ಅಣುಚಕ್ರ
ನವಸ್ಥಲಗಳ ನವಲಿಂಗಗಳು
ಆಧಾರ ಚಕ್ರದ ಆಚಾರಲಿಂಗ, ಗುರುಲಿಂಗ, ಮಣಿಪೂರಕ ಚಕ್ರದ ಶಿವಲಿಂಗ, ಅನಾಹತ ಚಕ್ರದ ಜಂಗಮಲಿಂಗ, ವಿಶುಧ್ಧಿ ಚಕ್ರದ ಪ್ರಸಾದಲಿಂಗ, ಆಜ್ಞಾಚಕ್ರದ ಮಹಾಲಿಂಗ
ಸಹಸ್ರಾರು ಚಕ್ರದ ನಿಷ್ಕಲಲಿಂಗ, ಶಿಖಾ ಚಕ್ರದ ನಿಶೂನ್ಯಲಿಂಗ, ಪಶ್ಚಿಮ ಚಕ್ರದ ನಿರಂಜನಲಿಂಗ
ಇವು ಶಿವಯೋಗದ ನವಚಕ್ರದ
ನವಲಿಂಗಗಳು. ಯೋಗ ಧಾರಣೆಯ ನವಹಂತಗಳು ಎನ್ನಬಹುದು.
ಇವುಗಳ ನಂತರ ಬರುವುದೇ ಅಣುಚಕ್ರದ ಅಣುಲಿಂಗ. ಇದು ನಾದಬಿಂದುಕಳಾತೀತ ಬಯಲು.
ಚಕ್ರ : ಅಣುಚಕ್ರ
ಲಿಂಗ : ಅಣುಲಿಂಗ
(ಪರಾತ್ಪರ ನಿಜಜಂಗಮಲಿಂಗಸ್ವರೂಪ
ಸರ್ವಚೈತನ್ಯಾಧಾರಸ್ವರೂಪವಾದ ಅಣುಲಿಂಗ)
ಸ್ಥಲ: ಸಹಜ ಸ್ಥಲ
ಸ್ಥಳ: ಪರಮಕೈಲಾಸದ ಚಿದಾಕಾಶಮಂಡಲದಲ್ಲಿಯ
ಚೌಕಮಂಟಪದಲ್ಲಿಯ ನವರತ್ನ ಖಚಿತ ಶೂನ್ಯಸಿಂಹಾಸನಪೀಠ
ತತ್ವ: ಪರತತ್ವ
ಅಧಿದೇವತೆ : ನಿಃಕಲಪರಬ್ರಹ್ಮಮೂರ್ತಿ
ಪ್ರಭೆ: ಅನಂತಕೋಟಿ ಸೂರ್ಯಚಂದ್ರಾಗ್ನಿಪ್ರಭೆ
ತನುತ್ರಯ, ಮನತ್ರಯ, ಭಾವತ್ರಯ, ಆತ್ಮತ್ರಯ, ಪ್ರಾಣತ್ರಯ, ಗುಣತ್ರಯ, ಅವಸ್ಥಾತ್ರಯ, ತತ್ವತ್ರಯ, ಕರಣತ್ರಯ, ಗುಣತ್ರಯ, ಅವಸ್ಥಾತ್ರಯ, ತತ್ವತ್ರಯ,
ಕರಣತ್ರಯ, ಹಂಸತ್ರಯದ ನಂತರದ ತ್ರಯ
ಚಿತ್ತ: ನಿಶ್ಚಲಚಿತ್ತ
ಶಿವಯೋಗದ ಧಾರಣಸಾಧನೆಗೆ ಅಂತರಂಗದಲ್ಲಿ ನಾಲ್ಕು ಸ್ಥಲಗಳನ್ನು ಪರಿಚಯಿಸುತ್ತಾರೆ -
ಬ್ರಹ್ಮರಂಧ್ರ, ಭ್ರೂಮಧ್ಯ, ನಾಶಿಕಾಗ್ರ ಮತ್ತು ಚೌಕಮಧ್ಯ. ಬ್ರಹ್ಮರಂದ್ರವೆಂದರೆ ಸಹಸ್ರಾರ ಚಕ್ರ, ಭ್ರೂಮಧ್ಯ ವೆಂದರೆ ಆಜ್ಞಾ ಚಕ್ರ. ನಾಶಿಕಾಗ್ರವೆಂದರೆ ಮೂಗಿನ ತುದಿಯನ್ನು ದ್ರಿಷ್ಟಿಸುವುದು ಶಿಖಾಚಕ್ರ. ಈ ಮೂರೂ ಕೂಡುವ ಸ್ಥಳವೇ ಚೌಕಮಧ್ಯ. ಅಲ್ಲಿಯ ಶೂನ್ಯ ಸಿಂಹಾಸನದ ಮೇಲೆ ಅಣುಚಕ್ರದಲ್ಲಿ ಅಣುಲಿಂಗ ವಿರಾಜಮಾನವಾಗಿದೆ.
* ಅಣುಚಕ್ರದ ವಚನಗಳು*:
#ಅಯ್ಯ, ತಾರಕಾಕೃತಿ ಮೊದಲಾಗಿ ನವಾಕೃತಿಗಳು,
ಅಯ್ಯ, ನಕಾರಪ್ರಣಮ ಮೊದಲಾಗಿ ನವಪ್ರಣಮಗಳು,
ಅಯ್ಯ, ಭ್ರಮರನಾದ ಮೊದಲಾಗಿ ನವನಾದಗಳು,
ಆಧಾರಚಕ್ರ ಮೊದಲಾಗಿ ನವಚಕ್ರಗಳು,
ಪೀತವರ್ಣ ಮೊದಲಾಗಿ ನವವರ್ಣಗಳು,
ಭಕ್ತಿಸ್ಥಲ ಮೊದಲಾಗಿ ನವಸ್ಥಲಗಳು,
ಸ್ಥೂಲತನು ಮೊದಲಾಗಿ ನವತನುಗಳು,
ಸುಚಿತ್ತಹಸ್ತ ಮೊದಲಾಗಿ ನವಹಸ್ತಗಳು,
ಅಚಾರಲಿಂಗ ಮೊದಲಾಗಿ ನವಲಿಂಗಗಳು,
ಘ್ರಾಣಮುಖ ಮೊದಲಾಗಿ ನವಮುಖಗಳು,
ಶ್ರದ್ಧಾಭಕ್ತಿ ಮೊದಲಾಗಿ ನವಭಕ್ತಿಗಳು,
ಸುಗಂಧಪದಾರ್ಥ ಮೊದಲಾಗಿ ನವಪದಾರ್ಥಗಳು,
ಸುಗಂಧಪ್ರಸಾದ ಮೊದಲಾಗಿ ನವಪ್ರಸಾದಗಳು,
ಬ್ರಹ್ಮಪೂಜಾರಿ ಮೊದಲಾಗಿ ನವಪೂಜಾರಿಗಳು,
ಬ್ರಹ್ಮ ಅಧಿದೇವತೆ ಮೊದಲಾಗಿ ನವ ಅಧಿದೇವತೆಗಳು,
ಕರ್ಮಸಾದಾಖ್ಯ ಮೊದಲಾಗಿ ನವಸಾದಾಖ್ಯಗಳು,
ಸತ್ತುವೆಂಬ ಲಕ್ಷಣ ಮೊದಲಾಗಿ ನವಲಕ್ಷಣಗಳು,
ಪರವೆಂಬ ಸಂಜ್ಞೆ ಮೊದಲಾಗಿ ನವಸಂಜ್ಞೆಗಳು,
ಪೂರ್ವದಿಕ್ಕು ಮೊದಲಾಗಿ ನವದಿಕ್ಕುಗಳು,
ಋಗ್ವೇದ ಮೊದಲಾಗಿ ನವವೇದಗಳು,
ಚಿತ್ಪೃಥ್ವಿ ಮೊದಲಾಗಿ ನವ ಅಂಗಗಳು,
ಜೀವಾತ್ಮ ಮೊದಲಾಗಿ ನವ ಆತ್ಮರು,
ಕ್ರಿಯಾಶಕ್ತಿ ಮೊದಲಾಗಿ ನವಶಕ್ತಿಯರು,
ನಿವೃತ್ತಿಕಲೆ ಮೊದಲಾಗಿ ನವಕಲೆಗಳು,
ಇಂತು ಇಪ್ಪತ್ತುನಾಲ್ಕು ಸಕೀಲಂಗಳು
ನವವಿಧ ತೆರದಿಂದ ಇನ್ನೂರ ಹದಿನಾರು ಸಕೀಲು ಮೊದಲಾದ
ಸಮಸ್ತ ಕ್ಷೇತ್ರಂಗಳನೊಳಕೊಂಡು
ಎನ್ನ ಅಣುಚಕ್ರವೆಂಬ ಪರಮಕೈಲಾಸ ಚಿದಾಕಾಶಮಂಡಲದ
ವರ ಚೌಕಮಂಟಪ ನವರತ್ನ ಖಚಿತ ಶೂನ್ಯಸಿಂಹಾಸನಪೀಠದಲ್ಲಿ
ಮೂರ್ತಿಗೊಂಡಿರ್ದ ಪರಾತ್ಪರ ನಿಜಜಂಗಮಲಿಂಗಸ್ವರೂಪ
ಸರ್ವಚೈತನ್ಯಾಧಾರಸ್ವರೂಪವಾದ ಅಣುಲಿಂಗಜಂಗಮವೆ
ಪರತತ್ವ ನಿಃಕಲಪರಬ್ರಹ್ಮಮೂರ್ತಿ ಲಿಂಗಜಂಗಮಪ್ರಸಾದವೆಂದು
ತನುತ್ರಯ, ಮನತ್ರಯ, ಭಾವತ್ರಯ, ಆತ್ಮತ್ರಯ,
ಪ್ರಾಣತ್ರಯ, ಗುಣತ್ರಯ, ಅವಸ್ಥಾತ್ರಯ, ತತ್ವತ್ರಯ,
ಕರಣತ್ರಯ, ಗುಣತ್ರಯ, ಅವಸ್ಥಾತ್ರಯ, ತತ್ವತ್ರಯ,
ಕರಣತ್ರಯ, ಹಂಸತ್ರಯಂಗಳ ಪೂರ್ಣ ಮಡಿಮಾಡಿ,
ನಿರ್ನಾಮವೆಂಬ ಜಲದಿಂ ಮಜ್ಜನಕ್ಕೆರದು,
ನಿಃಕರಣವೆಂಬ ಗಂಧವ ಧರಿಸಿ, ನಿಃಸಂಗವೆಂಬಕ್ಷತೆಯನಿಟ್ಟು,
ನಿಃಪರಿಪೂರ್ಣವೆಂಬ ಪುಷ್ಪದಮಾಲೆಯ ಧರಿಸಿ,
ನಿರುಪಾಧಿಕವೆಂಬ ಧೂಪವ ಬೀಸಿ, ನಿಃಕಳೆಯೆಂಬ ಜ್ಯೋತಿಯ ಬೆಳಗಿ,
ನಿಶ್ಚಲವೆಂಬ ವಸ್ತ್ರವ ಹೊದ್ದಿಸಿ, ಪರಮನಿಜಾಭರಣವ ತೊಡಿಸಿ,
ನಿಃಶೂನ್ಯವೆಂಬ ನೈವೇದ್ಯವನರ್ಪಿಸಿ,
ನಿರಾವಯವೆಂಬ ತಾಂಬೂಲವನಿತ್ತು,
ಇಂತೀ ಅಣುಲಿಂಗಜಂಗಮಪ್ರಸಾದಕ್ಕೆ
ಅಷ್ಟವಿಧಾರ್ಚನೆಯಂ ಮಾಡಿ,
ಅನಂತಕೋಟಿ ಸೂರ್ಯಚಂದ್ರಾಗ್ನಿಪ್ರಭೆಯಂತೆ ಬೆಳಗುವ,
ಅಣುಲಿಂಗಜಂಗಮಪ್ರಸಾದವನ್ನು ಅನುಮಿಷದೃಷ್ಟಿಯಿಂ ನಿರೀಕ್ಷಿಸಿ,
ಉನ್ಮನಾಗ್ರದಲ್ಲಿ ಸಂತೋಷಂಗೊಂಡು
ಆ ಅಣುಲಿಂಗಜಂಗಮಪ್ರಸಾದಪೂಜೆಯ ಸಮಾಪ್ತವ ಮಾಡಿ,
ಅನಂತಕೋಟಿ ಮಹಾಮಂತ್ರಂಗಳಿಂದ ನಮಸ್ಕರಿಸಿ,
ಆ ಅಣುಲಿಂಗಜಂಗಮಪ್ರಸಾದವೆ ತಾನೆಂದರಿದು ಏಕತ್ವದಿಂ,
ನಿಶ್ಚಲಚಿತ್ತದೊಳ್ ಕೂಡಿ ಉಭಯವಳಿದು ಇಹಪರಂಗಳ ಹೊದ್ದದೆ,
ಕನ್ನಡಿಯ ಪ್ರತಿಬಿಂಬದಂತೆ ಸರ್ವಸಂಗಪರಿತ್ಯಾಗವಾಗಿ,
ನಿಜಾಚರಣೆಯಲ್ಲಿ ಆಚರಿಸಬಲ್ಲಾತನೆ ದಶವಿಧಲಿಂಗಜಂಗಮಸಂಗ
ಭಕ್ತಿಪ್ರಸಾದವುಳ್ಳ ಅನಾದಿ ಅಖಂಡ ಚಿಜ್ಜ್ಯೊತಿ ಸದ್ಭಕ್ತ ಜಂಗಮ ನೋಡ
ಸಂಗನಬಸವೇಶ್ವರ. / 27
#ಬಚ್ಚಬರಿಯ ಬಯಲೊಳಗೊಂದು ಅಚ್ಚ ಅಂಕುರ ಹುಟ್ಟಿ ಅಣುಚಕ್ರವೆನಿಸಿತ್ತು. ಆ ಅಣುಚಕ್ರದಿಂದಾಯಿತ್ತು ಪಶ್ಚಿಮಚಕ್ರ. ಆ ಪಶ್ಚಿಮಚಕ್ರದಿಂದಾಯಿತ್ತು ಶಿಖಾಚಕ್ರ. ಆ ಶಿಖಾಚಕ್ರದಿಂದಾಯಿತ್ತು ಬ್ರಹ್ಮಚಕ್ರ. ಆ ಬ್ರಹ್ಮಚಕ್ರದಿಂದಾಯಿತ್ತು ಆಜ್ಞಾಚಕ್ರ. ಆ ಆಜ್ಞಾಚಕ್ರದಿಂದಾಯಿತ್ತು ವಿಶುದ್ಧಿಚಕ್ರ. ಆ ವಿಶುದ್ಧಿಚಕ್ರದಿಂದಾಯಿತ್ತು ಅನಾಹತಚಕ್ರ. ಆ ಅನಾಹತಚಕ್ರದಿಂದಾಯಿತ್ತು ಮಣಿಪೂರಕಚಕ್ರ. ಆ ಮಣಿಪೂರಕಚಕ್ರದಿಂದಾಯಿತ್ತು ಸ್ವಾದ್ಥಿಷ್ಠಾನಚಕ್ರ. ಆ ಸ್ವಾದ್ಥಿಷ್ಠಾನಚಕ್ರದಿಂದಾಯಿತ್ತು ಆಧಾರಚಕ್ರ. ಆ ಆಧಾರಚಕ್ರಕ್ಕೆ ಚತುರ್ದಳ. ಆ ಚತುರ್ದಳದಲ್ಲಿ ಚತುರಕ್ಷರಂಗಳು. ಆ ಚತುರಕ್ಷರಂಗಳ ಮಧ್ಯ ಬೀಜಾಕ್ಷರವೇ ನಕಾರಪ್ರಣವ. ಆ ನಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಆಚಾರಲಿಂಗ. ಅದರಿಂದ ಮೇಲೆ ಸ್ವಾದ್ಥಿಷ್ಠಾನಚಕ್ರವಿರ್ಪುದು. ಆ ಚಕ್ರಕ್ಕೆ ಷಡುದಳ. ಆ ಷಡುದಳಂಗಳಲ್ಲಿ ಷಡಕ್ಷರಂಗಳು. ಆ ಷಡಕ್ಷರಂಗಳ ಮಧ್ಯ ಬೀಜಾಕ್ಷರವೇ ಮಕಾರಪ್ರಣವ. ಆ ಮಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಗುರುಲಿಂಗ. ಅದರಿಂದ ಮೇಲೆ ಮಣಿಪೂರಕಚಕ್ರವಿರ್ಪುದು. ಆ ಚಕ್ರಕ್ಕೆ ದಶದಳ. ಆ ದಶದಳಂಗಳಲ್ಲಿ ದಶಾಕ್ಷರಂಗಳು. ಆ ದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶಿಕಾರಪ್ರಣವ. ಆ ಶಿಕಾರ ಪ್ರಣವ ಪೀಠದ ಮೇಲೆ ಬೆಳಗುತಿರ್ಪುದು ಶಿವಲಿಂಗ. ಅದರಿಂದ ಮೇಲೆ ಅನಾಹತಚಕ್ರವಿರ್ಪುದು. ಆ ಚಕ್ರಕ್ಕೆ ದ್ವಾದಶದಳ. ಆ ದ್ವಾದಶದಳಂಗಳಲ್ಲಿ ದ್ವಾದಶಾಕ್ಷರಂಗಳು. ಆ ದ್ವಾದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ವಕಾರಪ್ರಣವ. ಆ ವಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಜಂಗಮಲಿಂಗ. ಅದರಿಂದ ಮೇಲೆ ವಿಶುದ್ಧಿಚಕ್ರವಿರ್ಪುದು. ಆ ಚಕ್ರಕ್ಕೆ ಷೋಡಶದಳ. ಆ ಷೋಡಶದಳಂಗಳಲ್ಲಿ ಷೋಡಶಾಕ್ಷರಂಗಳು. ಆ ಷೋಡಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಯಕಾರಪ್ರಣವ. ಆ ಯಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಪ್ರಸಾದಲಿಂಗ. ಅದರಿಂದ ಮೇಲೆ ಆಜ್ಞಾಚಕ್ರವಿರ್ಪುದು. ಆ ಚಕ್ರಕ್ಕೆ ದ್ವಿದಳ. ಆ ದ್ವಿದಳಂಗಳಲ್ಲಿ ದ್ವಯಾಕ್ಷರಂಗಳು. ಆ ದ್ವಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಒಂಕಾರಪ್ರಣವ. ಆ ಓಂಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಮಹಾಲಿಂಗ. ಅದರಿಂದ ಮೇಲೆ ಬ್ರಹ್ಮಚಕ್ರವಿರ್ಪುದು. ಆ ಚಕ್ರಕ್ಕೆ ಸಹಸ್ರದಳ. ಆ ಸಹಸ್ರದಳಂಗಳಲ್ಲಿ ಸಹಸ್ರಾಕ್ಷರಂಗಳು. ಆ ಸಹಸ್ರಾಕ್ಷರಂಗಳ ಮಧ್ಯ ಬೀಜಾಕ್ಷರವೇ ನಿಷ್ಕಲಪ್ರಣವ. ಆ ನಿಷ್ಕಲಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿಷ್ಕಲಲಿಂಗ. ಅದರಿಂದ ಮೇಲೆ ಶಿಖಾಚಕ್ರವಿರ್ಪುದು. ಆ ಚಕ್ರಕ್ಕೆ ತ್ರಿದಳ. ಆ ತ್ರಿದಳಂಗಳಲ್ಲಿ ತ್ರಯಾಕ್ಷರಂಗಳು. ಆ ತ್ರಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶೂನ್ಯಪ್ರಣವ. ಆ ಶೂನ್ಯಪ್ರಣವಪೀಠದ ಮೇಲೆ ಬೆಳಗುತಿರ್ಪುದು ಶೂನ್ಯಲಿಂಗ. ಅದರಿಂದ ಮೇಲೆ ಪಶ್ಚಿಮಚಕ್ರವಿರ್ಪುದು. ಆ ಚಕ್ರಕ್ಕೆ ಏಕದಳ. ಆ ಏಕದಳದಲ್ಲಿ ಸರ್ವರಂಜನೆಯನೊಳಕೊಂಡು ವಾಚಾತೀತವೆನಿಸುವ ನಿರಂಜನಪ್ರಣವ. ಆ ನಿರಂಜನ ಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿರಂಜನಲಿಂಗ. ಇಂತೀ ತರುವಾಯದಿಂದೆ ಆಧಾರ ಸ್ವಾದ್ಥಿಷ್ಠಾನದಲ್ಲಿ ಲಯ, ಆ ಸ್ವಾದ್ಥಿಷ್ಠಾನ ಮಣಿಪೂರಕದಲ್ಲಿ ಲಯ. ಆ ಮಣಿಪೂರಕ ಅನಾಹತದಲ್ಲಿ ಲಯ. ಆ ಅನಾಹತ ವಿಶುದ್ಧಿಯಲ್ಲಿ ಲಯ. ಆ ವಿಶುದ್ಧಿ ಆಜ್ಞೆಯಲ್ಲಿ ಲಯ. ಆ ಆಜ್ಞೆ ಬ್ರಹ್ಮಚಕ್ರದಲ್ಲಿ ಲಯ. ಆ ಬ್ರಹ್ಮಚಕ್ರ ಶಿಖಾಚಕ್ರದಲ್ಲಿ ಲಯ. ಆ ಶಿಖಾಚಕ್ರ ಪಶ್ಚಿಮಚಕ್ರದಲ್ಲಿ ಲಯ. ಆ ಪಶ್ಚಿಮಚಕ್ರ ಅಣುಚಕ್ರದಲ್ಲಿ ಲಯ. ಆ ಅಣುಚಕ್ರ ನಿರವಯಲಲ್ಲಿ ಲಯ. ಆ ನಿರವಯಲು ನಿಜವ ಕೂಡಿ ಸಹಜವಾದಲ್ಲಿ ಅಖಂಡೇಶ್ವರನೆಂಬ ಶಬ್ದ ಮುಗ್ಧವಾಯಿತ್ತು.
-- ಷಣ್ಮುಖಸ್ವಾಮಿಗಳು
#ಎಲೆ ಎಲೆ ಅಯ್ಯಾ, ನೀವು ಹೇಳಿರಯ್ಯಾ, ಎನಗೆ ಗತಿಯೇನು? ಮತಿಯೇನು? ನಿಮ್ಮಲ್ಲಿ ಸಮರಸವೆಂತು ಹೇಳಯ್ಯಾ. ಮೂರನೆಯ ಕರುಮಾಡದ ಮೇಲುವಾಗಿಲ ಮನೆಯೊಳಗಿಪ್ಪೆನೊ ನಾನು. ಚೌಕಮಧ್ಯದ ಎಂಟೆಸಳ ಮೊನೆಯ ಮೋಹರದ ನಡುವಣ ಕೋಣೆಯೊಳಗಿಪ್ಪೆನೊ ನಾನು. ಕಾಮನ ಕಟ್ಟುವ ಪಂಜರವ ಬಿಟ್ಟು ನಿಲುವೆನೊ, ಬಿಡದೆ ನಿಲುವೆನೊ? ಹೇಳು ಹೇಳಾ ನಿರ್ಣಯವ, ಎಲೆ ಕಪಿಲಸಿದ್ಧಮಲ್ಲಿನಾಥಯ್ಯಾ.
-- ಶಿವಯೋಗಿ ಸಿದ್ಧರಾಮೇಶ್ವರರು
#ಕಕ್ಷೆ ಮೊದಲಾಗಿ ಅಮಳೋಕ್ಯ ಕಡೆಯಾಗಿ ಆರು ಸ್ಥಾನ ಬಾಹ್ಯವೆಂಬೆ.
ನಾಸಿಕಾಗ್ರ ಭ್ರೂಮಧ್ಯ ಬ್ರಹ್ಮರಂಧ್ರ ಚೌಕಮಧ್ಯವೆಂದು ಈ ನಾಲ್ಕು ಸ್ಥಾನಗಳು ಅಭ್ಯಂತವಾಗಿಹವು.
ನಾಸಿಕಾಗ್ರದ ಗುರು ಭ್ರೂಮಧ್ಯವನೆಯ್ದಿದಡೆ ಭ್ರೂಮಧ್ಯಕ್ಕೆ ಲಿಂಗವಾಯಿತ್ತು.
ಭ್ರೂಮಧ್ಯದ ಲಿಂಗವನರಿತಡೆ ಬ್ರಹ್ಮರಂಧ್ರಕ್ಕೆ ಜಂಗಮವಾಯಿತ್ತು.
ಇಂತೀ ತ್ರಿವಿಧದರಿವೆ ಗದ್ಗುಗೆ. ಅದಕ್ಕೆ ಶ್ರುತಿ: ``ಗುರುಲಿಂಗ ಜಂಗಮಾಖ್ಯಾತ್ಯಂ ಮಹಾಲಿಂಗ ಚತುರ್ವಿಧಂ ಯಥಾ ಚತುರ್ವಿಧಂ ಪೀಠಂ ಚಿತ್ಕಲಾ ಪರಿಪೂಜಿತಂ||' ಇಂತೆಂಬ ಚೌಕಮಧ್ಯದಲ್ಲಿ ಮಹಾಘನವ ನೋಡುತ್ತ ನಿಬ್ಬೆರಗಾದ ನಿಜಗುಣಾ.
-- ನಿಜಗುಣಯೋಗಿಗಳು
#ನಿರಾಳದ ಅಷ್ಟದಳಕಮಲದೊಳಗೆ ನಿರಂಜನ ಚೌಕಮಧ್ಯ ನೋಡಾ. ಇದರ ಬೀಜಾಕ್ಷರದ ಭೇದವನರಿಯೆ, ನಿರಂಜನಪ್ರಣವ, ಅವಾಚ್ಯಪ್ರಣವ, ಕಲಾಪ್ರಣವ, ಆದಿಪ್ರಣವ, ಅನಾದಿಪ್ರಣವ, ಜ್ಯೋತಿಃಪ್ರಣವ, ಅಖಂಡಜ್ಯೋತಿಃಪ್ರಣವ, ಅಖಂಡಮಹಾಜ್ಯೋತಿಃಪ್ರಣವ, ಗೋಳಕಾಕಾರಪ್ರಣವ, ಅಖಂಡಗೋಳಕಾಕಾರಪ್ರಣವ. ಅಖಂಡಮಹಾಗೋಳಕಾಕಾರಪ್ರಣವ, ಇಂತೀ ನಿರಾಳದ ಅಷ್ಟದಳಕಮಲದೊಳಗೆ ನಿರಂಜನ ಚೌಕಮಧ್ಯ ನೋಡಾ. ಇದರ ಬೀಜಾಕ್ಷರದ ಭೇದವನೆನಗೆ ಕರುಣಿಸಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
-- ಉರಿಲಿಂಗಪೆದ್ದಿ ಶರಣರು
#ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖಸೆಜ್ಜೆ ಅಂಗಂಸೋಂಕೆಂಬದು; ಷಡುಸ್ಥಲದರುಶನಾದಿಗಳಿಗೆ, ಬಹಿರಂಗದಲ್ಲಿ ವೇಷಲಾಂಛನವಯ್ಯಾ.
ಅಂತರಂಗದಲ್ಲಿ ನಾಲ್ಕು ಸ್ಥಲ;
ಬ್ರಹ್ಮರಂಧ್ರ ಭ್ರೂಮಧ್ಯ ನಾಶಿಕಾಗ್ರ ಚೌಕಮಧ್ಯ, _ಇಂತೀ ಸ್ಥಾನಂಗಳನರಿಯರಾಗಿ!
ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ, ಭ್ರೂಮಧ್ಯದಲ್ಲಿ ಜಂಗಮಸ್ವಾಯತ, ನಾಶಿಕಾಗ್ರದಲ್ಲಿ ಪ್ರಸಾದಸ್ವಾಯತ, ಚೌಕಮಧ್ಯದಲ್ಲಿ ಅನುಭಾವಸ್ವಾಯತ, ಅಷ್ಟದಳಕಮಲದಲ್ಲಿ ಸರ್ವಸ್ವಾಯತ._ ಇದು ಕಾರಣ ಗುಹೇಶ್ವರಾ ನಿಮ್ಮಶರಣರು ಸದಾ ಸನ್ನಹಿತರು.
---ಅಲ್ಲಮಪ್ರಭುದೇವರು
#ಅಕಾರವೆಂಬ ಅಷ್ಟದಳಕಮಲದ ಮಧ್ಯದಲ್ಲಿಯೂ
ಉಕಾರವೆಂಬ ಚೌಕಮಧ್ಯದಲ್ಲಿಯೂ
ಮಕಾರವೆಂಬ ಮಹಾಜ್ಯೋತಿರ್ಮಯಲಿಂಗವಿಹುದು ನೋಡಾಅಪ್ರಮಾಣಕೂಡಲಸಂಗಮದೇವಾ - ಶರಣ ಬಾಲಸಂಗಯ್ಯನವರು
-✍️ Dr Prema Pangi
Comments
Post a Comment