ಚೆನ್ನಬಸವಣ್ಣನವರ ಜಯಂತಿ
🌷ಲಿಂಗಾಯತ ಧರ್ಮದ ಷಟ್ಸ್ತಲ ಚಕ್ರವರ್ತಿ ಶೂನ್ಯಪೀಠದ 2 ನೇ ಅಧ್ಯಕ್ಷ, ಚಿನ್ಮಯಜ್ಞಾನಿ, ವೈರಾಗ್ಯಮೂರ್ತಿ ಚೆನ್ನಬಸವೇಶ್ವರರ ಜನ್ಮ ಜಯಂತಿಯ ಶುಭಾಶಯಗಳು.🌷🌷🌷🌷 ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಲಿಂಗಾಯತ ಧರ್ಮದ ಸಪ್ತ ಪ್ರಮಥರಲ್ಲಿ ಒಬ್ಬರು. ಚೆನ್ನಬಸವಣ್ಣನವರು ಗುರು ಬಸವಣ್ಣನವರ ಅಕ್ಕ ನಾಗಲಾಂಬಿಕೆ ಮತ್ತು ಶಿವದೇವರಿಗೆ ಪುತ್ರನಾಗಿ ಕ್ರಿ. ಶ. ೧೧೪೪ ರಲ್ಲಿ ಜನಿಸಿದರು. ಚೆನ್ನಬಸವಣ್ಣನವರು ಅತಿ ಚಿಕ್ಕ ವಯಸ್ಸಿನಲ್ಲೇ ಅಸಾಧರಣ ಕಾರ್ಯಗಳನ್ನು ಮಾಡಿದ ಮಹಾಪುರುಷರಾಗಿದ್ದಾರೆ. ಚನ್ನಬಸವಣ್ಣನವರ ಜನ್ಮಸ್ಥಳ ಕಲ್ಯಾಣವೆಂದು ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ ಮತ್ತು ಇತರ ಕೃತಿಗಳು ಹೇಳುತ್ತವೆ. ಸಿಂಗಿರಾಜ ಪುರಾಣ 'ಅಮಲಬಸವ ಚಾರತ್ರ್ಯ'ದಲ್ಲಿ ಅಕ್ಕನಾಗಮ್ಮನ ಪತಿ ಶಿವದೇವ ಚನ್ನಬಸವಣ್ಣನ ತಂದೆ ಎಂದು ಉಲ್ಲೇಖಿಸಿದೆ. ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದ ಶರಣರಲ್ಲಿ ಅಗ್ರಗಣ್ಯನಾಗಿ ಆಚಾರ್ಯ ಪುರುಷನಾಗಿ ಬೆಳಗಿದ ಚೆನ್ನಬಸವಣ್ಣನವರು ಭಕ್ತಿ, ಜ್ಞಾನ, ವೈರಾಗ್ಯಮೂರ್ತಿಯಾಗಿ ಕಂಗೊಳಿಸಿದ್ದಾರೆ. ಚೆನ್ನಬಸವಣ್ಣನವರು ಅವಿರಳಜ್ಞಾನಿ, ಸದಮಲಜ್ಞಾನಿ, ಷಟುಸ್ಥಲ ಸ್ಥಾಪನಾಚಾರ್ಯ, ದಿವ್ಯಗುಣ ಸಂಪನ್ನ ಎಂದು ಕಲ್ಯಾಣದ ಶರಣರಿಂದ ಬಿರುದು ಪಡೆದವರು. ಗುರು ಬಸವಣ್ಣನವರ ಸೋದರಳಿಯ ಚೆನ್ನಬಸವಣ್ಣನವರು ಕೂಡಲಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರತಿಭಾಸಂಪನ್ನನಾದರು. ಕಲ್ಯಾಣಕ್ಕೆ ಬಂದ ನಂತರ ಬಸವಣ್ಣನವರ ...