ವಚನ ದಾಸೋಹ :ಸರ್ವಶೂನ್ಯ ಆದಿ ಅನಾದಿ ಭಕ್ತಸ್ಥಲ.
ವಚನ ದಾಸೋಹ :
ಸರ್ವಶೂನ್ಯ ಆದಿ ಅನಾದಿ ಭಕ್ತಸ್ಥಲ.
#ಸರ್ವಶೂನ್ಯ ಆದಿ ಅನಾದಿ ಭಕ್ತಸ್ಥಲ.
ನಾದ ಬಿಂದು ಮಹೇಶ್ವರಸ್ಥಲ.
ಕಳೆ ಬೆಳಗು ಪ್ರಸಾದಿಸ್ಥಲ.
ಅರಿವು ನಿರವಯವು ಪ್ರಾಣಲಿಂಗಿಸ್ಥಲ.
ಜ್ಞಾನ ಸುಜ್ಞಾನ ಶರಣಸ್ಥಲ.
ಆಗಮ್ಯದ ಐಕ್ಯಸ್ಥಲ
ಭಾವವಿಲ್ಲದ ಬಯಲು ಬಯಲಿಲ್ಲದ ಭಾವ.
ಇಂತೀ ಷಡುಸ್ಥಲದ ಕೊರಡ ಮೆಟ್ಟಿ ನಿಂದಂಗೆ ಹೆಸರಿಲ್ಲ ಕುರುಹಿಲ್ಲ ತನಗೆ ತಾನಿಲ್ಲ ಗುಹೇಶ್ವರಾ.
· ಅಲ್ಲಮ ಪ್ರಭುಗಳು
ಅರ್ಥ :
ಈ ವಚನದಲ್ಲಿ ಅಲ್ಲಮ ಪ್ರಭುಗಳು
ಷಡುಸ್ಥಲದ ಮಹತ್ವ ವಿವರಿಸುತ್ತಾ ಸಾಧಕನಂತೆಯೇ, ಹೆಸರಿಲ್ಲದ ಕುರುಹಿಲ್ಲದ ನಿರಾಲಂಬ ಪರಶಿವನು ಸಹ ಷಡುಸ್ಥಲದ ಕೊರಡ ಮೆಟ್ಟಿನಿಲ್ಲಬೇಕು ಎನ್ನುತ್ತಾರೆ. ಆ ಹೆಸರಿಲ್ಲದ ನಿರಾಕಾರ ನಿರಾಲಂಬ ನಿರ್ಗುಣನ ಷಡುಸ್ಥಲದ ಅವರೋಹಣ ಮಾರ್ಗದಿಂದ ಪ್ರಕೃತಿ ರಚನೆ ಮಾಡುತ್ತಾನೆ.
1.ಸೃಷ್ಟಿ ರಚನೆಯಲ್ಲಿ ಪರಶಿವನಿಗೆ ಸರ್ವಶೂನ್ಯ ಆದಿ ಅನಾದಿ - ಭಕ್ತಸ್ಥಲ.
2.ಸೃಷ್ಟಿ ರಚನೆಯಲ್ಲಿ ಪರಶಿವನಿಗೆ ನಾದ ಬಿಂದು - ಮಹೇಶ್ವರಸ್ಥಲ.
3. ಸೃಷ್ಟಿ ರಚನೆಯಲ್ಲಿ ಪರಶಿವನಿಗೆ ಕಳೆ ಬೆಳಗು - ಪ್ರಸಾದಿಸ್ಥಲ.
4. ಸೃಷ್ಟಿ ರಚನೆಯಲ್ಲಿ ಪರಶಿವನಿಗೆ ಅರಿವು ನಿರವಯವು - ಪ್ರಾಣಲಿಂಗಿಸ್ಥಲ.
5. ಸೃಷ್ಟಿರಚನೆಯಲ್ಲಿ ಪರಶಿವನಿಗೆ ಜ್ಞಾನ ಸುಜ್ಞಾನ - ಶರಣಸ್ಥಲ.
6. ಸೃಷ್ಟಿರಚನೆಯಲ್ಲಿ ಅಗಮ್ಯ ಪರಶಿವನಿಗೆ ಐಕ್ಯಸ್ಥಲವೆಂದರೆ - ಭಾವವಿಲ್ಲದ ಬಯಲು ; ಬಯಲಿಲ್ಲದ ಭಾವ.
ಎಂದು ಪರಶಿವನ ಕೃಪೆಯಾದ ಸೃಷ್ಟಿರಚನೆಯ ಅವರೋಹಣದ ಮಾರ್ಗ ಮತ್ತು ಷಡುಸ್ಥಲದ ಮಹತ್ವ ತಿಳಿಸಿದ್ದಾರೆ. ಭಕ್ತನದು ಆರೋಹಣ ಮಾರ್ಗವಾದರೆ, ಪರಶಿವನದು ಅವರೋಹಣ ಮಾರ್ಗ.
- ✍️Dr Prema Pangi
#ಸರ್ವಶೂನ್ಯ_ಆದಿ_ಅನಾದಿ_ಭಕ್ತಸ್ಥಲ,#ಅಲ್ಲಮ_ಪ್ರಭುಗಳು
Comments
Post a Comment