ಅದ್ವಿತೀಯ ಶಿಕ್ಷಣ ಮತ್ತು ಕಾನೂನುತಜ್ಞ ಸರ್ ಸಿದ್ದಪ್ಪ ಕಂಬಳಿ

*ಅದ್ವಿತೀಯ ಶಿಕ್ಷಣ ಮತ್ತು ಕಾನೂನುತಜ್ಞ 
ಸರ್ ಸಿದ್ದಪ್ಪ ಕಂಬಳಿ*
🌷ಕನ್ನಡದ ಕಟ್ಟಾಳು, ಕರ್ನಾಟಕ ಏಕೀಕರಣದ ರೂವಾರಿ ಸರ್ ಸಿದ್ದಪ್ಪ ಕಂಬಳಿಯವರ ಜಯಂತಿಯ ಶುಭಾಷಯಗಳು🌷🌷🌷🌷

ಇಂದು ಬ್ರಿಟಿಷ್ ಇಂಡಿಯಾ ಕಾಲದಲ್ಲಿ ಮುಂಬೈ ಶಾಸನಸಭೆಯಲ್ಲಿ ಶಿಕ್ಷಣ ಸಚಿವರಾಗಿ ಅದ್ವಿತೀಯ ಕೆಲಸ ಮಾಡಿ ಕೀರ್ತಿ ಪಡೆದ ಸರ್ ಸಿದ್ದಪ್ಪ ಕಂಬಳಿ ಅವರ ಜನ್ಮದಿನ.

ಸಿದ್ದಪ್ಪ ಕಂಬಳಿ ಹುಬ್ಬಳ್ಳಿಯಲ್ಲಿ 11 ಸಪ್ಟೆಂಬರ್ 1882ರಲ್ಲಿ ಜನಿಸಿದರು. ತಂದೆ ತೋಟಪ್ಪ ಕಂಬಳಿ. ತಾಯಿ ಗಂಗವ್ವ. ತಂದೆ ಕಂಬಳಿ ಮಾರುತ್ತಿದ್ದರಿಂದ ‘ಕಂಬಳಿ’ ಅನ್ನೋ ಅಡ್ಡ ಹೆಸರು (ಮನೆತನದ ಹೆಸರು) ಬಂತು.  ಮಗನಿಗೆ ಸಿದ್ಧಾರೂಢ (ಸಿದ್ದಪ್ಪ) ಎಂದು ಹೆಸರಿಟ್ಟರು. ಸಿದ್ದಪ್ಪ ಹುಟ್ಟಿದ ಮೂರು ವರ್ಷಗಳಲ್ಲಿ ತಂದೆ ತೀರಿಹೋದರು. ತಾಯಿ ಲಕ್ಕುಂಡಿಯಲ್ಲಿದ್ದ ಅಕ್ಕನ ಮನೆಯಲ್ಲಿ ಸಿದ್ದಪ್ಪ ಪ್ರಾಥಮಿಕ ಶಿಕ್ಷಣ ಪಡೆದರು. ಧಾರವಾಡದಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದು ಮೆಟ್ರಿಕ್‌ ಪಾಸಾದರು.  ಸ್ಟಾಲರ್‌ಶಿಪ್‌ನಿಂದ ಪುಣೆಯ ಡೆಕ್ಕನ್ ಕಾಲೇಜಿನಲ್ಲಿ BA ವ್ಯಾಸಂಗ ಮುಗಿಸಿ 1904ರಲ್ಲಿ  ಮುಂಬೈ ಸರಕಾರಿ ಕಾನೂನು ಕಾಲೇಜಿಗೆ ಸೇರಿ, ಆಗಿನ ಮುಂಬೈ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದು ತೇರ್ಗಡೆಯಾದರು. ವಕೀಲರಾಗಿ ಹುಬ್ಬಳ್ಳಿಯಲ್ಲಿ ವಕೀಲ ವೃತ್ತಿ ಆರಂಭಿಸಿದರು.
1917ರಲ್ಲಿ ಹುಬ್ಬಳ್ಳಿಯ ನಗರಸಭೆ ಸದಸ್ಯರಾದರು.
1921 ನಗರಸಭೆ ಅಧ್ಯಕ್ಷರಾದರು. 
1921 ವಕೀಲರಸಂಘದ ಅದ್ಯಕ್ಷರಾದರು.
1921 ಮುಂಬೈ ವಿಧಾನ ಪರಿಷತ್‌ಗೆ ಆಯ್ಕೆಯಾದರು.
1924ರಲ್ಲಿ ಮುಂಬೈ ವಿಧಾನ ಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾದರು.

ಅವರ ಕನ್ನಡ ಪ್ರೇಮ ಅಪ್ರತಿಮವಾದದ್ದು. ಬೆಳಗಾವಿ, ಬಿಜಾಪುರ, ನಾರ್ತ್ ಕೆನರಾ ಮತ್ತು ಧಾರವಾಡ ಪ್ರಾಂತ್ಯಗಳನ್ನು ಮುಂಬಯಿ ಪ್ರಾಂತ್ಯದಿಂದ ಕನ್ನಡ ಭಾಷಿಕರ ರಾಜ್ಯಕ್ಕೆ ಸೇರಿಸಬೇಕೆಂಬುದು ಕಂಬಳಿಯವರ ಒತ್ತಾಯವಾಗಿತ್ತು. ಅದಕ್ಕಾಗಿ ‘ಕರ್ನಾಟಕ’ ರಾಜ್ಯವನ್ನು ಸ್ಥಾಪಿಸುವಂತೆ ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದಕ್ಕೆ ಸಮರ್ಪಕವಾದ ಪ್ರತಿಕ್ರಿಯೆ ಬಾರದಿದ್ದಾಗ ‘ಕರ್ನಾಟಕ’ ಪದವನ್ನು ಅತಿ ಹೆಚ್ಚು ಬಳಸಲು ಪ್ರಯತ್ನಿಸಿದ್ದರು. ಭಾಷಾವಾರು ಪ್ರಾಂತ್ಯ ರಚನೆಗಾಗಿ ಪಟ್ಟು ಹಿಡಿದಿದ್ದ ಕಂಬಳಿ ಅದಕ್ಕಾಗಿ ಕಾಂಗ್ರೆಸ್ ಮುಖಂಡರ ಮೇಲೆ ಒತ್ತಡ ಹೇರಿದ್ದರು. 

ಅವರು ಶೋಷಿತರ ಸ್ವಾಭಿಮಾನಿ ಹೋರಾಟದ ರೂವಾರಿಯಾಗಿದ್ದರು. 1920 ರಲ್ಲಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಪ್ರಥಮವಾಗಿ ಶೋಷಿತರ ಪಕ್ಷದ ಬೃಹತ್ ಸಮಾವೇಶ ಹಮ್ಮಿಕೊಂಡರು. ಇದರ ಮುಖ್ಯ ಅತಿಥಿಗಳು ಶಾಹು ಮಹಾರಾಜರು. ಇದರ ಸಾನಿದ್ಯವನ್ನು ಹುಬ್ಬಳ್ಳಿಯ ಸಿದ್ಧಾರೂಢ ಶ್ರೀ ಗಳು ವಹಿಸಿದ್ದರು.

1924ರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಲು ಗಾಂಧೀಜಿಯವರು ಬೆಳಗಾವಿಗೆ ಬಂದಾಗ ಧಾರವಾಡದ ರೇಲ್ವೆ ನಿಲ್ದಾಣದಲ್ಲಿ ಇಳಿದು ಸಿದ್ದಪ್ಪ ಕಂಬಳಿಯವರನ್ನು ನನಗೆ ಭೆಟ್ಟಿ ಮಾಡಿಸಿ ಎಂದಿದ್ದರು. ಇದರಿಂದ ಸಿದ್ದಪ್ಪ ಕಂಬಳಿಯವರ ವ್ಯಕ್ತಿತ್ವದ ಮಹತ್ವ ಅರಿವಾಗದೇ ಇರುವುದಿಲ್ಲ. 

1930 ರಲ್ಲಿ ಲಂಡನ್ ದುಂಡು ಮೇಜಿನ ಪರಿಷತ್ತಿಗೆ ಆಹ್ವಾನಿತರಾದರು.

1932 ರ ಪೂನಾ ಒಪ್ಪಂದದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಿಗೆ ಬೆಂಬಲ ಕೊಟ್ಟರು.

1933 ರಲ್ಲಿ ಮುಂಬೈ ಸರ್ಕಾರದ ಸಚಿವ ಸಂಪುಟದಲ್ಲಿ 7 ಖಾತೆಗಳಿಗೆ ದಕ್ಷವಾಗಿ ಮಂತ್ರಿಸ್ಥಾನವನ್ನು ನಿರ್ವಹಿಸಿದ ಏಕೈಕ ವ್ಯಕ್ತಿ ಎನಿಸಿದರು. 

ಅರಟಾಳ ರುದ್ರಗೌಡರು ಧಾರವಾಡದಲ್ಲಿ ಕರ್ನಾಟಕ ಕಾಲೇಜು ಆರಂಭಿಸಲು ಅವರಿಗೆ ನೇರವಾದರು. ಶಿಕ್ಷಕರ ಟ್ರೆನಿಂಗ ಕಾಲೇಜು ಮತ್ತು ಕರ್ನಾಟಕ ಕಾಲೇಜನ್ನು ಬ್ರಿಟಿಷ್‌ ಸರಕಾರ ಅನುದಾನ ಸ್ಥಗಿತಗೂಳಿಸಿ ಮುಚ್ಚಲು ಪ್ರಯತ್ನಿಸಿದಾಗ ಅವರೊಂದಿಗೆ ವಾದ ಮಂಡಿಸಿ ಇವೆರಡು ಸಂಸ್ಥೆಗಳನ್ನು ಉಳಿಸಿದರು. 

ಕಂಬಳಿಯವರು ಅಂಬೇಡ್ಕರರೊಂದಿಗೆ ನಿಕಟ ಸಂಬಂಧ ಹೊಂದಿದ್ದರು.
ಅಂಬೇಡ್ಕರ್  ಅವರು ಕಾನೂನು ಕಾಲೇಜಿನ ಲೆಕ್ಚರರ್ ಆಗಬೇಕು ಎಂದಾಗ ಅವರನ್ನು ಆ ಹುದ್ದೆಗೆ ನೇಮಿಸಿ, ಮರುದಿನವೇ ಸೆಕ್ರೇಟರಿಯೇಟ್‌ ನಿಂದ ಆದೇಶ ಹೊರಡಿಸಿದರು. 
1932 Poona Act ನಲ್ಲಿ, ಗಾಂಧಿಜೀ ಮತ್ತು ಅಂಬೇಡ್ಕರ್ ಅವರ ಮಧ್ಯದ ಪ್ರಾತಿನಿಧ್ಯದ ಪ್ರಶ್ನೆಯಲ್ಲಿ ಅಂಬೇಡ್ಕರ್ ರಿಗೆ ಸಂಪೂರ್ಣ ಬೆಂಬಲಕೊಟ್ಟು ಅವರ ಬೆಂಗವಲಾಗಿ ನಿಂತರು. ಸಿದ್ದಪ್ಪ ಕಂಬಳಿಯವರೊಂದಿಗೆ ಸಮಾಲೋಚನೆ ಮಾಡಿ ತಮ್ಮ ನಿರ್ಣಯ ತೆಗೆದುಕೊಳ್ಳುತ್ತಾರೆ.

2 ಬಾರಿ ವೀರಶೈವ ಮಹಾಸಭೆಯ ಅಧಿವೇಶನದ ಅಧ್ಯಕ್ಷರಾಗಿದ್ದರು.

1933 ರಲ್ಲಿ ಕೆ ಎಲ್ ಇ  ಸಂಸ್ಥೆಯ ಪ್ರಥಮ ಕಾಲೇಜ್ ಲಿಂಗರಾಜ ಪದವಿ ಮಹಾವಿದ್ಯಾಲಯ ಸ್ಥಾಪನೆಗೆ ಕೆಲವರು ಮಾಡಿದ ಉದ್ದೇಶಪೂರ್ವಕ ಅಡೆತಡೆಗಳನ್ನು ನಿವಾರಣೆ ಮಾಡಿಕೊಟ್ಟರು.

1934 ರಲ್ಲಿ ಮೂರು ವಿಶ್ವವಿದ್ಯಾಲಯಗಳ ಸ್ಥಾಪನೆ -  ಕರ್ನಾಟಕ, ಗುಜರಾತ್, ಮತ್ತು ಪೂನಾ (ಈಗಿನ ಪುಣೆ) ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಬುನಾದಿ ಹಾಕಿದರು. 

ಅವರ ಹಿಂದುಳಿದ ಸಮಾಜದ ಕಳಕಳಿ ಅನುಪಮವಾಗಿತ್ತು. ಇವರ ಜನಪ್ರಿಯತೆಯನ್ನು ತಿಳಿದ ಮಹಾತ್ಮ ಗಾಂಧಿಯವರು  ಸಿದ್ದಪ್ಪನವರನ್ನು ಭೇಟಿಯಾದಾಗ, ''ನಾನು ಕೈಗೊಂಡಿರುವ ರಾಷ್ಟ್ರದ ಕಾರ್ಯದಲ್ಲಿ ನೀವು ಜತೆಯಾಗಬೇಕು,'' ಎಂದಾಗ,  ಕಂಬಳಿ ಯವರು  "ಶೋಷಣೆಗೆ ಒಳಗಾದ ಜನರನ್ನು ಮೇಲಕ್ಕೆತ್ತಿ, ಸ್ಥಾನ-ಮಾನ ಒದಗಿಸುವುದೇ ನನ್ನ ಮೊದಲ ಕಾರ್ಯ" ಎಂದಿದ್ದರು.

ಸಿದ್ಧಪ್ಪನವರ ಪಕ್ಷನಿಷ್ಟೆಯು ಆಗಾಧವಾಗಿತ್ತು. ಪಟೇಲ್ ರು ಕೈ ಹಿಡಿದು ಕರೆದರೂ  ತಮ್ಮ ಶೋಷಿತರ ಪಕ್ಷ ತೊರೆದು ಕಾಂಗ್ರೆಸ್ ಸೇರಲಿಲ್ಲ .
1937 ರ ಮುಂಬೈ ವಿಧಾನ ಸಭೆ ಚುನಾವಣೆಯಲ್ಲಿ ನೆಹರೂ ಮತ್ತು ಪಟೇಲರು ಇವರ ಶೋಷಿತರ ಪಕ್ಷದ ವಿರುಧ್ಧ ಪ್ರಚಾರ ಮಾಡಿದರೂ ತಮ್ಮ ಅಪಾರ ಜನಪ್ರಿಯತೆ ಮತ್ತು ಜನಬಲದಿಂದ ಗೆಲುವು ಸಾಧಿಸಿದರು.

1930 ರಲ್ಲಿ ಸಿದ್ದಪ್ಪ ಕಂಬಳಿಯವರಿಗೆ "ಜಸ್ಟಿಸ್ ಆಪ್ ಪೀಸ್" ಪ್ರಶಸ್ತಿ.
  
1939 ರಲ್ಲಿ  ಶಿಕ್ಷಣಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ  "ಸರ್" ಪದವಿ.
 
ಕರ್ನಾಟಕ ಏಕೀಕರಣಕ್ಕೆ ಇವರ ಕೊಡುಗೆ ಅಪಾರ. ಕರ್ನಾಟಕ ಏಕೀಕರಣ ಪರಿಷತ್ತಿನ ಪ್ರಥಮ ಮತ್ತು 1926 ರ ದ್ವಿತೀಯ ಅಧಿವೇಶನದ ಅಧ್ಯಕ್ಷರಾಗಿ ಕರ್ನಾಟಕ ಏಕೀಕರಣಕ್ಕೆ ಗಟ್ಟಿಯಾದ ಬುನಾದಿಯನ್ನು ಹಾಕಿದರು.
 ಸರ್ ಸಿದ್ದಪ್ಪ ಕಂಬಳಿಯವರು.
1959 ರಲ್ಲಿ ಏಪ್ರಿಲ್ 26ರಂದು ನಿಧನರಾದರು. ಇವರ ಮೂರ್ತಿ ಹುಬ್ಬಳ್ಳಿ ಕಾರ್ಪೊರೇಷನ್ ಚಿಟಗುಪ್ಪಿ ಆಸ್ಪತ್ರೆಯ ಆವರಣದಲ್ಲಿ ಇದೆ.
-✍️ Dr Prema Pangi

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma