ಬಯಲು 3
ಬಯಲು 3
ಶರಣೆ ಬೊಂತಾದೇವಿ (ಕಾಲ-c 1160) ಕಾಶ್ಮೀರದ ಮಾಂಡವ್ಯದ ರಾಜಕುಮಾರಿ, ಶರಣೆ, ವೈರಾಗ್ಯಣಿ ಇವರು ಶ್ರೇಷ್ಠ ಶರಣ ಕಾಯಕ ಕಲಿ ಎಂದೇ ಹೆಸರುವಾಸಿಯಾದ ಮೊಳಿಗೆ ಮಾರಯ್ಯ(ಕಾಶ್ಮೀರ ಮಾಂಡವ್ಯ ಅರಸ) ನ ಸಹೋದರಿ. ಅವಳ ಅಂಕಿತ ನಾಮ: ಬಿಡಾಡಿ
ಪರಮಾತ್ಮನು ಯಾವ ನಿರ್ಬಂಧಕ್ಕೊಳಗಾಗದ, ಕಟ್ಟುಪಾಡುಗಳಿಗೆ ಒಳಗಾಗದವ , “ಸರ್ವತಂತ್ರ ಸ್ವತಂತ್ರ’’ ಎಂಬರ್ಥದಲ್ಲಿ ಆತನನ್ನು ಪ್ರೀತಿಯಿಂದ "ಬಿಡಾಡಿ" ಎಂದು ಕರೆದಿದ್ದಾಳೆ. ಯಾವುದೇ ಬಂಧನವಿಲ್ಲದ ಬಯಲು. ಅವಳ ತನ್ನ ವಚನದಲ್ಲಿ ಬಯಲನ್ನು ಹೀಗೆ ಕಂಡಿದ್ದಾಳೆ.
#ಘಟದೊಳಗಣ ಬಯಲು, ಮಠದೊಳಗಣ ಬಯಲು,
ಬಯಲು ಬಯಲು ಬಯಲು ?
ತಾನೆಲ್ಲಾ ಬಯಲು, ಬಿಡಾಡಿ ಬಯಲು.
ಶರಣೆ ಬೊಂತಾದೇವಿ ಶಬ್ಧಗಳಲ್ಲಿ ಅಪಾರವಾದ ಅಧ್ಯಾತ್ಮಿಕ ಅರ್ಥವನ್ನು ತುಂಬಿ ತನ್ನ ವಚನರಚನಾ ಸಾಮರ್ಥ್ಯವನ್ನು ತೋರಿದ್ದಾರೆ.
#ಊರ ಒಳಗಣ ಬಯಲು,
ಊರ ಹೊರಗಣ ಬಯಲೆಂದುಂಟೆ?
ಊರೊಳಗೆ ಬ್ರಾಹ್ಮಣಬಯಲು
ಊರ ಹೊರಗೆ ಹೊಲೆಬಯಲೆಂದುಂಟೆ?
ಎಲ್ಲಿ ನೋಡಿದಡೆ ಬಯಲೊಂದೆ.
ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ.
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತ ಬಿಡಾಡಿ ಎಂಬ ಅವಳ ವಚನ
ಆಗಿನ ಕಾಲದಲ್ಲಿದ್ದ ಮೇಲ್ವರ್ಗದ ಮತ್ತು ಕೆಳವರ್ಗಗಳ ನಡುವಿನ ಅಸಮಾನತೆಯ ಎರಡು ವಿಭಿನ್ನ ನೆಲೆಗಳ ನ್ನು ಸೂಚಿಸುತ್ತದೆ.
ಬಯಲು ದೇವರ ಸ್ವರೂಪವೂ ಹೌದು, ಅನಾದಿ ವಿಶ್ವದ ಸ್ವರೂಪವೂ ಹೌದು ಹಾಗೂ ಭೌತಿಕ ಸ್ವರೂಪದ ನೆಲವೂ ಹೌದು. ಭೌತಿಕ ಸ್ವರೂಪದ ‘ಬಯಲು’ ಎಂಬುದು ಎಲ್ಲೆಲ್ಲಿಯೂ ಒಂದೇ ಆಗಿದ್ದು , ‘ಒಳಗಣ ಬಯಲು’ ಮತ್ತು ‘ಹೊರಗಣ ಬಯಲು’ ಎಂದು ಎರಡಾಗಿರಲು ಸಾಧ್ಯವಿಲ್ಲ . 'ಬಯಲು' ಕಾಣಲಿಕ್ಕೆ ಹೊರಗೆ ಭಿತ್ತಿಯಿಂದ ಹಾಗೆ ತೋರಿದರೂ ಅದು ಸರ್ವತ್ರವೂ ಸಮಗ್ರವಾಗಿದೆ. ಮೇಲ್ವರ್ಗದ ಬಯಲು ಕೆಳವರ್ಗದ ಬಯಲು ಇಲ್ಲ.
ಊರ ‘ಒಳಗಣ ಬಯಲು’ ಮತ್ತು ಊರ ‘ಹೊರಗಣ ಬಯಲು’ ಎಲ್ಲಿ ನಿಂತು ಕರೆದರೂ ಓ ಎಂಬಾತ ಮಾತ್ರ 'ಶಿವನೇ ' ಆಗಿರುತ್ತಾನೆ ಎನ್ನುವ ಮೂಲಕ ಶಿವನ ಸರ್ವಸಮಾನತೆಯ ಏಕತ್ರ ಗುಣ,ಸಾರ್ವತ್ರಿಕ ಸ್ವರೂಪದ ಬಗ್ಗೆ ಅತ್ಯಂತ ಸತ್ವಪೂರ್ಣವಾಗಿ ವಚನಗಳಲ್ಲಿ ತಿಳಿಸಿದ್ದಾರೆ. ಶಿವನಲ್ಲಿ ಜಾತಿ ಭೇದವಿಲ್ಲ. ಕುಲ ಒಂದೇ, ಸ್ವಾರ್ಥಿಯಾದ ಮಾನವನಿಗೆ ಬಯಲಿನಲ್ಲಿ ಒಳಹೊರಗೆಂಬ ಅಂತರ ಉಂಟಾಗುವಂತೆ, ಮಾನವ ತನ್ನ ಕಲ್ಪನೆಯ ಭಿತ್ತಿಯಿಂದ ಮೇಲು ಕೀಳೆಂಬ ಜಾತಿಯ ಕೃತ್ರಿಮತೆಯನ್ನುಂಟು ಮಾಡಿಕೊಂಡಿದ್ದಾನೆ. ಅನಂತವಾದ ಬಯಲೊಂದೇ ಇರುವಂತೆ, ಸರ್ವವ್ಯಾಪಿ ಭಗವಂತನೊಬ್ಬನೇ. ಶರಣರು ಆದಿಯಿಲ್ಲದ ಅನಾದಿ ಯಿಲ್ಲದ ಅಂತ್ಯವಿಲ್ಲದ ಬಯಲು ಎಂಬ ಭಾವನೆಯನ್ನು ವಚನಗಳ ಮೂಲಕ ದೇವರ ಸ್ವರೂಪ ತಿಳಿಸಿದ್ದಾರೆ. ಅದ್ವೈತ ದಂತೆ ವಿಶ್ವವೇ ದೇವರಲ್ಲ. ವಿಶ್ವಕ್ಕೆ ಹುಟ್ಟೂ ಇದೆ ; ಸಾವೂ ಇದೆ. ಆದರೆ ನಿರಾವಲಂಬ ಬಯಲಿಗೆ ಹುಟ್ಟು ಸಾವು ಎರಡೂ ಇಲ್ಲ. ಬಯಲು ಹುಟ್ಟು ಸಾವಿಗೆ ಅತೀತ.
#ಅರಿವೆ ಬಿಡಾಡಿ, ಅರಿಯದೆ ಬಿಡಾಡಿ, ಮರವೆ ಬಿಡಾಡಿ, ಮರೆಯದೆ ಬಿಡಾಡಿ,
ಅರಿವರತು ಕುರುಹಿಲ್ಲದಾತ ನೀನೆ ಬಿಡಾಡಿ.
ಅರಿವೇ ದೇವರು.
ಅರಿವರಿತು ಕುರುಹಿಲ್ಲದಾತ ನೀನೇ ದೇವರು.
ಅರಿವನ್ನು ಅರಿತವರಿಗೆ ಕುರುಹಿಲ್ಲ. ಅರಿವಿನಿಂದ ಪ್ರಾಣಲಿಂಗ ಭಾವಲಿಂಗ ಅರಿತು ಲಿಂಗಾಂಗ ಸಾಮರಸ್ಯ ಹೊಂದಿದವರಿಗೆ ಕುರುಹು ಇಷ್ಟಲಿಂಗದ ಅವಶ್ಯಕತೆ ಯಿಲ್ಲ. ಆ ಕುರುಹಿಲ್ಲದಾತನೇ ನೀನೇ ನಿರಾಕಾರ ದೇವ (ಬಯಲು) ಎಂದು ಅರ್ಥಗರ್ಭಿತವಾಗಿ ಹೇಳಿದ್ದಾಳೆ ಶರಣೆ ಬೊಂತಾದೇವಿ. ಯಾವುದೇ ಬಂಧನಕ್ಕೆ ಸಿಲುಕದೆ ಇರುವದು ಬಯಲು.
ಬಯಲಿನಿಂದಲೇ ಶೂನ್ಯ. ಈ ಶೂನ್ಯದಿಂದಲೆ ವಿಶ್ವ. ಈ ಶೂನ್ಯ ಸಂಪಾದನೆಯೇ ಸಾಧಕನ ಪರಮ ಗುರಿ. ಬಯಲಿನಲ್ಲಿ, ಶಿವನಲ್ಲಿ ಒಂದಾಗಿ ಎಲ್ಲರೂ ಬಯಲಾಗುವದೇ ಜೀವನದ ಅಂತ್ಯ .
#ಅಂತಾಯಿತ್ತಿಂತಾಯಿತ್ತೆಂತಾಯಿತ್ತೆನಬೇಡ,
ಅನಂತನಿಂತಾತನೆಂದರಿಯಾ ಬಿಡಾಡಿ.
ಕರೆದಡೆ ಓ ಎಂಬುದು ನಾದವೊ ಬಿಂದುವೊ ಪ್ರಾಣವೊ
ಇದಾವುದು ? ಬಲ್ಲಡೆ ನೀ ಹೇಳಾ, ಬಿಡಾಡಿ.
ವಿಶ್ವ ಉತ್ಪತ್ತಿಯಲ್ಲಿ , ಮೊದಲು ಹುಟ್ಟುವುದು ಓಂ ಕಾರ ಪ್ರಣವ ನಾದ, ನಂತರ ಬಿಂದು, ನಂತರ ಕಳೆ ಸಕಲ ಜೀವರಾಶಿ . ಹಾಗಾದರೆ ಕರೆದಡೆ ಓ ಎಂಬುವ ಶಿವನ ಸ್ವರೂಪ ಇದರಲ್ಲಿ ಯಾವುದು? ಎಂದು ಶರಣೆ ಬೊಂತಾದೇವಿಯ ಪ್ರಶ್ನೆ. ಶಿವನದು ಅನಂತ ಸ್ವರೂಪ. ಮುಕ್ತ ಬಯಲು ಸ್ವರೂಪ.
God has not made separate space (ಬಯಲು) for different castes creeds, religions followers.The sadhaka who attain ' Bayalu sthiti ' becomes free of everthing - MUKTA.
To be continued...
-✍️ Dr Prema Pangi
#ಬಯಲು_part_3
Comments
Post a Comment