ವಚನ ದಾಸೋಹ : ತಾರಕಾಕೃತಿ, ನಕಾರಪ್ರಣಮ, ಆಧಾರಚಕ್ರ

ವಚನ ದಾಸೋಹ : ತಾರಕಾಕೃತಿ, ನಕಾರಪ್ರಣಮ, ಆಧಾರಚಕ್ರ
ವಚನ :
#ತಾರಕಾಕೃತಿ, ನಕಾರಪ್ರಣಮ, ಆಧಾರಚಕ್ರ,
ಸದ್ಭಕ್ತನೆ ಅಂಗ, ಸುಚಿತ್ತವೆ ಹಸ್ತ, ಆಚಾರಲಿಂಗ,
ಘ್ರಾಣವೆಂಬ ಮುಖ, ಕ್ರಿಯಾಶಕ್ತಿ,
ಶ್ರದ್ಧಾಭಕ್ತಿ, ಸುಗಂಧಪದಾರ್ಥ,
ಗಂಧಪ್ರಸಾದ, ನಿವೃತ್ತಿಕಲೆ,
ಕರ್ಮಸಾದಾಖ್ಯ, ಸತ್ತುವೆಂಬ ಲಕ್ಷಣ,
ಪರವೆಂಬ ಸಂಜ್ಞೆ, ಋಗ್ವೇದ-
ಇಂತಿವೆಲ್ಲವು ಇಷ್ಟಲಿಂಗದ ವೃತ್ತದಲ್ಲಿ ಸಂಬಂಧವು.
ದಂಡಕಾಕೃತಿ, ಮಕಾರಪ್ರಣಮ, ಸಾಧಿಷ್ಠಾನಚಕ್ರ,
ಮಹೇಶ್ವರನೆ ಅಂಗ, ಸುಬುದ್ಧಿಯೆ ಹಸ್ತ,
ಗುರುಲಿಂಗ, ಜಿಹ್ವೆಯೆಂಬ ಮುಖ, ಜ್ಞಾನಶಕ್ತಿ,
ನೈಷ್ಠಿಕಭಕ್ತಿ , ಸುರಸಪದಾರ್ಥ, ರಸಪ್ರಸಾದ, ಪ್ರತಿಷ್ಠಾಕಲೆ,
ಕರ್ತೃಸಾದಾಖ್ಯ, ಚಿತ್ತುವೆಂಬ ಲಕ್ಷಣ,
ಗೂಢವೆಂಬ ಸಂಜ್ಞೆ, ಯುಜುರ್ವೆದ- 
ಇಂತಿವೆಲ್ಲವು ಇಷ್ಟಲಿಂಗದ ಕಟಿಯಲ್ಲಿ ಸಂಬಂಧವು.
ಕುಂಡಲಾಕೃತಿ, ಶಿಕಾರಪ್ರಣಮ, ಮಣಿಪೂರಕಚಕ್ರ, ಪ್ರಸಾದಿಯೆ ಅಂಗ,
ನಿರಹಂಕಾರವೆ ಹಸ್ತ , ಶಿವಲಿಂಗನೇತ್ರವೆಂಬ ಮುಖ, ಇಚ್ಛಾಶಕ್ತಿ ,
ಸಾವಧಾನಭಕ್ತಿ , ಸುರೂಪುಪದಾರ್ಥ, ರೂಪುಪ್ರಸಾದ, ವಿದ್ಯಾಕಲೆ,
ಮೂರ್ತಿಸಾದಾಖ್ಯ, ಆನಂದವೆಂಬ ಲಕ್ಷಣ,
ಶರೀರಸ್ಥವೆಂಬ ಸಂಜ್ಞೆ, ಸಾಮವೇದ-
ಇಂತಿವೆಲ್ಲ ಇಷ್ಟಲಿಂಗದ ಗೋಳಕದಲ್ಲಿ ಸಂಬಂಧವು.
ಅರ್ಧಚಂದ್ರಾಕೃತಿ, ವಕಾರಪ್ರಣಮ, ಅನಾಹತ ಚಕ್ರ,
ಪ್ರಾಣಲಿಂಗಿಯೆ ಅಂಗ, ಸುಮನವೆ ಹಸ್ತ , ಜಂಗಮಲಿಂಗ,
ತ್ವಗೀಂದ್ರಿಯವೆಂಬ ಮುಖ, ಆದಿಶಕ್ತಿ , ಅನುಭಾವಭಕ್ತಿ ,
ಸುಸ್ಪರ್ಶನಪದಾರ್ಥ, ಸ್ಪರ್ಶನಪ್ರಸಾದ, ಶಾಂತಿಕಲೆ,
ಅಮೂರ್ತಿಸಾದಾಖ್ಯ, ನಿತ್ಯವೆಂಬ ಲಕ್ಷಣ,
ಲಿಂಗಕ್ಷೇತ್ರಸಂಜ್ಞೆ, ಅಥರ್ವಣವೇದ-
ಇಂತಿವೆಲ್ಲ ಇಷ್ಟಲಿಂಗದ ಗೋಮುಖದಲ್ಲಿ ಸಂಬಂಧವು.
ದರ್ಪಣಾಕೃತಿ, ಯಕಾರಪ್ರಣಮ, ವಿಶುದ್ಧಿ ಚಕ್ರ, ಶರಣನೆ ಅಂಗ,
ಸುಜ್ಞಾನವೆ ಹಸ್ತ, ಪ್ರಸಾದಲಿಂಗ,
ಶ್ರೋತ್ರವೆಂಬ ಮುಖ, ಪರಾಶಕ್ತಿ , ಆನಂದ ಭಕ್ತಿ , ಸುಶಬ್ದಪದಾರ್ಥ,
ಶಬ್ದಪ್ರಸಾದ, ಶಾಂತ್ಯತೀತಕಲೆ,
ಶಿವಸಾದಾಖ್ಯ, ಪರಿಣಾಮವೆಂಬ ಲಕ್ಷಣ,
ಅನಾದಿವತ್ ಎಂಬ ಸಂಜ್ಞೆ, ಅಜಪೆವೇದ-
ಇಂತಿವೆಲ್ಲ ಇಷ್ಟಲಿಂಗದ ನಾಳದಲ್ಲಿ ಸಂಬಂಧವು.
ಒಂಕಾರಾಕೃತಿ, ಒಂಕಾರಪ್ರಣಮ,
ಆಜ್ಞೇಯಚಕ್ರ, ಐಕ್ಯನೆ ಅಂಗ,
ಸದ್ಭಾವಹಸ್ತ, ಮಹಾಲಿಂಗ,
ಹೃದಯವೆಂಬ ಮುಖ, ಚಿಚ್ಛಕ್ತಿ ,
ಸಮರಸಭಕ್ತಿ , ಸುತೃಪ್ತಿಪದಾರ್ಥ,
ತೃಪ್ತಿಪ್ರಸಾದ, ಶಾಂತ್ಯತೀತೋತ್ತರಕಲೆ,
ಮಹಾಸಾದಾಖ್ಯ, ಅಖಂಡವೆಂಬ ಲಕ್ಷಣ, ಮಹಾಸಂಜ್ಞೆ,
ಗಾಯತ್ರಿಯೆಂಬ ವೇದ-
ಇಂತಿವೆಲ್ಲ ಇಷ್ಟಲಿಂಗದ ಮಸ್ತಕದಲ್ಲಿ ಸಂಬಂಧವು.
ಇಂತೀ ತೊಂಬತ್ತಾರು ಸಕೀಲಗಳನೊಳಕೊಂಡ
ಮಹಾಘನ ಪರಾತ್ಪರವಾದ ಇಷ್ಟಲಿಂಗವನೆ
ಕರ ಮನ ಭಾವದೊಳಗೆ ಕುಳ್ಳಿರಿಸಿ ಅರ್ಚಿಸಿ,
ಧ್ಯಾನಿಸಿ ಕೂಡಿ ಎರಡಳಿದ ಮಹಾಘನ ಶರಣರ ಶ್ರೀಪಾದಕ್ಕೆ
ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ. / 349
- ಶ್ರೀ ಷಣ್ಮುಖ ಶಿವಯೋಗಿಗಳು
ಅರ್ಥ:
ಹನ್ನೆರಡನೆಯ ಶತಮಾನದ ಶರಣರ ಎಲ್ಲಾ ಲಕ್ಷಣಗಳನ್ನು ಅಳವಡಿಸಿಕೊಂಡು ಆ ಯುಗದ ವಚನ ಸಾಹಿತ್ಯದ ಸಮಗ್ರ ಸ್ವರೂಪವನ್ನು ಪ್ರತಿನಿಧಿಸುವ ವಚನಗಳನ್ನು ರಚಿಸಿದ, ಶ್ರೀ ಷಣ್ಮುಖ ಶಿವಯೋಗಿಗಳು ಬಸವೋತ್ತರ ಯುಗದ ಅತ್ಯಂತ ಮಹತ್ವದ ವಚನಕಾರರು.  ಶಿವಯೋಗದ ಚಕ್ರಗಳು, ಷಟ್ಸ್ಥಲಗಳು, ಪಂಚಾಕ್ಷರಿ, ಪ್ರಣವ ಮತ್ತು ಇಷ್ಟಲಿಂಗದ ಷಟ್-ಸ್ಥಾನಗಳ ಸಕೀಲಗಳ ವಿವರಣೆ ಇದೆ. ಸಕೀಲಗಳು ಅಂದರೆ ಇವುಗಳನ್ನು ಜೋಡಿಸುವ ಶ್ರೇಷ್ಟ ಚಿಲಕಗಳು. ಈ ವಚನದಲ್ಲಿ ಶಿವಯೋಗವನ್ನು  ಮತ್ತು ಅದರ ಸಕೀಲಗಳನ್ನು  ಪಂಚಸೂತ್ರಾತ್ಮಕ ಇಷ್ಟಲಿಂಗದ ವೃತ್ತ, ಕಟಿ, ವರ್ತುಳ, ಗೋಮುಖ, ನಾಳ, ಗೋಳಕ ಎಂಬ "ಷಟ್‍ಸ್ಥಾನ"ಗಳೊಡನೆ ಹಂತ ಹಂತವಾಗಿ ಸಮಿಕರಿಸಿದ್ದಾರೆ. ಇಷ್ಟಲಿಂಗದ ಷಟ್‍ಸ್ಥಾನಗಳು ಅಂಗದ ಷಟ್ ಚಕ್ರ ಗಳಂತೆ ಕೆಳಗಿನಿಂದ ಮೇಲಕ್ಕೆ ತಿಳಿಸಿ ಎರಡನ್ನೂ ಸಮಿಕರಿಸಿರುವುದು ವಿಶಿಷ್ಟ ವಾಗಿದೆ. ಇಷ್ಟಲಿಂಗದ ತೊಂಬತ್ತಾರು ಸಕೀಲಗಳನ್ನು ವಿವರಿಸಿದ್ದಾರೆ.
ಇಷ್ಟಲಿಂಗದ ವೃತ್ತದಲ್ಲಿ ಸಂಬಂಧ 
ಆಧಾರಚಕ್ರ,
ಸದ್ಭಕ್ತನೆ ಅಂಗ, (ಭಕ್ತಸ್ಥಲ)
ತಾರಕಾಕೃತಿ, 
ನಕಾರಪ್ರಣಮ, 
ಸುಚಿತ್ತವೆ ಹಸ್ತ, 
ಆಚಾರಲಿಂಗ,
ಘ್ರಾಣವೆಂಬ ಮುಖ, 
ಕ್ರಿಯಾಶಕ್ತಿ,
ಶ್ರದ್ಧಾಭಕ್ತಿ, 
ಸುಗಂಧಪದಾರ್ಥ,
ಗಂಧಪ್ರಸಾದ, 
ನಿವೃತ್ತಿಕಲೆ,
ಕರ್ಮಸಾದಾಖ್ಯ, 
ಸತ್ತುವೆಂಬ ಲಕ್ಷಣ,
ಪರವೆಂಬ ಸಂಜ್ಞೆ, 
ಋಗ್ವೇದ
ಇಷ್ಟಲಿಂಗದ ಕಟಿಯಲ್ಲಿ ಸಂಬಂಧ
ಸಾಧಿಷ್ಠಾನಚಕ್ರ
ಮಹೇಶ್ವರನೆ ಅಂಗ, (ಮಹೇಶ್ವರ ಸ್ಥಲ)
ದಂಡಕಾಕೃತಿ, 
ಮಕಾರಪ್ರಣಮ, 
ಸುಬುದ್ಧಿಯೆ ಹಸ್ತ,
ಗುರುಲಿಂಗ, 
ಜಿಹ್ವೆಯೆಂಬ ಮುಖ, 
ಜ್ಞಾನಶಕ್ತಿ,
ನೈಷ್ಠಿಕಭಕ್ತಿ , 
ಸುರಸಪದಾರ್ಥ, 
ರಸಪ್ರಸಾದ, 
ಪ್ರತಿಷ್ಠಾಕಲೆ,
ಕರ್ತೃಸಾದಾಖ್ಯ, 
ಚಿತ್ತುವೆಂಬ ಲಕ್ಷಣ,
ಗೂಢವೆಂಬ ಸಂಜ್ಞೆ, 
ಯುಜುರ್ವೆದ
ಇಷ್ಟಲಿಂಗದ ಗೋಳಕದಲ್ಲಿ ಸಂಬಂಧವು.
ಮಣಿಪೂರಕಚಕ್ರ
ಪ್ರಸಾದಿಯೆ ಅಂಗ,(ಪ್ರಸಾದಿ ಸ್ಥಲ)
ಕುಂಡಲಾಕೃತಿ, 
ಶಿಕಾರಪ್ರಣಮ, 
ನಿರಹಂಕಾರವೆ ಹಸ್ತ , 
ಶಿವಲಿಂಗ
ನೇತ್ರವೆಂಬ ಮುಖ, 
ಇಚ್ಛಾಶಕ್ತಿ ,
ಸಾವಧಾನಭಕ್ತಿ , 
ಸುರೂಪುಪದಾರ್ಥ, 
ರೂಪುಪ್ರಸಾದ, 
ವಿದ್ಯಾಕಲೆ,
ಮೂರ್ತಿಸಾದಾಖ್ಯ, 
ಆನಂದವೆಂಬ ಲಕ್ಷಣ,
ಶರೀರಸ್ಥವೆಂಬ ಸಂಜ್ಞೆ, 
ಸಾಮವೇದ
ಇಷ್ಟಲಿಂಗದ ಗೋಮುಖದಲ್ಲಿ ಸಂಬಂಧವು.
ಅನಾಹತ ಚಕ್ರ,
ಪ್ರಾಣಲಿಂಗಿಯೆ ಅಂಗ, (ಪ್ರಾಣಲಿಂಗಿ ಸ್ಥಲ)
ಅರ್ಧಚಂದ್ರಾಕೃತಿ, 
ವಕಾರಪ್ರಣಮ, 
ಸುಮನವೆ ಹಸ್ತ , 
ಜಂಗಮಲಿಂಗ,
ತ್ವಗೀಂದ್ರಿಯವೆಂಬ ಮುಖ, 
ಆದಿಶಕ್ತಿ , 
ಅನುಭಾವಭಕ್ತಿ ,
ಸುಸ್ಪರ್ಶನಪದಾರ್ಥ, 
ಸ್ಪರ್ಶನಪ್ರಸಾದ
ಶಾಂತಿಕಲೆ,
ಅಮೂರ್ತಿಸಾದಾಖ್ಯ, 
ನಿತ್ಯವೆಂಬ ಲಕ್ಷಣ,
ಲಿಂಗಕ್ಷೇತ್ರಸಂಜ್ಞೆ, 
ಅಥರ್ವಣವೇದ
ಇಷ್ಟಲಿಂಗದ ನಾಳದಲ್ಲಿ ಸಂಬಂಧವು
ದರ್ಪಣಾಕೃತಿ, 
ಯಕಾರಪ್ರಣಮ, 
ವಿಶುದ್ಧಿ ಚಕ್ರ, 
ಶರಣನೆ ಅಂಗ,
ಸುಜ್ಞಾನವೆ ಹಸ್ತ,
ಪ್ರಸಾದಲಿಂಗ,
ಶ್ರೋತ್ರವೆಂಬ ಮುಖ, 
ಪರಾಶಕ್ತಿ , 
ಆನಂದ ಭಕ್ತಿ , 
ಸುಶಬ್ದಪದಾರ್ಥ,
ಶಬ್ದಪ್ರಸಾದ, 
ಶಾಂತ್ಯತೀತಕಲೆ,
ಶಿವಸಾದಾಖ್ಯ, 
ಪರಿಣಾಮವೆಂಬ ಲಕ್ಷಣ,
ಅನಾದಿವತ್ ಎಂಬ ಸಂಜ್ಞೆ, 
ಅಜಪೆವೇದ
ಇಷ್ಟಲಿಂಗದ ಮಸ್ತಕದಲ್ಲಿ ಸಂಬಂಧವು
ಒಂಕಾರಾಕೃತಿ, 
ಒಂಕಾರಪ್ರಣಮ,
ಆಜ್ಞೇಯಚಕ್ರ, 
ಐಕ್ಯನೆ ಅಂಗ,
ಸದ್ಭಾವಹಸ್ತ, 
ಮಹಾಲಿಂಗ,
ಹೃದಯವೆಂಬ ಮುಖ, 
ಚಿಚ್ಛಕ್ತಿ ,
ಸಮರಸಭಕ್ತಿ , 
ಸುತೃಪ್ತಿಪದಾರ್ಥ,
ತೃಪ್ತಿಪ್ರಸಾದ, 
ಶಾಂತ್ಯತೀತೋತ್ತರಕಲೆ,
ಮಹಾಸಾದಾಖ್ಯ, 
ಅಖಂಡವೆಂಬ ಲಕ್ಷಣ, 
ಮಹಾಸಂಜ್ಞೆ,
ಗಾಯತ್ರಿಯೆಂಬ ವೇದ
ಆಕೃತಿಗಳು: 
ತಾರಕಾಕೃತಿ -  ನಕಾರ
ದಂಡಕಾಕೃತಿ - ಮಕಾರ
ಕುಂಡಲಾಕೃತಿ  - ಶಿಕಾರ
ಅರ್ಧಚಂದ್ರಾಕೃತಿ -  ವಕಾರ
ಬಿಂದುಕೃತಿ - ಯಕಾರ
ಮಹಾಘನ ಪರಾತ್ಪರವಾದ ಇಷ್ಟಲಿಂಗವನ್ನು
ಕರ ಮನ ಭಾವದೊಳಗೆ ಕುಳ್ಳಿರಿಸಿ ಅರ್ಚಿಸಿ,
ಧ್ಯಾನಿಸಿ ಸಮರಸವಾಗಿ ಕೂಡಿ, ಅಂಗ-ಲಿಂಗ, (ಭಕ್ತ- ಪರಮಾತ್ಮ) ಎಂಬ ಎರಡು ಎಂಬದನ್ನು 
ಅಳಿದ ಏಕಾತ್ಮವಾದ  ಮಹಾಘನ ಶರಣರ ಶ್ರೀಪಾದಕ್ಕೆ ನಮೋ ನಮೋ ಎನ್ನುತ್ತಾರೆ ಶರಣಗುರು ಷಣ್ಮುಖ ಶಿವಯೋಗಿಗಳು.
ವಚನ ಚಿಂತನೆ:
 ನಾದ ಬಿಂದು ಕಳೆ ಈ ಮೂರಕ್ಕೆ ಪರಾಶಕ್ತಿಯೇ ತಾಯಿ.
ಈ ನಾದ ಬಿಂದು ಕಳೆ ಮತ್ತು ಪರಾಶಕ್ತಿ ಈ ನಾಲ್ಕು ಒಂದಾದಲ್ಲಿ ಪ್ರಣವವಾಯಿತು..
ಆ ಪ್ರಣವವೇ ಪಂಚಲಕ್ಷಣವಾಯಿತು. 
ಆ ಪ್ರಣವವೇ ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ, ಅರ್ಧಚಂದ್ರಾಕೃತಿ, ಬಿಂದುಕೃತಿ ಆಗಿ ಪಂಚಾಕೃತಿಯಾಯಿತು.
ತಾರಕಾಕೃತಿಯಲ್ಲಿ ನಕಾರ ಜನನ;
ದಂಡಕಾಕೃತಿಯಲ್ಲಿ ಮಕಾರ ಜನನ.
ಕುಂಡಲಾಕೃತಿಯಲ್ಲಿ ಶಿಕಾರ ಜನನ.
ಅರ್ಧಚಂದ್ರಾಕೃತಿಯಲ್ಲಿ ವಕಾರ ಜನನ.
ಬಿಂದುಕೃತಿಯಲ್ಲಿ ಯಕಾರ ಜನನ.
ಹೀಗೆ ಪ್ರಣವದಿಂದ 
ಪಂಚಾಕ್ಷರಗಳು ಉತ್ಪತ್ತಿಯಾದವು.
ಪಂಚಾಕ್ಷರಗಳಲ್ಲಿ ಓಂ ಪ್ರಣವವೇ ಕೂಡಿ, ಷಡಕ್ಷರವೆಂದು ಆಯಿತು.
ಆಕೃತಿಗಳು: 
ತಾರಕಾಕೃತಿ -  ನಕಾರ
ದಂಡಕಾಕೃತಿ - ಮಕಾರ
ಕುಂಡಲಾಕೃತಿ  - ಶಿಕಾರ
ಅರ್ಧಚಂದ್ರಾಕೃತಿ -  ವಕಾರ
ಬಿಂದುಕೃತಿ - ಯಕಾರ
ಪ್ರಣವ - ಓಂ 
ಆರು ಪ್ರಣವಗಳೇ 
ಆಚಾರಲಿಂಗ 
ಗುರುಲಿಂಗ 
ಶಿವಲಿಂಗ 
ಜಂಗಮಲಿಂಗ 
ಪ್ರಸಾದಲಿಂಗ 
ಮಹಾಲಿಂಗ ಎಂಬ ಆರು ಲಿಂಗಗಳು, 
ಆಧಾರ ಚಕ್ರ,
ಸ್ವಾದಿಷ್ಠಾನ ಚಕ್ರ 
ಮಣಿಪೂರಕ ಚಕ್ರ,
 ಅನಾಹುತ ಚಕ್ರ 
ವಿಶುಧ್ಧಿ ಚಕ್ರ 
ಆಜ್ಞಾ ಚಕ್ರ ಎಂಬ ಆರು ಚಕ್ರಗಳು
ಗಳಲ್ಲಿ  ಕ್ರಮವಾಗಿ 
ಆಚಾರಲಿಂಗ ,ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ಎಂಬ ಆರು ಲಿಂಗಗಳನ್ನು ಪೂಜಿಸಬೇಕು.
ಆ ಆರು ಲಿಂಗಗಳಿಗೆ 
ಘ್ರಾಣ 
ಜಿಹ್ವೆ 
ನೇತ್ರ 
ತ್ವಕ್ಕು 
ಶ್ರೋತ್ರ 
ಹೃದಯ ಎಂಬ ಆರು ಇಂದ್ರಿಯಗಳನ್ನು ಆರು ಮುಖಗಳೆಂದು ತಿಳಿದು,
 ಆ ಆರು ಮುಖಗಳಿಗೆ 
ಗಂಧ 
ರುಚಿ 
ರೂಪು 
ಸ್ಪರ್ಶ
ಶಬ್ದ 
ತೃಪ್ತಿ ಎಂಬ ಆರು ತನ್ಮಾತ್ರೆಗಳನ್ನು
 ಶ್ರದ್ಧಾಭಕ್ತಿ,
ನೈಷ್ಠಿಕಾಭಕ್ತಿ,
ಅವಧಾನಭಕ್ತಿ
ಅನುಭಾವಭಕ್ತಿ,
ಆನಂದಭಕ್ತಿ,
ಸಮರಸಭಕ್ತಿ,
ಎಂಬ ಆರು ವಿಧದ ಭಕ್ತಿಗಳಿಂದರ್ಪಿಸಬೇಕು.
ಗಂಧಪದಾರ್ಥ, ರೂಪುಪದಾರ್ಥ, ಸ್ಪರ್ಶನಪದಾರ್ಥ, ಶಬ್ದಪದಾರ್ಥ, ತೃಪ್ತಿಪದಾರ್ಥ
ಎಂಬ ಆರು ಬಗೆಯ ಪದಾರ್ಥ ಸಮರ್ಪಿಸಬೇಕು. ಸಮರ್ಪಿಸುವದರಿಂದ ಅವು ಪ್ರಸಾದಗಳಾಗಿ ಶಿವಯೋಗಿ ಸೇವಿಸಲು ಯೋಗ್ಯವಾಗಿ  ಪರಿಣಮಿಸುತ್ತವೆ. ಸುಗಂಧ ಪ್ರಸಾದ, ಸುರೂಪುಪ್ರಸಾದ, ಸುಸ್ಪರ್ಶನ ಪ್ರಸಾದ, ಸುಶಬ್ದಪ್ರಸಾದ, ಸುತೃಪ್ತಿ ಪ್ರಸಾದ ಎಂಬ
 ಆರು ಬಗೆಯ ಪ್ರಸಾದ ಸ್ವೀಕರಿಸುತ್ತಾನೆ ಶಿವಯೋಗಿ.

ಶಿವಯೋಗ ಸಾಧಕನು ಬಾಹ್ಯಪದಾರ್ಥಗಳನ್ನು  ಕರಸ್ಥಲಲಿಂಗಕ್ಕೆ ಅರ್ಪಿಸಿ ಅನುಭವಿಸುತ್ತಾನೆ. ಆ ಬಾಹ್ಯಪದಾರ್ಥಗಳ ಇಂದ್ರಿಯ ಅನುಭವಗಳನ್ನೆಲ್ಲ  ಪ್ರಾಣಲಿಂಗಕ್ಕೆ ಸಮರ್ಪಿಸಿ ಸ್ವೀಕರಿಸಿ ಸಂತೋಷಿಸುತ್ತಾನೆ.  ಅಂತಃಕರಣಚತುಷ್ಟಯಗಳನ್ನು ಭಾವಲಿಂಗಕ್ಕೆ ಸಮರ್ಪಿಸಿ ಸ್ವೀಕರಿಸಿ ಸಂತೋಷಿಸುತ್ತಾನೆ.
-✍️ Dr Prema Pangi 
#ಪ್ರೇಮಾ _ಪಾಂಗಿ,#ಷಣ್ಮುಖ_ಶಿವಯೋಗಿಗಳು
#ತಾರಕಾಕೃತಿ_ನಕಾರಪ್ರಣಮ_ಆಧಾರಚಕ್ರ,

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma