ವಚನ ದಾಸೋಹ : ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು


ವಚನ ದಾಸೋಹ : ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ವಚನ:
#ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ. / 1164
ಅರ್ಥ :
ಬಯಲು ಎಂಬ ಒಂದೇ ಶಬ್ಧ ಉಪಯೋಗಿಸಿ ಪರಶಿವನ  ಬಯಲೆಂಬ ಸಹಜ ಸ್ಥಿತಿ  ಮತ್ತು ಸೃಷ್ಠಿಯ ಹುಟ್ಟು ಅವಸಾನ ವನ್ನು ತಮ್ಮ ಅಮೋಘವಾದ ರೂಪಕ ಶೈಲಿಯಲ್ಲಿ  ರಚಿಸಿದ್ದಾರೆ.
 "ಬಯಲು" ಪರಮ ಸತ್ಯ ಪರಶಿವನ ಸಹಜ ಸ್ಥಿತಿ. ಜೀವನು ಬಯಲಿನಲ್ಲಿ ಹುಟ್ಟಿ, ಬಯಲಿನಲ್ಲಿ ಇದ್ದು, ಬಯಲಿನಲ್ಲಿಯೇ ಕೊನೆಗೊಳುತ್ತಾನೆ. ಮತ್ತು ಬಯಲಾಗಿಯೆ ಉಳಿಯುತ್ತಾನೆ.  ಪಿಂಡಾoಡ ಯುರೆಕ್ಯಂ  ದಂತೆ ಬ್ರಹ್ಮಾಂಡವು(Universe) ಸಹ ಮಹಾ ಬಯಲಿನಲ್ಲೆ ಹುಟ್ಟಿ  ಮಹಾಬಯಲಿನಲ್ಲಿಯೇ ಬೆಳೆದು ಮಹಾಬಯಲಿನಲ್ಲಿಯೇ ಕೊನೆಗೊಳ್ಳುತ್ತದೆ.

*ಬಯಲು ಬಯಲನೆ ಬಿತ್ತಿ 
  ಬಯಲು  ಬಯಲನೆ ಬೆಳೆದು 
  ಬಯಲು ಬಯಲಾಗಿ  
  ಬಯಲಾಯಿತ್ತಯ್ಯಾ*

ಮಹಾಬಯಲು ಬಯಲೆಂಬ ಬ್ರಹ್ಮಾಂಡವನ್ನು ಸೃಷ್ಟಿಸಿತು (ಬಿತ್ತಿತು). ಮಹಾಬಯಲು ಬಯಲೆಂಬ ಬ್ರಹ್ಮಾಂಡವನ್ನು ಬೆಳೆದಿತು (ಸೃಷ್ಠಿ ರಚನೆ ಆಯಿತು).  ಆ ಬಯಲೆಂಬ ಬ್ರಹ್ಮಾಂಡ ಮತ್ತೆ ಬಯಲಾಗಿ ಬಯಲಾಯಿತು ಅಂದರೆ ಲಯವಾಗಿ ಮತ್ತೆ ತನ್ನ ಮೂಲಸ್ಥಿತಿ ಹೊಂದಿತು (ಬಯಲಾಯಿತು).

*ಬಯಲ ಜೀವನ, ಬಯಲ
  ಭಾವನೆ ಬಯಲು ಬಯಲಾಗಿ
  ಬಯಲಾಯಿತ್ತಯ್ಯ* 

ಶರಣ ಧರ್ಮದ ಶಿವಯೋಗದಲ್ಲಿ "ಬಯಲು"  ಆನಂದಮಯವಾದ ಮುಕ್ತಾ ಮುಕ್ತ ಸ್ಥಿತಿ. 
ಶರಣ ಧರ್ಮದಲ್ಲಿ " ಬಯಲಾಗುವುದು" ಅಂದರೆ ಅಷ್ಟಮದಗಳನ್ನೆಲ್ಲಾ ನಿರಸನಗೊಳಿಸಿದ ನಂತರದ ವಿಕಾಸಗೊಂಡ ಆತ್ಮವು ವಿಶ್ವಾತ್ಮನೊಡನೆ ಸಮರಸಗೊಳ್ಳುವ ಪರಿಪೂರ್ಣ ಸ್ಥಿತಿ. ಶಿವಯೋಗಿಯು ಬಯಲಿನಂತೆ ನಿರ್ಮಲ ನಿಷ್ಕಳ ನಿರ್ಮಾಯ ಮುಕ್ತಜೀವನ ನಡೆಯಿಸಿ , ಭಾವನೆಗಳನ್ನು ಅಂದರೆ ಕರಣಗಳನ್ನು ಬಯಲು ಮಾಡಿದಾಗ ಅವನು ಬಯಲಿನಲ್ಲಿ ಆಂಗಲಿಂಗ ಸಮರಸದಿಂದ  ಬಯಲಾಗುತ್ತಾನೆ.

*ನಿಮ್ಮ ಪೂಜಿಸಿದವರು
  ಮುನ್ನವೆ  ಬಯಲಾದರು,
  ನಾ ನಿಮ್ಮ ನಂಬಿ ಬಯಲಾದೆ
  ಗುಹೇಶ್ವರಾ* 
 
ಬಯಲೇ ಮೂರ್ತಗೊಂಡು ಬಂದ ಆ ಪರಶಿವನನ್ನು ಮಾನವ ರೂಪದಿಂದ ಪೂಜಿಸುವುದಕ್ಕಿಂತ ಬಯಲಿನ ಸಂಕೇತದಿಂದಲೇ ಅನುಸಂಧಾನ ಮಾಡುವುದು ಶರಣರಿಗೆ ಹೆಚ್ಚು ಪ್ರಿಯವಾಗಿ ತೋರಿತು.  ಗುಹೇಶ್ವರಾ, ನಿಮ್ಮ ಬಯಲು ಸ್ಥಿತಿ ಅರಿತು ನಿಮ್ಮನ್ನ ಪೂಜಿಸಿದವರು ಸಾಯುವ ಮುನ್ನವೇ ಬಯಲಾದರು. ನಾನು ಸಹ ನಿಮ್ಮನ್ನು ಭಕ್ತಿ, ನಿಷ್ಠೆ, ಜ್ಞಾನ, ಕ್ರಿಯೆಯಿಂದ  ಅರಿತು ನಂಬಿ ಸಾಧನೆಯಿಂದ  ಬಯಲಾದೆನು ಎನ್ನುತ್ತಾರೆ ಅಲ್ಲಮ ಪ್ರಭುಗಳು.
*ವಚನ ಚಿಂತನೆ*:
ಬಯಲು " ಅಂದರೆ ಶೃಷ್ಟಿ ರಚನೆಯಲ್ಲಿ ಕಾರ್ಯರೂಪವಾದ ಜಗತ್ತು  ಹಾಗೂ ಕಾರಣರೂಪವಾದ ಮಹಾಲಿಂಗ  ಇವೆರಡಕ್ಕೂ ಮೊದಲಿನ ಸ್ಥಿತಿ. ಬಯಲು ವಿಶ್ವವೂ ಅಲ್ಲ ಮಹಾಲಿಂಗವೂ ಅಲ್ಲ. ಅದು ಏನೂ ಅಲ್ಲ ಮತ್ತು ಅದರಲ್ಲಿ  ಏನೂ ಇಲ್ಲದ್ದರಿಂದ, ಅದು ಬರಿಬಯಲು, ಬಟ್ಟಬಯಲು, ನಿರಾವಲಂಬ ಬಯಲು. 12ನೆಯ ಶತಮಾನದ ಬಸವಾದಿ ಶರಣರು ಸೃಷ್ಠಿಯ ಹುಟ್ಟು ಸ್ಥಿತಿ ಲಯಗಳ ಕುರಿತು ತಮ್ಮ ಶಿವಾಯೋಗದ ಅನುಭಾವಗಳಿಂದ  ವಿವೇಚಿಸಿ ವಚನ ರಚಿಸಿದ್ದಾರೆ. ಜಗತ್ತು  “ಏನೆಂದೆನಲಿಲ್ಲದ ಬಯಲು” ಸ್ವರೂಪವಾಗಿರುವುದನ್ನು ಶರಣರು ತಾತ್ವಿಕ ಮುಖದಲ್ಲಿ ಕಂಡು, ಅನುಭಾವದ ನಿಲುವಿನಲ್ಲಿ ಏರಿ ಮುಟ್ಟಿದ್ದಾರೆ. 
ಆತ್ಮವು ವಿಶ್ವಾತ್ಮನೊಡನೆ ಸಮರಸಗೊಳ್ಳುವ ಪರಿಪೂರ್ಣ ಬಯಲಾಗುವ ಸ್ಥಿತಿಯಲ್ಲಿ  ಎಲ್ಲವೂ ತಾನೇ ಆಗಿ ಪರಿಣಮಿಸುವ ನಿಲುವು ಕಾಣುತ್ತೇವೆ. 
ಈ ವಚನದಲ್ಲಿ ಪಿಂಡಾಂಡ ಮತ್ತು ಬ್ರಹ್ಮಾಂಡಗಳಲ್ಲಿ ಕಂಡು ಬರುವ  ಸಮಾನ ಅಂಶ ಗಳನ್ನು ಯೋಗಿಗಳು 
"ಪಿಂಡಬ್ರಹ್ಮಾಂಡಯೋರೈಕ್ಯಂ" ಎಂದು ಹೇಳುವರು. ಬ್ರಹ್ಮಾಂಡದಲ್ಲಿ ವ್ಯಕ್ತವಾಗಿರುವ ಘಟಕಗಳು ಪಿಂಡಾಂಡದಲ್ಲಿಯೂ ಇವೆ. ಅಂತರ್ಮುಖಿಗಳಾದ ಯೋಗಿಗಳು ಬ್ರಹ್ಮಾಂಡವನ್ನು ಅರಿತುಕೊಳ್ಳಲು ಹಂಬಲಿಸದೆ ಧ್ಯಾನಮಾರ್ಗದಿಂದ ಪಿಂಡದಲ್ಲಿ ಪ್ರವೇಶ ಮಾಡಿ ಅಲ್ಲಿ ಕಂಡ ಅದ್ಭುತ ಶಕ್ತಿ-ತತ್ವಗಳಿಂದ ಬ್ರಹ್ಮಾಂಡದ ನೆಲೆಯನ್ನು ಕಂಡುಕೊಂಡರು. 'ಯೋಗಸಾಧನೆಗೆ ಪಿಂಡವನ್ನು ಬಿಟ್ಟರೆ ಇನ್ನಾವ ಶ್ರೇಷ್ಠವಾದ ಉಪಕರಣವೂ ಇಲ್ಲ. 'ಶರೀರಮಾದ್ಯಂ ಖಲು ಧರ್ಮ ಸಾಧನಂ' ಎಂದು ಹೇಳುವ ಮಾತಿನಲ್ಲಿ ಪಿಂಡಾಂಡದ ಹಸುಗೆಯಿಂದ ಪರಬ್ರಹ್ಮನ ನಿಲುವನ್ನು ಕಾಣಬೇಕೆಂಬ ರಹಸ್ಯವಡಗಿದೆ. ಇದನ್ನೇ ಇಂಗ್ಲಿಷ್ ದಲ್ಲಿ
Macrocosm has subsumed into every living being as Microcosm
The macrocosm is the world as a whole, with a microcosm being one small part ie man.  Thus the universe may be regarded as a large living organism.(Virat purush)
Man is a microcosm or miniature copy of macrocosm universe.
Microcosm and macrocosm are two aspects of a theory developed by  ancient Hindu and Greek philosophers to describe human beings and their place in the universe. These early thinkers viewed the individual human being as a little world  whose composition and structure correspond to that of the universe.
There is a structural similarity between the human being and the cosmos as a whole. Given this fundamental analogy, truths about the nature of the cosmos as a whole may be inferred from truths about human nature, and vice versa. 

ಅಲ್ಲಮಪ್ರಭುವಿನ ವಚನ, 'ಬಯಲು' ಮಾತಿನ ತಾತ್ವಿಕ ಕಲ್ಪನೆ ವಿಶಾಲ ವ್ಯಾಪಕತೆಯನ್ನು ವ್ಯಕ್ತಪಡಿಸುತ್ತದೆ. ಮಹಾಬಯಲು  ಬಿತ್ತಿ ಬೆಳೆದದ್ದು ಈ ಬ್ರಹ್ಮಾಂಡವನ್ನು, ಇದು ಒಂದರ್ಥದಲ್ಲಿ ಬಯಲೇ. ಕೊನೆಯಲ್ಲಿ ಇದು ಬಯಲಿನಲ್ಲಿ ಬಯಲಾಗುತ್ತದೆ ; ಆ ಬಯಲು  ಬಯಲಾಗುತ್ತದೆ. ಎಂಬ ಮಾತು ದ್ವಂದ್ವಾತೀತವಾದ ಸರ್ವಶೂನ್ಯ ನಿರಾಲಂಬ ಸ್ಥಿತಿಯನ್ನು ಸೂಚಿಸುತ್ತದೆ.  ಬ್ರಹ್ಮಾಂಡ (Universe), ಈ ತೋರಿಕೆಯ ಸೃಷ್ಟಿಯ ಎಲ್ಲವೂ ಬಯಲು ಸಹಜಸ್ಥಿತಿಯ ಪೂರ್ಣ ಸ್ವರೂಪವಾದ  ಶೂನ್ಯಲಿಂಗದಿಂದ ಹೊರಹೊಮ್ಮಿದುದು ; ಮತ್ತು ಅಲ್ಲಿಯೇ ಅಡಗಿ ಮತ್ತೇ ಬಯಲಾಗುವಂತಹುದು
- ✍️ Dr Prema Pangi
#ಪ್ರೇಮಾ_ಪಾಂಗಿ,
#ಬಯಲು_ಬಯಲನೆ_ಬಿತ್ತಿ_ಬಯಲು

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma