದು ಇದು ಏನೂ ಇಲ್ಲದಂತಾಗಿರುವುದು ಇದೇ ಶೂನ್ಯ ಅವಸ್ಥೆ.
ಇಂತಹ  ನಿರಾಕಾರಸ್ವರೂಪನಾದ ಅನಾದಿ ಪರವಸ್ತು ಸೃಷ್ಟಿಮುಖವಾಗಿ, ಈ ಜಗತ್ತಿನ ನಿರ್ಮಾಣದಲ್ಲಿ ತೊಡಗುತ್ತದೆ.

*ಪರಶಿವನ ಶೂನ್ಯ ಅವಸ್ಥೆಯೇ ಸ್ವಯಂಭು.* ಶೂನ್ಯದಿಂದ ಉತ್ಪತ್ತಿಯಾದುದನ್ನು ವಿವರಿಸುವ ಅಲ್ಲಮ ಪ್ರಭುಗಳ ವಚನ.

#ವಾರಿ ಬಲಿದು ವಾರಿಕಲ್ಲಾದಂತೆ ಶೂನ್ಯವೆ ಸ್ವಯಂಭುವಾಯಿತ್ತು.
ಆ ಸ್ವಯಂಭುಲಿಂಗದಿಂದಾಯಿತ್ತು ಮೂರ್ತಿವತ್ತು,
ಆ ಮೂರ್ತಿಯಿಂದಾಯಿತ್ತು ವಿಶ್ವೋತ್ಪತ್ತಿ,
ಆ ವಿಶ್ವೋತ್ಪತ್ತಿಯಿಂದಾಯಿತ್ತು ಸಂಸಾರ,
ಆ ಸಂಸಾರದಿಂದಾಯಿತ್ತು ಮರವೆ.
ಆ ಮರವೆಯೆಂಬ ಮಹಾಮಾಯೆ ವಿಶ್ವವ ಮುಸುಕಿದಲ್ಲಿ,
ನಾ ಬಲ್ಲೆ, ಬಲ್ಲಿದರೆಂಬ ಅರುಹಿರಿಯರೆಲ್ಲಾ
ತಾಮಸಕ್ಕೊಳಗಾಗಿ ಮೀನಕೇತನನ ಬಲೆಗೆ ಸಿಲುಕಿ ಮಾಯೆಯ ಬಾಯ ತುತ್ತಾದರಲ್ಲಾ ! ಗುಹೇಶ್ವರಾ. / 1422
ಸೃಷ್ಟಿಯ ಮೂಲ ಶೂನ್ಯ  ಎಂಬುದನ್ನು ತಿಳಿಸುವ ಈ ವಚನ, ಅದನ್ನು ಹೀಗೆ ವಿವರಿಸುತ್ತದೆ. ಶೂನ್ಯಲಿಂಗ ವಿಶ್ವ ಹುಟ್ಟುವ ಮೊದಲಿನ ಸ್ಥಿತಿ, ಆದ್ದರಿಂದ ಯಾವುದೂ ಅಸ್ತಿತ್ವದಲ್ಲಿ ಇಲ್ಲದ ಸ್ಥಿತಿ. ಶೂನ್ಯವೇ ಸ್ವಯಂಭುವಾಯಿತು. ಸ್ವಯಂಭು ವಿನಿಂದ ಮೂರ್ತಿಯಾಗಿದೆ. ಮೂರ್ತಿಯಿಂದ 
ವಿಶ್ವೋತ್ಪತ್ತಿಯಾಗಿತ್ತು. ವಿಶ್ವೋತ್ಪತ್ತಿ ದಿಂದ ಈ ಸಂಸಾರ, ಈ ಸಂಸಾರದಿಂದ ಮರವೆ ಹುಟ್ಟಿತು. ಆ ಮನವೆಂಬ ಮಾಯೆ ವಿಶ್ವವನ್ನೆಲ್ಲ ವ್ಯಾಪಿಸಿದಲ್ಲಿ, ನಾ ಬಲ್ಲೆನೆಂಬ ಅಹಂಭಾವದಿಂದ ಮರೆವೆಯಿಂದ ಮೀನಕೇತನ ಬಲೆಗೆ ಸಿಕ್ಕಂತ ಮಾಯೆಯ ಬಾಯಿಗೆ ತುತ್ತಾದರು. ವಿಶ್ವೋತ್ಪತ್ತಿಯ ಮೂಲ, ಶೂನ್ಯತತ್ವ ಆಗಿದ್ದು ಅದು ಅತೀತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. *ವಿಶ್ವ ರಚನೆ, ಸ್ಥಿತಿ, ವಿಸ್ತಾರ*
ಅಲ್ಲಮ ಪ್ರಭುಗಳು ವಿಶ್ವ ರಚನೆ, ಸ್ಥಿತಿ, ವಿಸ್ತಾರ ತಿಳಿಸಿ ಮತ್ತು ಅದನ್ನು ತಾವು ಕಂಡಿದ್ದು ವಿವರಿಸಿ, ಕಾಣಿಸಿದ ಈಶ್ವರನಿಗೆ ಧನ್ಯತೆಯಿಂದ ಶರಣಾಗಿದ್ದಾರೆ.

#ಅಯ್ಯಾ ನೀನು ನಿರಾಳ ನಿರ್ಮಾಯನಾಗಿಪ್ಪೆಯಾಗಿ;
ಆಕಾಶ ಪ್ರಕಾಶವಿಲ್ಲದಂದು, 
ಸಾಕ್ಷಿ ಸಭೆಗಳಿಲ್ಲದಂದು,
ಸಚರಾಚರವೆಲ್ಲ ರಚನೆಗೆ ಬಾರದಂದು ;
ಆಧಾರದೊಳಗಣ ವಿಭೂತಿಯನೆ ತೆಗೆದು, ಭೂಮಿಯ ನೆಲೆಗೊಳಿಸಿ ,
ಪಂಚಾಶತ್ಕೋಟಿ ವಿಸ್ತೀರ್ಣ ಭೂಮಂಡಲಕ್ಕೆ
ಸುತ್ತಿ ಹರಿದವು ಸಪ್ತಸಾಗರಂಗಳು.
ಎಂಬತ್ತಾರು ಕೋಟಿಯ ತೊಂಬತ್ತೇಳುಲಕ್ಷ ಕಾಲ ಭವನ ಮಂಡಲಕ್ಕೆ 
ಉದಯ ಬ್ರಹ್ಮಾಂಡ.
ಅರುವತ್ತಾರು ಕೋಟಿ ತಾರಾಮಂಡಲವೆಂದೆಡೆ,
ಬೆಳಗಿ ತೋರಿದ ಹನ್ನೆರಡು ಜ್ಯೋತಿಯ
ನಿಲಿಸಿ ತೋರಿದ ಹದಿನಾಲ್ಕು ಭುವನವ-
ಈ ಜಗದ ಜಂಗುಳಿಯ ಕಾವ ಗೋವಳ ತಾನಾಗಿ,
ಚೌರಾಸಿಲಕ್ಷ ಜೀವರಾಶಿಗಳಿಗೆ ರಾಶಿವಾಳ ತಾನಾಗಿ,
ಸಕಲದ ಅಳಿವಿನ ಉಳಿವಿನ ನಿಜದ ನಿಲವ ನೋಡಿ ಕಂಡೆನು.
ಗುಹೇಶ್ವರಾ, ನಿಮ್ಮ ಶ್ರೀಪಾದಕೆ ನಮೋ ನಮೋ ಎನುತಿರ್ದೆನು. / 182
- to be continued
- ✍️Dr Prema Pangi
#Dr_Prema_Pangi,
#ಅಯ್ಯ_ ನಿರವಯಶೂನ್ಯಲಿಂಗಮೂರ್ತಿಯ
#ವಾರಿ_ಬಲಿದು_ವಾರಿಕಲ್ಲಾದಂತೆ_ಶೂನ್ಯವೆ #ಅಯ್ಯಾ_ನೀನು_ನಿರಾಳ_ನಿರ್ಮಾಯನಾಗಿಪ್ಪೆ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma